ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾರಿಧಿನಿಲಯನೆಂಥಾತ ತೀರದ ಮಹಿಮಗಾರನೀತ ಪ ಸಾರಿ ನಂಬಿ ಭಜಿಸಿ ಸತತ ಘೋರ ದುರ್ಭವಳಿರೋ ನಿರುತಅ.ಪ ದೇವದೇವ ದಿವ್ಯಚರಿತ ದೇವಿದೇವಕಿ ಗರ್ಭಸಂಜಾತ ಗೋವುಗಳನು ಕಾಯಿದಾತ ಗೋವಳರೊಡನೆ ಆಡಿದಾತ ಮಾವನಮರ್ದಿಸಿ ಭುವಿಗೀತ ಕೇವಲಸೌಖ್ಯ ನೀಡಿದಾತ 1 ಗೋವರ್ಧನಗಿರಿ ಎತ್ತಿದಾತ ಗೋವಳರನ್ನು ಸಲಹಿದಾತ ಮಾಯಾಪೂತನಿಯಸುವನೀತ ಮಾಯದಿಂದ ಹೀರಿದಾತ ತಾಯಿ ಯಶೋದಾದೇವಿಗೀತ ವಿಶ್ವ ತೋರಿದಾತ 2 ಅಸಮಾಯದಾಟವಾಡುತ ಶಿಶುವಾಗಿ ತೋರಿದಾತ ಕುಶಲಗೋಪಿಕಾಸ್ತ್ರೀಯರನೀತ ವಸನ ಕಳೆದು ನಿಲಿಸಿದಾತ ವಸುಧೆ ಭಾರವನಿಳುಹಿದಾತ ನೊಸಲಗಣ್ಣನ ಸಲಹಿದಾತ 3 ಬಾಲೆಗೋಪಿಯರಿಗೊಲಿದಾತ ಪಾಲಮೊಸರು ಬೆಣ್ಣೆ ಮೆಲಿದಾತ ಕೊಳಲನೂದುತ ನಲಿದಾಡಿದಾತ ಬಾಲನಾಗಿ ಲೀಲೆ ತೋರಿದಾತ ಕಾಳರಕ್ಕಸರ ಕುಲಭೀತ ಕಾಳಿಯನ್ನು ಮೆಟ್ಟಿ ಸೀಳಿದಾತ 4 ಹಿಡಿ ಅವಲಕ್ಕಿಗೆ ಒಲಿದಾತ ಮಾನವ ಕಾಯ್ದಾತ ದೃಢ ಭಕ್ತರೋಳ್ವಾಸವಾದಾತ ಇಡೀ ಭುವನಗಳ್ಹೊತ್ತಾಳುವಾತ ಅಜ ಸುರಾದಿವಂದಿತ ಒಡೆಯ ಶ್ರೀ ರಾಮಯ್ಯ ಮಮದಾತ 5
--------------
ರಾಮದಾಸರು