ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆ ಮಹಿಮಗೆ ಮಂಗಳಾರತಿಯ ಎತ್ತಿದರು 1 ಮತ್ಸ್ಯಾವತಾರ ಶ್ರೀಹರಿಯ ಅಕ್ಷಗಂಗಳದೊಂದು ಬೆಳಕು ನಿತ್ಯವೇದವ ತಂದ ಬೆಳಕು ತುಂಬಿತು ದ್ವಾರಾವತಿಗೆ 2 ಕೂರ್ಮಾವತಾರ ಶ್ರೀಹರಿಯ ಹೇಮಗಿರಿಯ ತಂದ ಬೆಳಕು ಬಲ್ಲಿದ ಕಾಯನ್ನ ಬೆಳಕು ತುಂಬಿತು ದ್ವಾರಾವತಿಗೆ 3 ವರಾಹಾವತಾರ ಶ್ರೀಹರಿಯ ಹೊಳೆದ ಕೋರೆದಾಡೆಯ ಬೆಳಕು ಧಾರುಣಿಯ ನೆಗವಿದ ಬೆಳಕು ತುಂಬಿತು ದ್ವಾರಾವತಿಗೆ 4 ನರಮೃಗರೂಪ ಶ್ರೀಹರಿಯ ಮೆರೆವೊ ನಖದ ಬೆಳಕು ಉರಿಗಣ್ಣು ಜ್ವಾಲೆಯ ಬೆಳಕು ತುಂಬಿತು ದ್ವಾರಾವತಿಗೆ 5 ವಾಮನಾವತಾರ ಶ್ರೀಹರಿಯ ಭೂಮಿಯನಳೆದೊಂದು ಬೆಳಕು ಬಾಲಕ ತನಯನ ಬೆಳಕು ತುಂಬಿತು ದ್ವಾರಾವತಿಗೆ 6 ಭಾರ್ಗವಾವತಾರ ಶ್ರೀಹರಿಯ ಮೆರೆÉವೊ ಬಲುಭುಜದೊಂದು ಬೆಳಕು ದುರುಳ ಕ್ಷತ್ರೆÉೀರ ಗೆದ್ದ ಬೆಳಕು ತುಂಬಿತು ದ್ವಾರಾವತಿಗೆ 7 ದಶರಥತನಯ ಶ್ರೀಹರಿಯ ಎಸೆವೊ ಬಿಲ್ಲುಬಾಣದ ಬೆಳಕು ಶಶಿವದನೆಯ ತಂದ ಬೆಳಕು ತುಂಬಿತು ದ್ವಾರಾವತಿಗೆ 8 ಗೋಪಿ ಮುದ್ದಾಡಿದ ಬೆಳಕು ದೇವಕ್ಕಿತನಯನ ಬೆಳಕು ತುಂಬಿತು ದ್ವಾರಾವತಿಗೆ 9 ಬೌದ್ಧಾವತಾರ ಶ್ರೀಹರಿಯ ಬುದ್ಧಿಪಲ್ಲಟದೊಂದು ಬೆಳಕು ರುದ್ರನ್ನ ಗೆಲಿದೊಂದು ಬೆಳಕು ತುಂಬಿತು ದ್ವಾರಾವತಿಗೆ 10 ಕಲ್ಕ್ಯವತಾರ ಶ್ರೀಹರಿಯ ಹೊಳೆವಾಖಂಡದೊಂದು ಬೆಳಕು ಗುರು ಹಯವದನನ್ನ ಬೆಳಕು ತುಂಬಿತು ದ್ವಾರಾವತಿಗೆ 11
--------------
ವಾದಿರಾಜ
ದ್ವಾರಕೆಯ ಅರಸಗೆ ಪ. ಸುರೂಪಿಸೀರೆಯನುಟ್ಟು ಥೋರ ಮುತ್ತನೆ ಕಟ್ಟಿ ತೇರಿನಾರುತಿಯ ಮುರಾರಿಯ ಮುಂದೆತ್ತುವರು1 ರಂಜಿಸೊಸೀರೆಯನುಟ್ಟು ಪಂಜರ ದ್ವಾಲೆನಿಟ್ಟು ನೀರಾಂಜನ ಎತ್ತಿದರು 2 ತಾಕೀತೆಂದು ಕೆಲರು ಓಕುಳಿ ನಿವಾಳಿಸುವರು ಲೋಕನಾಯಕಗೆ 3 ಕೃಷ್ಣರಾಯನ ಮುಖಕೆ ದೃಷ್ಟಿ ನೆಟ್ಟೀತೆಂದು ಕೆಲರು ಬಟ್ಟು ಮುತ್ತು ನಿವಾಳಿಸಿ ಇಟ್ಟು ಕಸ್ತೂರಿ ಕಪ್ಪು 4 ಕದಳಿ ಸಾಲು ಜಗಲಿ ತೋರಣ ವಿಶಾಲ ಬೀದಿಯೊಳು 5 ನಿವಾಳಿಸಿ ನಿವಾಳಿಸಿ ನಾಲ್ಕು ಕಡೆಗೆ ಒಗೆದು6 ಶ್ರೀಲೋಲ ರಾಮೇಶನ ಭಕ್ತರು ವಾಲೈಸುವರು ಹೀಗೆ7
--------------
ಗಲಗಲಿಅವ್ವನವರು