ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಮಯನ್ನಮ:ಎನ್ನೋ ರಾಮಾಯನ್ನಮ: ನಾಮವರಿತದ್ದೇ ರಾಮಾಯನ್ನಮ: ಪ ಬಂದದ್ದು ಬಾರದ್ದು ರಾಮಾಯನ್ನಮ: ತಂದದ್ದು ತಾರದ್ದು ರಾಮಾಯನ್ನಮ: ಅಂದದ್ದು ಆಡದ್ದು ರಾಮಾಯನ್ನಮ: ಮಿಂದದ್ದು ಮೀಯದ್ದು ರಾಮಾಯನ್ನಮ: 1 ಉಂಡದ್ದು ಉಟ್ಟದ್ದು ರಾಮಾಯನ್ನಮ: ಕೊಂಡದ್ದು ಕೊಟ್ಟದ್ದು ರಾಮಾಯನ್ನಮ: ಕಂಡದ್ದು ಕಾಣದ್ದು ರಾಮಾಯನ್ನಮ: ಬಂಡಾದದ್ದಾಗದ್ದು ರಾಮಾಯನ್ನಮ: 2 ಇದ್ದದ್ದು ಇಲ್ಲದ್ದು ರಾಮಾಯನ್ನಮ: ಮೆದ್ದದ್ದು ಮೆಲ್ಲದ್ದು ರಾಮಾಯನ್ನಮ: ಬಿದ್ದದ್ದು ಬೀಳದ್ದು ರಾಮಾಯನ್ನಮ: ಕದ್ದದ್ದು ಕದಿಯದ್ದು ರಾಮಾಯನ್ನಮ: 3 ಬಿತ್ತಿದ್ದು ಬೆಳೆದದ್ದು ರಾಮಾಯನ್ನಮ: ಎತ್ತಿದ್ದು ಎತ್ತದ್ದು ರಾಮಾಯನ್ನಮ: ಸುತ್ತಿದ್ದು ಮುತ್ತಿದ್ದು ರಾಮಾಯನ್ನಮ: ಅತ್ತದ್ದು ಹೊತ್ತದ್ದು ರಾಮಾಯನ್ನಮ: 4 ಭಕ್ತಿ ಭಾವನೆಯೆಲ್ಲ ರಾಮಾಯನ್ನಮ: ಯುಕ್ತಿ ಯೋಚನೆಯೆಲ್ಲ ರಾಮಾಯನ್ನಮ: ಯುಕ್ತಾಯುಕ್ತವು ರಾಮಾಯನ್ನಮ: ಮುಕ್ತಿ ಸಾಧ್ಯ ಶ್ರೀ ರಾಮಾಯನ್ನಮ: 5
--------------
ರಾಮದಾಸರು