ಹೊಂದದಿರುವಿ ಯಾಕೆ ಮನವೆ ಇಂದಿರೇಶನ
ಹಿಂದೆ ಮುಂದೆ ಸುಖವನೀವ ಮಂದರಾದ್ರಿಧರನ ಬೇಗ ಪ.
ಸುತ್ತಿ ಬರುವಿ ನೀ ಮತ್ತೆ ವಿಷಯದಿ
ಎತ್ತಲಾದರೀಶನಂಥ ವೃತ್ತಿ ದೊರೆವುದುಂಟೆ ನಿನಗೆ 1
ತೋಷಗೊಳುವೆನೆಂಬಾಸ್ಥೆ ತಾಳುವಿ
ದೋಷಗಳಲಿ ಸಿಲುಕಿ ಬಹಳ ಘಾಸಿಯಾಗಿ ನೊಂದುಕೊಳುವಿ 2
ಅರಿಯದಾದಿ ನೀ ಹರಿಯ ಗುಣಗಳ
ಚರಣಪದ್ಮ ಮಧುರ ರಸವ ಸುರಿವ ಸುಖವನೆಂದು ತಿಳಿವಿ 3
ಕೇಳು ನುಡಿಯನು ಕರುಣಾಳು ಒಡೆಯನು
ತಾಳ ತನ್ನ ನಂಬಿದವರ ಗೋಳ ಬಿಡಿಸಿ ಸಲಹುತಿಹನು 4
ಭ್ರಾಂತಿಗೊಳದಿರು ಶ್ರೀಕಾಂತನಲ್ಲಿರುಕಂತುಜನಕ ವೆಂಕಟೇಶ ಚಿಂತಿತಾರ್ಥವಿತ್ತು ಕಾವ 5