ಒಟ್ಟು 5 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುತ್ತೈದೆ ಜಯ ಜಯ ಮುತ್ತೈದೆ ಜಯ ಜಯ ಮುತ್ತೈದೆಯರು ಪಾಡುತ ಜಯ ಜಯ ಮುತ್ತಿನಾರತಿ ಎತ್ತುತಾ ಪ ಪೃಥ್ವಿಗೊಡೆಯ ಪುರುಷೋತ್ತಮ ಹರಿಗೀಗ ಮುತ್ತಿನಾರತಿ ಎತ್ತುತಾ ಜಯ ಜಯ ಮುತ್ತೈದೆಯರು ಪಾಡುತಾ 1 ಮಿತ್ರೆ ರುಕ್ಮಿಣಿ ಸತ್ಯಭಾಮೆಯರರಸಗೆ ರತ್ನದಾರತಿ ಎತ್ತುತಾ ಜಯ ಜಯ ಮುತ್ತೈದೆಯರು ಪಾಡುತಾ 2 ಮಮತೆಯಿಂದಲಿ ಕಮಲನಾಭ ವಿಠ್ಠಲನಿಗೆ ಕನಕದಾರತಿ ಎತ್ತುತಾ ಜಯ ಜಯ ಮುತ್ತೈದೆಯರು ಪಾಡುತಾ3
--------------
ನಿಡಗುರುಕಿ ಜೀವೂಬಾಯಿ
ಸತಿ ಸಹಿತ ಕಶ್ಯಪರು ರತುನದಾರತಿ ಪಿಡಿದು ರತಿಪತಿಪಿತನಿಗೆ ಅತಿಹರುಷದಿ ಅತಿಶಯದ ಮಹಿಮೆಗಳ ಪೊಗಳುತಲಿ ಶ್ರೀಹರಿಗೆ ಕುಶಲದಾರತಿ ಎತ್ತಿಬೆಳಗಿದರು ನಿತ್ಯ ಶುಭ ಮಂಗಳಂ 1 ಅನಸೂಯ ಸಹಿತ ಅತ್ರಿಯರು ಬೇಗನೆ ಬಂದು ನಳಿನಾಕ್ಷನ ಚರಣಕ್ಕೆರಗಿ ನಿಂದು ವಿಧವಿಧದ ಆಟಗಳ ಆಡಿದ ಶ್ರೀಹರಿಗೆ ಪದುಮದಾರತಿ ಎತ್ತಿ ಬೆಳಗಿದರು ನಿತ್ಯ ಶುಭಮಂಗಳಂ 2 ಶೀಲವತಿಯಾದ ಸುಶೀಲೆ ಸಹಿತ ಭಾರದ್ವಾಜ ಋಷಿಗಳು ತಮ್ಮ ಆಶ್ರಮದಲಿ ಶ್ರೀಲಕುಮಿವಲ್ಲಭಗೆ ಶೀಘ್ರದಿಂದಲಿ ತಾವು ಗೋಮೇಧಿಕದಾರುತಿ ಬೆಳಗಿದರು ನಿತ್ಯ ಶುಭಮಂಗಳಂ 3 ಕುಮುದ್ವತಿ ಸಹಿತ ವಿಶ್ವಾಮಿತ್ರ ಋಷಿಗಳು ಕನಕ ಮಂಟಪದಿ ಮೆರೆಯುವ ದೇವಗೆ ಸನಕಾದಿವಂದ್ಯನಿಗೆ ವನಜಾಕ್ಷಿಯರಸನಿಗೆ ಕನಕದಾರತಿ ಎತ್ತಿ ಬೆಳಗಿದರು ನಿತ್ಯ ಶುಭಮಂಗಳಂ 4 ಪ್ರಹ್ಲಾದವರದನಿಗೆ ಅಹಲ್ಯೆಯ ಸಹಿತದಿ ಫುಲ್ಲಲೋಚನಪ್ರಿಯಗೆ ಋಷಿಗೌತಮ ಮಲ್ಲಿಗೆಹಾರಗಳು ಧರಿಸಿ ಶೋಭಿಪ ಹರಿಗೆ ಚಲ್ವನವರತ್ನದಾರತಿ ಎತ್ತುತಾ ನಿತ್ಯ ಶುಭಮಂಗಳಂ 5 ರೇಣುಕಾ ಸಹಿತ ಜಗದಗ್ನಿ ಋಷಿಗಳು ತಮ್ಮ ಧ್ಯಾನಗೋಚರನಾದ ಪರಮಾತ್ಮನ ಮಾನಿನಿಮಣಿ ಲಕುಮಿಯೊಡನೆ ಶ್ರೀಕೃಷ್ಣನಿಗೆ ನೀಲಮಾಣಿಕ್ಯದ ಆರತಿ ಎತ್ತುತ ನಿತ್ಯ ಶುಭಮಂಗಳಂ 6 ಸತಿ ಸಹಿತ ವಶಿಷ್ಠ ಋಷಿಗಳು ಇಷ್ಟಮೂರುತಿಯಾದ ವರಕಮಲನಾಭ ವಿಠ್ಠಲನ ಸ್ಮರಿಸುತ ನಿತ್ಯ ನವರತ್ನದಾರತಿ ಬೆಳಗಿದರು ನಿತ್ಯ ಶುಭಮಂಗಳಂ 7 ಮಂಗಳಂ ಸಪ್ತಋಷಿಗಳು ಪರ್ಣಶಾಲೆಯೊಳು ಗಾಂಗೇಯನುತನ ಪೂಜಿಸಿ ಹರುಷದಿ ಸಂಗೀತಲೋಲನಿಗೆ ಶೃಂಗಾರ ಪುರುಷನಿಗೆ ರಂಗಿನಾರತಿಯೆತ್ತಿ ಬೆಳಗಿದರು ನಿತ್ಯ ಶುಭಮಂಗಳಂ 8
--------------
ನಿಡಗುರುಕಿ ಜೀವೂಬಾಯಿ