ನಿತ್ಯ ಸುಖಕರ ನೀರಜಾಕ್ಷರ ಭೃತ್ಯರಾಗುವ ಬನ್ನಿರಿ
ಎತ್ತುವನು ಸಂಶಯವಿಡದೆ ಕೃತಕೃತ್ಯರಾಗುವವೆನ್ನಿರಿ ಪ.
ಮೋದಮಯನ ಪ್ರಸಾದವನು ಕೊಂಡಾದರದಿ ಸೇವಿಪುದು
ಪಾದಪದ್ಮಾಮೋದಯುತಾ ತುಳಸೀದಳಗಳನು ಮುಡಿವುದು
ತೇದ ಗಂಧವ ಮಾಧವನಿಗಿರಿಸಾದನಂತರ ಕೊಳುವುದು
ಭಾಗವತ ಕೇಳುತ 1
ಭೀಕರಿಪ ಮಹ ದುರಿತಗಣ ನಿರಾಕರಿಸುವನು ನಿಮಿಷದಿ
ಕುಯುಕ್ತಿ ಶಕ್ತಿಯ ದೂಕುವನು ದುಷ್ಕೂಪದಿ
ವಾಕುಗಳ ತಪ್ಪುಗಳನೆಣಿಸದೆ ಸಾಕುವನು ಸಂತಸದಲಿ
ಒಡಗೂಡಿ ನಲಿವನು 2
ಶ್ರೀಶನನು ಭಜಿಸುವದಕೇನಾಯಾಸವಿರುವುದು ಹೇಳಿರಿ
ವಾಸವಾಗಿಹ ಸಕಲ ಹೃದಯಾಕಾಶ ಪದ್ಮದಿ ಕೇಳಿರಿ
ವಾಸುದೇವನ ವರ್ಣನಾಂಶವ ಲೇಶವಾದರು ತಾಳಿರಿ
ಶೇಷ ಗಿರೀಶನ ದಾಸಕೂಟ ಸಮಾಶ್ರಯಣ ಸಂಗ್ರಹಿಸಿ ಬಾಳಿರಿ 3