ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಮನ ನೋಡಿರೋ ನಮ್ಮ ಸೀತಾರಾಮನ ನೋಡಿರೋ ಪ ರಾಮನನೋಡುತ ಪ್ರೇಮವ ಸುರಿಸುತ ನಾಮವ ನುಡಿಯುತ ನೇಮದಿ ಬೇಡುತ ಅ.ಪ ಅಜಭವಾದಿಗಳರಸನೀತಾ ಮತ್ತೆ ನಿಜಭಕುತರಿಗೆ ಮುಕ್ತಿಪ್ರದಾತ ತ್ಯಜಿಸಿ ದುಷ್ಟರಸಂಗ ಭಜಿಸಿ ಶಿಷ್ಯರ ಸಂಗ ಭುಜಗಭವವೆಂದರಿತು ನಿಜಸುಖಮೆಲ್ಲಲು 1 ಪಾದ್ಯ ಮತ್ತೆ ನಿತ್ಯಾನಿತ್ಯ ಜಗಸೃಜಿಪ ದೇವದೇವೇಶ ಮುಕ್ತಾಮುಕ್ತಾಶ್ರಯ ಸತ್ಯ ಪ್ರಾಣನ ಹೃಸ್ಥ ಉತ್ತಮೋತ್ತಮನೆಂದು ಎತ್ತಿಕೈಗಳ ಮುಗಿದು 2 ಭಕ್ತಿಯಿಂದಲಿ ನೋಡೆ ಸರ್ವಾಘಹರವೋ ಮತ್ತೆಪಾಡಲು ಕಾಮಿತ ಕರಗತವೊ ಹಸ್ತಿವರದನ ನೋಡೆ ಮತ್ತರಿಗೆ ಸಾಧ್ಯವೆ ವತ್ತುತ ಗೃಹಕೃತ್ಯ ಬೇಗ ಉತ್ತಮರಲ್ಲಿ 3 ಸುಲಭವಲ್ಲವೊ ಇಂಥಾ ಸಮಯ ಘಳಿಸಿ ನೋಡೀದವನೆ ಕೃತಾರ್ಥ ನಿತ್ಯ ಸಲಹುತ್ತಿರುವಂಥ ಅಲವ ಮಹಿಮಾರ್ಣವ ಲಲನೆ ಲಕ್ಷ್ಮಿಯ ನಾಳ್ವ 4 ಸರ್ವನಾಮಕ ನಿವನೂ ಮತ್ತೆ ಸರ್ವಪ್ರೇರಕ ಬಲಖ್ಯಾತ ನಿಹನೂ ಸರ್ವ ಸರ್ವಾಧಾರ ಸರ್ವೇಶ ಶಾಶ್ವತ ಸರ್ವಗುಣಗಣ ಪೂರ್ಣ ಸರ್ವವ್ಯಾಪ್ತನಾದ 5 ಆರಿಲ್ಲ ಸಮವಧಿಕ ಇವಗೇ ಮತ್ತೆ ಆರು ಕಾಣರು ನೆಲೆಯ ಸಾಕಲ್ಯ ಸತ್ಯ ಸಾರವಿಲ್ಲದ ಜಗದಿ ಸಾರನೊಬ್ಬನೆ ಇವನು ತೊರು ಪಾದಗಳೆಂದು ಸಾರಿಬೀಳುತ ಅಡ್ಡ 6 ಶರಣೆಂದ ವಿಭೀಷಣಗೆ ಪಟ್ಟ ಕಟ್ಟಿದನೂ ಕರುಣದಿಂದಲಿ ಶಬರಿಯ ಪೊರೆದವನು ದುರುಳ ಪಾಪಿಯ ದೊಡ್ಡ ಕವಿಯ ಮಾಡಿದ ಮಹಿಮ ಕರುಣ ಬೇಕಾದವರು 7
--------------
ಕೃಷ್ಣವಿಠಲದಾಸರು