ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜೋಜೋ ಜೋಜೋ ಲಾಲಿ ಗೋವಿಂದ ಜೋಜೋ ಜೋಜೋ ಲಾಲಿ ಮುಕುಂದ ಜೋಜೋ ಜೋಜೋ ಲಾಲಿ ಆನಂದ ಜೋಜೋ ಜೋಜೋ ಲಾಲಿ ಗೋಪಿಯ ಕಂದ ಪ ಚಿನ್ನದ ತೊಟ್ಳಿಗೆ ರನ್ನದ ಮಲುಕು ಕನ್ನಡಿ ಹೊಳೆವೊ ಮೇಲ್ಕಟ್ಟಿನ ಬೆಳಕು ಸ್ವರ್ಣ ಮಂಟಪದಿ ರಾಜಿಪದಿವ್ಯ ಹೊಳಪು ಕರ್ನೇರಲಂಕರಿಸಿ ನಲಿಯುವ ಕುಲುಕು ಜೋ ಜೋ1 ಅರಿಶಿನ ಕುಂಕುಮ ಗಂಧ ಪುಷ್ಪಗಳು ಸರಸೀಜಾಕ್ಷಗೆ ಮುತ್ತಿನ್ಹಾರ ಪದಕಗಳು ಸುರರೊಡೆಯಗೆ ಪಟ್ಟೆ ಪೀತಾಂಬರಗಳು ಹರುಷದಿಂದಿರಿಸಿ ನಲಿವ ಸ್ತ್ರೀಯರುಗಳು ಜೋ ಜೋ2 ಮುತ್ತೈದೆಯರೆಲ್ಲ ಬಂದು ನೆರೆದರು ಉತ್ತಮ ಸ್ವರ್ಗ ಕಲಶವ ಪೂಜಿಸುವರು ಚಿತ್ತಜನಯ್ಯನ ಎತ್ತಿಕೊಂಡಿಹರು ಜೋ ಜೋ3 ಕೇಶವನನ್ನು ತನ್ನಿ ನಾರಾಯಣನ್ನ ಮಾಧವ ಗೋವಿಂದನನ್ನ ಸಾಸಿರ ನಾಮದ ವಿಷ್ಣು ಮಧುಸೂದನನ್ನ ಸೋಸಿಲಿ ತ್ರಿವಿಕ್ರಮ ವಾಮನನ್ನ ಜೋ ಜೋ 4 ಶ್ರದ್ಧೆಯಲಿ ಶ್ರೀಧರ ಹೃಷಿಕೇಶನನ್ನ ಪದ್ಮನಾಭನ ಕೊಳ್ಳಿ ದಾಮೋದರನ್ನ ಶುದ್ಧ ಮನದಿ ಸಂಕರ್ಷಣ ವಾಸುದೇವನನ್ನ ಪ್ರದ್ಯುಮ್ನನನು ತನ್ನಿ ಅನಿರುದ್ಧನನ್ನ ಜೋ ಜೋ5 ಪುರುಷೋತ್ತಮನ ಕೊಳ್ಳಿ ಅದೋಕ್ಷಜನನ್ನ ನಾರಸಿಂಹನ ತನ್ನಿ ಅಚ್ಚುತನನ್ನ ಸರಸದಿ ಜನಾರ್ದನ ಉಪೇಂದ್ರನನ್ನ ಹರುಷದಿಂದಲಿ ಕೊಳ್ಳಿ ಹರಿ ಶ್ರೀಕೃಷ್ಣನನ್ನ ಜೋ ಜೋ 6 ಹೀಗೆಂದು ತೂಗುತ ಜೋಗುಳ ಹಾಡಿ ನಾಗವೇಣಿಯರು ಸಂಭ್ರಮದಿಂದ ಕೂಡಿ ಆಗ ಕಮಲನಾಭ ವಿಠ್ಠಲನ್ನ ನೋಡೀ ಬೇಗ ರಕ್ಷೆಗಳನಿತ್ತರು ತ್ವರೆ ಮಾಡಿ ಜೋ ಜೋ 7
--------------
ನಿಡಗುರುಕಿ ಜೀವೂಬಾಯಿ