ಒಟ್ಟು 9 ಕಡೆಗಳಲ್ಲಿ , 7 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎತ್ತುವೆನಾರತಿಯ ರಂಗಧಾಮನಿಗೆತ್ತುವೆನಾರತಿಯ ಪ. ಗೋಕುಲದೊಳು ಬೆಳೆದು ಆಕಳನೆಲ್ಲ ಕಾಯ್ದು ಪಾಕಶಾಸನನಿಗೆ ಪರಾಕ್ರಮ ತೋರಿದ ನೀರಗೆ 1 ಮಥುರೆಗೆ ನಡೆತಂದು ಮಾವ ಕಂಸನ ಕೊಂದು ಮಾತೆಗೆ ಮುದವಿತ್ತ ಮಧುಸೂದನ ಕೃಷ್ಣಗೆ 2 ಶೇಷಗಿರಿಯಲ್ಲಿ ವಾಸವಾಗಿರುತಿರ್ಪ ಶೇಷಭೂಷಣನುತ ವೃಷ್ಣಿವಂಶೋತ್ತಮಗೆ 3
--------------
ನಂಜನಗೂಡು ತಿರುಮಲಾಂಬಾ
ಜಯದೇವ ಜಯದೇವ ಜಯಮಹಾಂಗಿರೀಶಾ ಸ್ವಯಂಜ್ಯೋತಿ ಬೆಳಗುವೆ ಸಚ್ಚಿತ್ಸುಖತೋಷಾ ಪ ಸರ್ವರಲಿ ನೋಡಿದರೂ ನೀನಲ್ಲದೆ ಇಲ್ಲಾ ಉರ್ವಿಯಾಕಾಶ ದಶದಿಕ್ಕುಗಳೆಲ್ಲಾ ಸರ್ವೇಶ್ವರವೆಂಬದು ಸರ್ವಾಂಗದೆÉಲ್ಲಾ ಪಾರ್ವತೀಶ್ವರನೆಂಬುದು ಬಲ್ಲವನೆ ಬಲ್ಲಾ ಜಯದೇವ 1 ಸಕಲ ಸುಖದುಃಖವೆಂಬುದು ನಿನ್ನ ಲೀಲೆ ಅಖಿಲ ಅಂಡಗಳೆಂಬ ಭೋಜನಶಾಲೆ ಭಕುತಿ ಭಾಗ್ಯೆಂಬ ಜ್ಞಾನದ ದೀಪಜ್ವಾಲೆ ಪ್ರಕಟಿಸುವಂತೆ ಎತ್ತುವೆ ನಿನ್ನ ಮೇಲೆ ಜಯದೇವ 2 ಪರಿಶುದ್ಧಾತ್ಮಕದೇವಾ ನಿರುತ ನಿರ್ದೋಶಾ ಸಕಲಜನರ ಹೃದಯಕಮಲ ನಿವಾಸಾ ದುರಿತದಾರಿದ್ರ್ಯ ಭವದುಃಖವಿನಾಶಾ ಗುರು ವಿಮಲಾನಂದ ಶ್ರೀ ಮಹಾಂಗಿರೀಶಾ 3
--------------
ಭಟಕಳ ಅಪ್ಪಯ್ಯ
ದರ್ಪಣದಲಿ ಮುಖ ನೋಡಿಕೊಂಡನೆ ಪ ಮಲ್ಲಿಗೆ ಮುಗುಳಿನ ತೆರದಲಿ ಶೋಭಿಪ ಪಲ್ಲುಗಳಲೆ ಸಿರಿಯುಗಲ್ಲವು ಭೂಪತಿಯಂದದಿ ಬೃಸ್ವರಾಬಿಲ್ಲಿನ ಸೌಭಗವು1 ಶರದುದಿತಾಮಲ ತರುಣಿಕರಾರ್ಚಿತ ಸರಸಿಜದಳನಯನಾಕರುಣಪೂರ್ಣ ಕಟಾಕ್ಷ ರಕ್ಷಣ ವರಪಲ್ಲವರರಸನು 2 ರತ್ನಕುಂಡಲದ್ವಯ ಸಂಶೋಭಿತ ಸ್ತೋತ್ರಯುಗಳ ನೇಮಮಸ್ತಕದಲಿ ಮಾಣಿಕ ಮುಕುಟ ಶ್ರೀ ಉತ್ತಮ ಮುಖಧಾಮ 3 ನಿತ್ಯಾನಂದ ಚಿದಾತ್ಮಕ ಶಕ್ತನು ಭಕ್ತಕಾಮಿತದಾತಎತ್ತುವೆ ಕರಯುಗ ತವ ಕಮಲಕೆ ಚಿತ್ರ ಚರಿತ್ರ ಗಾತ್ರಾ 4 ನಾಸಕ ಚಂಪಕ ಕೋಶವು ಬಿಂಬಾಧರ ಯುಗಳದೋಷರಹಿತ ಸುರಾಹ ಸರೋಜ ಇಂದಿರೇಶ ವದನ 5
--------------
ಇಂದಿರೇಶರು
ನೀಲ ಗಗನ ನಿಭ ನಿರ್ಮಲಗಾತ್ರನೆ ಪ ಬಾಲಶಶಾಂಕನ ಪೋಲ್ವ ಸ್ವಾಮಿ ಬಾಲಶಶಾಂಕನ ಪೋಲ್ವ ನೀಲಕುಂತಳ ಪರಿಶೋಭಿತ ಫಾಲಕೆ ಕುಂಕುಮವ ಹಚ್ಚುವೆನು 1 ನಳಿನ ನಯನ ಕೋಮಲ ಕಮಲಾನನ ಚಲುವ ಕರಂಗಳ ತೋರೋ ಸ್ವಾಮಿ ನಳಿನವ ಪೋಲುವ ಚಲುವ ಕರಕೆ ನಾ ನರಿಸಿನ ಹಚ್ಚುವೆನೀಗ ಸ್ವಾಮಿ 2 ಅಂಬುಜನಾಭನೆ ಅಂಬುಧಿ ಗಂಭೀರ ಶಂಬರಾರಿ ಶತತೇಜ ಸ್ವಾಮಿ ಕಂಬುಕಂಧರ ತೋರು ಸಂಭ್ರಮದಲಿ ನಾ ಗಂಧವ ಹಚ್ಚುವೆನೀಗ ಸ್ವಾಮಿ 3 ಸುಮಶರ ಜನಕನೆ ಸುವಶರ ವೈರಿಯ ಕಾರ್ಮುಕ ಭಂಜಕ ಸ್ವಾಮಿ ಸಮ ವಿರಹಿತ ನಿನ್ನ ಕೊರಳಿಗ್ಹಾಕುವೆನೀಗ ಕುಸುಮ ಮಾಲೆಯ ನಾನು ಸ್ವಾಮಿ 4 ವಾರಿಧಿ ಚಂದ್ರಮನೆ ಧೀರ ವೀರ ದಿತಿಜಾರಿದೇವ ಶ್ರೀರಘುವೀರ ಶ್ರೀ ಕರಿಗಿರೀಶನೇ ನಿಮ ಗಾರತಿ ಎತ್ತುವೆ ಸ್ವಾಮಿ 5
--------------
ವರಾವಾಣಿರಾಮರಾಯದಾಸರು
ಪಾದ ಭಜಿಸುವೆ ಅ.ಪಜ್ಞಾನವೆಂಬೊ ನವರತ್ನದ ಮಂಟಪದ ಮಧ್ಯದಲ್ಲಿಗಾನಲೋಲನ ಕುಳ್ಳಿರಿಸಿಧ್ಯಾನದಿಂದ ಭಜಿಸುವೆ1ಭಕ್ತಿರಸವೆಂಬ ಮುತ್ತು ಮಾಣಿಕ್ಯದ ಹರಿವಾಣದಿಮುಕ್ತನಾಗಬೇಕು ಯೆಂದು ಮುತ್ತಿನಾರತಿ ಎತ್ತುವೆ 2ನಿನ್ನ ನಾನು ಬಿಡುವನಲ್ಲಎನ್ನ ನೀನು ಬಿಡಲು ಸಲ್ಲಘನ್ನ ಮಹಿಮ ವಿಜಯವಿಠ್ಠಲ ನಿನ್ನ ಭಕ್ತರ ಕೇಳೊ ಸೊಲ್ಲ 3
--------------
ವಿಜಯದಾಸ
ಮಂಗಳಾರತಿ ಎತ್ತುವೆ ಮಾರಮಣಗೆ ಪ ಅಂಗಜ ಜನಕ ಶುಭಾಂಗ ಶ್ರೀರಂಗಗೆ ಅ.ಪ ವೈರಾಜ್ಯ ಸ್ಯಾರಾಜ್ಯ ಮಹ ಪರಮೇಷ್ಠಿ ರಾಜ್ಯ ಸಾರ್ವಭೌಮ ನೀನೆಂದು 1 ವೇದೋಕ್ತ ಮಂತ್ರ ಪುಷ್ಪಾಂಜಲಿಯಿಂದ ನಿನ್ನಯ ಪಾದಕ್ಕೆರಗಿ ಪುನಃ ಪ್ರಾರ್ಥನೆಗೆಯ್ಯುತ 2 ಪಾಪಿಗಳೊಳಗತಿ ಪಾಪಿಯು ನಾನೆನ್ನ ತಾಪತ್ರಯವ ಬಿಡಿಸಿ ಕಾಪಾಡು ನೀನೆಂದು 3 ಪದಜಾನುಕರಗಳಿಂ ಉದರ ಹೃದಯದಿ ಶಿ- ರದಿ ದೃಷ್ಟ್ಯಮನಸವಚನಸಾಷ್ಟಾಂಗದಿಂ ಮಣಿದು 4 ಕಂದರ್ಪ ಕೋಟಿ ಲಾವಣ್ಯ ಸರ್ಪಶಯನ ನಮ್ಮಪ್ಪಾ ತಿಮ್ಮಪ್ಪನೆಂದು 5 ವಾಹನ ವಸ್ತೂಗಳರ್ಪಿಸಿ ಸರ್ವೋತ್ತಮ ನೀನೆಂದ್ಹೊಗಳಿ 6 ಅಪರಾಧವೆಮ್ಮಿಂದಲಾಗುವುದೆಲ್ಲ ಕ್ಷಮಿಸು ಕಪಟನಾಟಕ ಸೂತ್ರಧಾರೀ ಗುರುರಾಮವಿಠಲ 7
--------------
ಗುರುರಾಮವಿಠಲ
ಮಾನವಾತ್ಮರೆ ನಿಮ್ಮ ಮಾನಸ ಪೂಜೆಯಿಂಮಾನವನಿಗೆ ಮೋಕ್ಷ ಸಾಧಿಸೀರಿ ಪ ರತ್ನ ನಿರ್ಮಿತ ಸುಚರಿತ್ರ ಮಂಟಪವನ್ನುಸತ್ಯಭಾಮೆಯ ಪತಿಗಿತ್ತು ಪೂಜಿಸುವೆ1 ಆಸನ ನೀಡುವೆ ಶೇಷಶಯನನೆ ಇಲ್ಲಿವಾಸ ಮಾಡಿ ಎನ್ನ ಸೇವೆ ಸ್ವೀಕರಿಸು2 ಧ್ಯಾನ ಮಾಡುವೆ ನಿನ್ನ ಗಾನ ಮಾಡುವೆ ನಿನ್ನಜ್ಞಾನ ಭೂಷಣ ಶೋಭಿತಾನನಾಂಬುಜ 3 ಧೃತ ವೇಣುಗೋಪಾಲ ಬಾರೋ ಮನಸಿಗೆ ತೋರೊಮೂರುತಿ ನಿನ್ನಯ ಸಮೀರ ಸಂಸ್ತುತನೆ 4 ಅಘ್ರ್ಯ ನೀಡುವೆ ನಾನು ಅನಘ್ರ್ಯ ವಸ್ತುಗಳಿಂದಸ್ವಘ್ರ್ಯಗ್ರಹಣ ಮಾಡೋ ಭರ್ಗ ಸೇವಿತನೆ 5 ಪಾದ್ಯ ನೀಡುವೆ ವೇದ ವೇದ್ಯ ಮಹಿಮನೇ ಮುನ್ನಾವದ್ಯ ಕಳೆದು ಭವದಿಂದ ಉದ್ಧರಿಸೆನ್ನ 6 ಆಚಮನವ ನೀಡುವೆ ಹೇ ಚತುರಾನನೇಶವಾಚಾಮಗೋಚರ ಮೋಚಕ ಹೇತು 7 ಸುದತಿ ಮೋಹನ ತವಮಧುಪರ್ಕವನೀವೆ ಮುದದಿ ಸ್ವೀಕರಿಸು 8 ಮತ್ತೆ ಆಚಮನವನಿತ್ತು ಪೂಜಿಪೆ ಕರವೆತ್ತಿ ಮುಗಿವೆ ಸರ್ವಭಕ್ತ ಪೋಷಕನೆ 9 ಗಂಗೆ ಯಮುನೆ ಗೋದಾ ತುಂಗೆ ಜಲವ ತಂದಿಹೆ ಅ-ನಂಗ ಜನಕ ಮಾಡೋ ಅಭ್ಯಂಗ ಸ್ನಾನ 10 ನಿರಿಗೆಗಳನೆ ಹಾಕಿ ಜರದ ಪೀತಾಂಬರ ಗ-ರುಡವಾಹನ ನೀನು ಧರಿಸು ಮಧ್ಯದಲಿ 11 ಹಾರ ಕಿರೀಟ ಕಾಂಚಿ ನೀರ ನೂಪುರ ಸು-ಕೇಯೂರ ನೂಪುರನೀವೆ ಧಾರುಣಿಪತಿಗೆ 12 ಸ್ವರ್ಣ ರಚಿಸಿದ ಸೂತ್ರವನು ಕೊಡುವೆ ಲಕ್ಷ್ಮೀರನ್ನ ಸೌರಭ ಗಂಧವನು ಸ್ವೀಕರಿಸು 13 ವಾಸುದೇವನೆ ದಿವ್ಯ ನಾಸಿಕೇಂದ್ರಿಯದಿಂದಈಸು ಧೂಪದ ಗಂಧ ವಾಸನೆ ಗ್ರಹಿಸೋ 14 ಮರುಗು ಮಲ್ಲಿಗೆ ಜಾಜಿ ಸುರಗಿ ಸೇವಂತಿಗೆಸುಮಗಳ ಪರಿಮಳ ಧರಿಸೋ ಮಧ್ಯದಲಿ 15 ಹತ್ತು ಅಂಗಗಳಿಂದ ಉತ್ತಮ ಸುಧೂಪವಎತ್ತುವೆ ನಿನಗೆ ಸರ್ವೋತ್ತಮ ಹರಿಗೆ16 ಆಕಳ ಘೃತದ ಅನೇಕ ದೀಪಗಳ್ಹಚ್ಚಿಶ್ರೀಕರ ತವ ಮುಖಾವಲೋಕಿಸುತ್ತಿಹೆನು 17 ಏಕಾರತಿ ಗೋಪಿಪ್ರೀತನೆ ಬೆಳಗುವೆನಾಕ ನಾಯಕ ಸುರಲೋಕ ಸೇವಿತನೆ 18 ಆರು ವಿಧದ ಅನ್ನ ಸಾರು ಪಾಯಸ ಭಕ್ಷ್ಯಭೂರಿ ಶಾಕಗಳೀವೆ ನೀರಜಾಂಬಕನೆ 19 ಮಾರಜನಕನೆ ಮುತ್ತಿನಾರತಿ ಬೆಳಗುವೆಶ್ರೀರಾಮನೆ ನಿನ್ನ ಮೋರೆಯ ತೋರೊ20 ಛತ್ರ ಚಾಮರ ವ್ಯಜನ ದರ್ಪಣ ಪರ್ಯಂಕಕರ್ಪುರ ತಾಂಬೂಲವಿತ್ತು ಪೂಜಿಸುವೆ 21 ಹತ್ತಾರು ಉಪಚಾರ ಚಿತ್ರ ಚರಿತನೆ ನಿನಗೆಅರ್ಥಿಯಲಿ ಕೊಡುವೆನು ಮುಕ್ತಿ ನೀಡೆನಗೆ 22 ಇಂದಿರೇಶನೆ ನಿನ್ನ ಮುಂದೆ ತುತಿಪನೆ ನಿಂತುನಂದಬಾಲನೆ ಕೃಪೆಯಿಂದ ನೋಡೆನ್ನ 23
--------------
ಇಂದಿರೇಶರು
ಹೆರಳು ಹಾಕುವೆ ಬಾ ಮುರಲಿಯಲ್ಲೇ ಇಟ್ಟುಗುರುಳು ಮೋರೆಯ ಮೇಲೆ ಹರವಿ ಬಿದ್ದಿಹವೋ ಕಣ್ಣಮರೆಯ ಮಾಡಿಹವೋ ಪ ಕೋಡಿನ್ಹೆರಳನ್ಹಾಕಿ ಕೂಸ ಮುಂದಲೆ ಹೂಜೋಡಿರೆ ಅರಳೆಲೆ ನೋಡಿ ಇಡುವೆನೋ 1 ಹಚ್ಚುವೆ ಕಾಡಿಗೆ ಮುಚ್ಚದೆ ತೆರಿ ಕಣ್ಣುಹೊಚ್ಚಿ ಕುಂಚಿಗೆ ನಿನ್ನ ಎತ್ತಿಕೊಳ್ಳುವೆ ಬಾ 2 ಕರವ ಪಿಡಿದಂದು ಎತ್ತುವೆ ಬಾ 3
--------------
ಇಂದಿರೇಶರು
ಶ್ರೀಕೃಷ್ಣಲೀಲಾ ಕೀರ್ತನೆಗಳು38iÀುಶೋದೆ ಮಜ್ಜಿಗೆ ಮಾಡುತಂ ಮುದದಿಂ-ದಶೋಕನಮಲ ಸುಲೀಲೆಯನು ||ವಿಶೇಷ ಭಕ್ತಿಂಧಾಡುವಳಾ ಕಥಾ-ರಸ ಯಥಾಮತಿ ರಚಿಸುವೆನು ಪಹತ್ತವತಾರದಿ ಮತ್ತರ ಶಿಕ್ಷಿಸಿಉತ್ತಮರನು ಸಂತೈಸಿದನು ||ಭೃತ್ಯಭವಾರ್ಣವಬತ್ತಿಸುವಿವನನುಎತ್ತುವೆನತಿ ಧನ್ಯಳು ನಾನು 1ನದಿಜನಕನ ಕೊಡದುದ ಕದೊಳೆರೆವೆನುಮದನಪಿತನ ಸಿಂಗರಿಸುವೆನು ||ವದನತೆರದೆನ್ನ ಬೆದರಿಸಿದನ ಬಲುಹದದಿಂದಿರು ಎಂದಾಡುವೆನು 2ಅಣು ಮಹತ್ತೇ ಕಾಲಕೆ ತಿಳಿಯದೆದಣಿದೆನು ಪಾದಗಳನುಕಟ್ಟಿ||ಜನನಿಗೆ ಸಿಕ್ಕದನೆಂಬರ ತೋರಿಸಿಧನಪಜರ ಪೊರೆದ ಮರಕುಟ್ಟಿ 3ಅಗಣಿತರೂಪಿವನಂಗದಿ ಕಂಡಳುಜಗದಂಬೆಂಬರು ಸಜ್ಜನರು ||ಮಗುವೆಂದನುದಿನ ಮುದ್ದಿಸಿ ಕೊಂಕಳೊ-ಳಗಿಡುವೆ ಯನಗೇನೆಂಬುವರೊ 4ಮೀನಾಂಬರೆ ಈ ಪರಿಯಿಂದಲಿ ಶ್ರೀಪ್ರಾಣೇಶ ವಿಠಲನ ಪಾಡುವಳು ||ಈ ನುಡಿಯಾದರದಿಂ ಕೇಳಲುಭವಕಾಣರು ಪರದಲಿ ಸುಖ ಬಹಳ 5
--------------
ಪ್ರಾಣೇಶದಾಸರು