ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎತ್ತಿದರಾರತಿ ಮುತ್ತೈದೆಯರು ಬೇಗ ಅರ್ಥಿಯಿಂದಲಿ ಪಾಡಿ ಅಚ್ಚುತನರಸಿಗೆ ಪ ಇಂದಿರಾದೇವಿ ಸುಗಂಧ ಸುಂದರಿ ನಮ್ಮ ಮಂದಿರದೊಳು ನಲಿದಾಡುತಲಿಹ ತಾಯೆ ಚಂದಿರವದನೆ ಸುಂದರಿ ಶಾಂತಿ ಜಯಮಾಯೆ ಇಂದಿರೇಶನ ಪಟ್ಟದರಸಿ ವರ ಲಕ್ಷುಮಿಗೆ 1 ಕರುಣದಿ ವರಗಳ ಕರೆದು ಕೊಡುವಳೆಂಬ ಬಿರುದು ನಿನ್ನದು ತಾಯೆ ಕೊಡುವರ ಅಭಯವ ಗರುಡಗಮನನ ವಕ್ಷಸ್ಥಳದಲಿ ವಾಸಿಸು- ತಿರುವ ಸೌಭಾಗ್ಯದ ಖಣಿಯೆ ರಕ್ಷಿಸು ಎಂದು2 ಪದ್ಮಮುಖಿಯೆ ಪದ್ಮಪಾಣಿಯೆ ಪದ್ಮಾಕ್ಷಿ ಪದ್ಮಲೋಚನೆ ಪದ್ಮಸಂಭವೆ ಪೊಳೆವ ಹೃ- ತ್ಪದ್ಮದಿ ಕಮಲನಾಭ ವಿಠ್ಠಲನ ತೋರಿಪದ್ಮನೇತ್ರೆಯೆ ಶ್ರೀ ಪದ್ಮಾಲಯೆ ಪೊರೆ ಎಂದು3
--------------
ನಿಡಗುರುಕಿ ಜೀವೂಬಾಯಿ
ಪರಮಾನಂದದಿ ಸರಸಿಜಾಕ್ಷಿಯರೆಲ್ಲ ಪರಮ ಪುರುಷನಿಗಾರತಿ ಎತ್ತುತ ಪ ಕರಿವರ ವರದನ ಸ್ಮರಿಸುತ ಸಂತತ ನವರತ್ನದಾರತಿ ಬೆಳಗಿದರುಅ.ಪ ಗೋಪಿಕಾಲೋಲನಿಗೆ ಗೋಪಾಲಕೃಷ್ಣಗೆ ಗೋವರ್ಧನೋದ್ಧಾರ ಗೋವಿಂದಗೆ ಗೋಪಸ್ತ್ರೀಯರ ಕೂಡ್ಯಾಡಿದ ಹರಿಗೆ ಗೋಪಿಬಾಲನಿಗೆ ಎತ್ತಿದರಾರತಿ1 ನವನೀತ ಚೋರಗೆ ಬೃಂದಾವನÀದಿ ವಿರಾಜಿಪಗೆ ಇಂದಿರೆ ಸಹಿತಗೆ ಕುಂದಣದಾರತಿ ಬೆಳಗಿದರು2 ಕಮಲದಳಾಕ್ಷಗೆ ಕಮಲಮುಖಿಯರೆಲ್ಲ ಕಮಲ ಮುತ್ತಿನ ಆರತಿ ಪಿಡಿದು ಕಮಲನಾಭ ವಿಠ್ಠಲನ ಪಾಡಿ ಹರುಷದಿ ಕಮಲಾಕ್ಷಿಯರು ಶೋಭನ ಪಾಡುತ್ತ 3
--------------
ನಿಡಗುರುಕಿ ಜೀವೂಬಾಯಿ