ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಂದ್ರಗಾವಿಯನುಟ್ಟು ದುಂಡು ಮುತ್ತನೆಕಟ್ಟಿ|ಪೆಂಡೆಯರುಳಿಯನಿಟ್ಟು ||ಕೆಂದಾವಿನ ಹಾಲ ಹರವಿಯ ಹೊತ್ತುಕೊಂಡು |ಬಂದಾಳು ಬೀದಿಗಾಕೆ ಪಹಾಲು ಮಾರುವ ಧ್ವನಿ ಲಾಲಿಸಿ ರಂಗಯ್ಯ |ಮೇಲಿನ ಕೇರಿಯಲಿ ||ನಾಳೆ ನಮ್ಮನೆಯಲಿ ವೀಳೆ-ಪ್ರಸ್ತಗಳುಂಟು |ಹಾಲು ನಿಲ್ಲಿಸೆಂದನು 1ಕೊಂಡವನು ನೀನಲ್ಲ ಡಂಭಕರ ಮಾತೇಕೊ |ಗಂಡನುಳ್ಳವಳ ಕೂಡ ||ಮಂಡಲವಾಳುವ ಅರಸಿನ ಮುಂದೆ ಹೇಳಿ |ದಂಡವ ತೆರಸುವೆನೊ 2ಅಡವಿಹಂಬುಗಳಿಗೆ ಹೆಡಿಗೆ ಸುಂಕವು ಇಲ್ಲ |ತಡೆದವ ನೀನಾರೊ? ||ನಡೆ ಊರ ಮುಂದಕೆ ತಳವಾರರೈದಾರೆ |ಗಡನೆ ಪೇಳುವೆನೆಂದಳು 3ಬಲ್ಲೆ ಬಲ್ಲೆನೆ ನಿನ್ನ ಬಗೆಯ ಮಾತುಗಳೆಲ್ಲ |ಎಲ್ಲಿಹ ತಳವಾರನೆ ||ಅಲ್ಲದಿದ್ದರೆ ಬಂದು ವೀಳ್ಯವ ತಕ್ಕೊಂಡು |ಅಲ್ಲಲ್ಲಿ ದೊರದಿರೆ 4ಕೋಲು ಕೈಯಲಿ ಪಣೆಯಲಿ ಸಿರಿನಾಮವು |ಆಲದ ಮರದಡಿಯೆ ||ಕಾಲಮೊದಲು ಹಾಲ ಮಾರಿದ ಸುಂಕರೆ |ನಿಲ್ಲೆಂದು ಸೆರಗ ಪಿಡಿದ 5ಅಪ್ಪ ಸೆರಗ ಬಿಡೊ, ಅಣ್ಣ ಸೆರಗ ಬಿಡೊ |ಅಪ್ಪಯ್ಯ ಸೆರಗ ಬಿಡೊ ||ಅಪ್ಪನು ನಾನಲ್ಲ, ಅಣ್ನನು ಅಲ್ಲ ನಿ-|ಮ್ಮಪ್ಪನ ಅಳಿಯ ಕಾಣೆ 6ಮಾವ ಸೆರಗ ಬಿಡೊ,ಭಾವಸೆರಗ ಬಿಡೊ |ಭಾವಯ್ಯ ಸೆರಗ ಬಿಡೊ ||ಮಾವನು ನಾನಲ್ಲ, ಭಾವನು ನಾನಲ್ಲ |ಮಾವನ ಮಗನು ಕಾಣೆ 7ಅಣ್ಣ ಸೆರಗ ಬಿಡೊ, ತಮ್ಮ ಸೆರಗ ಬಿಡೊ |ಅಣ್ಣಯ್ಯ ಸೆರಗ ಬಿಡೊ ||ಅಣ್ಣಯ್ಯ ನಾನಲ್ಲ, ತಮ್ಮನು ಅಲ್ಲ ನಿ-|ಮ್ಮಣ್ಣನಭಾವಕಾಣೆ8ಕಂದ ಸೆರಗ ಬಿಡೊ, ತಂದೆ ಸೆರಗ ಬಿಡೊ |ಕಂದಯ್ಯ ಸೆರಗ ಬಿಡೊ ||ಕಂದನು ನಾನಲ್ಲ, ತಂದೆಯು ನಾನಲ್ಲ |ಕಂದನ ತಂದೆ ಕಾಣೆ 9ನೆತ್ತಿಮೇಲಿನ ಕೊಡ ಎತ್ತಿ ಈಡಾಡುತ |ಎತ್ತಿಕೊಂಡಳು ಕೃಷ್ಣನ ||ಭಕ್ತರ ಸಲಹುವ ಪುರಂದರವಿಠಲ |ವತ್ಸವೆಂಕಟರಾಯನ10
--------------
ಪುರಂದರದಾಸರು