ಆನಂದಮಯಗೆ ಚಿನ್ಮಯಗೆ ಆ-
ದಿನಾರಾಯಣಗಾರತಿ ಎತ್ತಿರೆ ಪ.
ವೇದವ ತಂದು ಬೆಟ್ಟವ ಪೊತ್ತು ಧರಣಿಯ
ಸಾಧಿಸಿ ಕಂಬದಿ ಬಂದವಗೆ
ನೃಪರ ಸಂಹರಿಸಿದ
ಆದಿಮೂರುತಿಗಾರತಿ ಎತ್ತಿರೆ 1
ಇಂದುವದನೆ ಸಹಿತ ಅರಣ್ಯದೊಳಗಾಡಿ
ನಂದಗೋಕುಲದಲ್ಲಿ ನಲಿದವಗೆ
ಮಂದಗಮನೆಯರ ಮುಂದೆ ನಿರ್ವಾಣದಿ
ನಿಂದ ಮೂರುತಿಗಾರತಿ ಎತ್ತಿರೆ 2
ತುರಗವನೇರಿ ದುಷ್ಟರ ಸೀಳಿ ಭಕ್ತರ
ಪೊರೆವ ಮಂಗಳ ಹಯವದನನಿಗೆ
ವರದ ಯಾದವಗಿರಿ ಚೆಲುವನಾರಾಯಣನ
ಚರಣಕಮಲಕಾರತಿ ಎತ್ತಿರೆ 3