ಒಟ್ಟು 4 ಕಡೆಗಳಲ್ಲಿ , 1 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ಭಾಸ್ಕರ ಪುಣ್ಯ ಪ್ರಭೆಯ ಕೂಡಿ ಧ್ರುವ ಪುಣ್ಯ ಎದುರಿಟ್ಟು ಬಂದು ಮುಂದೆ ಕಣ್ಣಾರೆ ಕಂಡು ತ್ರಾಹಿ ಎಂದೆ ಸಣ್ಣ ದೊಡ್ಡದರೊಳು ವಸ್ತು ಒಂದೆ ಬಣ್ಣ ಬಣ್ಣಾ ಗೀಹ್ಯದರಿಂದೆ 1 ಹೇಳಬಾರದಯ್ಯ ನಿಜವರ್ಮ ಕೇಳಿ ಶ್ರೀಸದ್ಗುರು ಪಾದಧರ್ಮ ಅಳಿಯಿತು ನೋಡಿ ಪೂರ್ವ ಕರ್ಮ ಹೊಳಿಯಿತೆನ್ನೊಳು ಘನ ಬ್ರಹ್ಮ 2 ಸೋಹ್ಯ ದೋರಿ ಕೊಟ್ಟೆನಗಿಂದು ಮಹಿಪತಿಸ್ವಾಮಿ ತಾನೆ ಬಂದು ಈಹ್ಯಪರ ಪೂರ್ಣ ಕೃಪಾಸಿಂಧು ಸಾಹ್ಯ ಮಾಡುತೀಹ್ಯ ದೀನ ಬಂಧು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಣ್ಣ ಹಬ್ಬವಾಯಿತು ಎನಗಿಂದು ಧನ್ಯಧನ್ಯಗೈಸಿದ ದೀನಬಂಧು ಧ್ರುವ ತುಂಬಿತುಳುಕುತಲ್ಯದ ಬ್ರಹ್ಮಾನಂದ ಹಂಬಲಿಟ್ಟು ನೋಡನುಭವದಿಂದ ಗುಂಭಗುರತವಾಗದೇ ನಿಜಾನಂದ ನಂಬಿ ನಡಿಯಲಿಕ್ಕಿದೆ ಬಲು ಚಂದ 1 ಕಣ್ಣು ಮುಟ್ಟಿನೋಡಲು ಖೂನಗೊಟ್ಟು ಪುಣ್ಯ ಹೊಳೆಯುತಲ್ಯದೆ ಎದುರಿಟ್ಟು ಎನ್ನ ಮ್ಯಾಲೆ ಸದ್ಗುರು ದಯವಿಟ್ಟು ಚಿನ್ನುಮಯದೋರಿದ ನಿಜಗುಟ್ಟು 2 ಹೇಳಲಿನ್ನೇನದನುಭವಸುಖಾ ಥಳಥಳಗುಡುತದೆ ಕೌತುಕಾ ಕೇಳಿಕೋ ಬೇಕಿದುವೆ ಗುರುಮುಖಾ ಹೇಳಿಕುಡುವ ಮಹಿಪತಿಗುರು ಥೋಕಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುಭಕ್ತನೆ ಭಕ್ತ ಮೂರುಗುಣಕೆ ತಾ ವಿರಕ್ತ ಧ್ರುವ ನಾದಬಿಂದು ಕಳೆಯು ಭೇದಿಸಿದವಗ್ಯಾತರ ಚಳಿಯು ಆದಿತತ್ವದ ಕಳೆಯು ಎದುರಿಟ್ಟು ದಾವನ ಬಳೆಯು 1 ಆಶಾಪಾಶಕೆ ಸಿಲ್ಕಿ ಮೋಸಹೋಗನು ಎಂದಿಗೆ ಹೋಕ ವಾಸುದೇವನ ಸಖ ಭಾಸುತಿಹುದು ಆವಾಗನೇಕ 2 ಅಲ್ಪನಲ್ಲವೆ ತಾನು ಕಲ್ಪತರು ಕಾಮಧೇನು ಕಲ್ಪನೇಕರಹಿತನು ನಿಲುಕಡೆ ಕಂಡಿಹ್ಯ ನೆಲೆನಿಭನು 3 ಯೋಗಿ ನಾ ನೀನೆಂಬುದು ನುಡಿಯಲಿ ತ್ಯಾಗಿ ಭೋಗಿ ಜನನ ಮರಣ ಕಳೆದಿಹ ನೀಗಿ4 ಅಮೃತ ಸ್ವಾದ ನೀಡುವ ಭಯ ನಿಜವಾದ ಬೋಧ ಪಾದ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಧನ್ಯ ಧನ್ಯವಾಯಿತು ಎನ್ನ ಜನುಮ ತನ್ನಿಂದ ತಾನೊಲಿದ ಘನ ಮಹಿಮ ಎನ್ನೊಳಗೆ ದೋರಿತಾನಂದೊ ಬ್ರಹ್ಮ ಕಣ್ಣಾರೆ ಕಂಡೆನು ಸದ್ಗುರು ಧರ್ಮ 1 ಬ್ರಹ್ಮಸುಖ ಹೊಳೆಯಿತು ಸಾಧುಸಂಗ ಚುಮು ಚುಮು ಕೊಡುತಿದೆಕೊ ಸರ್ವಾಂಗ ಧಿಮಿ ಧಿಮಿಗುಡುತ ತಾಲ ಮೃದಂಗ ಸಮಾರಂಭವಾಯಿತು ಬಾಹ್ಯಂತರಂಗ 2 ಎದುರಿಟ್ಟು ಬಂತು ಪುಣ್ಯ ಪೂರ್ವಾರ್ಜಿತ ಒದಗಿ ಕೈಗೂಡಿತೆನಗೆ ತ್ವರಿತ ಸಾಧಿಸಿತು ಮಹಿಪತಿಯ ಮನೋರಥ ಸದ್ಗುರು ಕೃಪೆಯಾಯಿತು ತಾ ಸದೋದಿತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು