ಬಡಿ ಜಾಗಟೆ ಹೊಡಿ ನಗಾರಿ ಪಿಡಿ ತುತ್ತೂರಿಯನು
ನಡಿ ಮುಂದೆ ಅಡಿ ಇಡು ಹೆದರದೆ ನುಡಿ ಹರಿಯನಾಮ ಪ.
ಬಿಗಿ ನಡುವನು ಮುಗಿ ಕೈಯ್ಯನು ಒಗಿ ದುರಭಿಮಾನ
ಚಿಗಿ ಭಕ್ತಿರಸ ಮುಖದಲಿ ನಗಿ ತೋರು ನಯದಿ 1
ಪರಿ ಪರಿ ಕರಿ ಕುಣಿಸು ಕಾಲ್ಕಿರಿ ಗೆಜ್ಜೆ ಭರ ಧರಿಯಲ್ಲಿ ಮೆಟ್ಟೆ 2
ಗಟ್ಟಿ ಮಾಡಿ ಮನ ತಟ್ಟಿ ಚಪ್ಪಾಳೆ ಮೆಟ್ಟಿ ಖಳರ ಎದÉಯ
ಶ್ರೇಷ್ಠ ಮಧ್ವಮತ ಗುಟ್ಟು ದಾಸತ್ವವು ದುಷ್ಟರರಿಯರೆಂದು 3
ಶುದ್ಧ ಗುರುವು ತಂದೆ ಮುದ್ದುಮೋಹನರು ಉದ್ಧಾರವನೆ ಮಾಡಿ
ವಿದ್ಯಾನಾಮ ಅನಿರುದ್ಧಾನಂಕಿತಗಳ ಬದ್ಧಾಗೀವರೆಂದು 4
ಕೆಟ್ಟ ಕರ್ಮಗಳ ಕಟ್ಟು ಹರಿದು ಮುಕ್ತಿ ಕೊಟ್ಟು ಪೊರೆವನೆಂದು 5