ಎನ್ನಯ್ಯ ಎಲ್ಲ ನಿನ್ನದಯ್ಯ ಹರಿ
ನಿನ್ನ ಮಾಯ ಜಗ ವಿಷ್ಣುಮಯ ಪ
ಎತ್ತನೋಡಿದರು ನಿನ್ನ ಕ್ಷೇತ್ರ ಹರಿ
ಸುತ್ತ ತಿರುಗೋದೆಲ್ಲ ನಿನ್ನ ಸೂತ್ರ
ನಿತ್ಯ ನಡೆವುದೆಲ್ಲ ನಿನ್ನ ಯಾತ್ರ ಹರಿ
ಭವ ನಿನ್ನ ಚಿತ್ರ 1
ವೇದ ನಾದವೆಲ್ಲ ನಿನ್ನ ಮಂತ್ರ ಹರಿ
ಓದು ವಾದ ಎಲ್ಲ ನಿನ್ನ ತಂತ್ರ
ಬಾಧೆ ವಿನೋದ ಎಲ್ಲ ನಿನ್ನ ಯಂತ್ರ ಹರಿ
ಆದಿ ಅನಾದಿ ಸರ್ವ ನಿನ್ನ ಸ್ವತಂತ್ರ 2
ರೋಗ ರಾಗ ಎಲ್ಲ ನಿನ್ನ ಶೂಲ ಹರಿ
ಭೋಗ ಭಾಗ್ಯವೆಲ್ಲ ನಿನ್ನ ಜಾಲ
ಜಾಗರ ಸದಾ ನಿನ್ನ ಶೀಲ ಹರಿ
ಬೈಗುಬೆಳಗುಯೆಲ್ಲ ನಿನ್ನ ಲೀಲಾ 3
ಆಟ ನೋಟವೆಲ್ಲ ನಿನ್ನ ಮತಿ ಹರಿ
ಝಾಟ ಮಾಟ ಎಲ್ಲ ನಿನ್ನ ಕೃತಿ
ಊಟ ಕೂಟವೆಲ್ಲ ನಿನ್ನ ರತಿ ಹರಿ
ಕೋಟಿ ಕೋಟಿ ಕಲ್ಪ ನಿನ್ನ ಸ್ಮøತಿ 4
ಕುಂದು ನಿಂದೆಯಲ್ಲ ನಿನ್ನ ಜಪವು ಹರಿ
ಬಂದ ಬಂಧವೆಲ್ಲ ನಿನ್ನ ತಪವು
ಅಂದಿಗಿಂದಿಗು ನಿನ್ನ ನಾಮ ನೆನವು ಸ್ಥಿರ
ವೊಂದೆ ಕೊಟ್ಟು ಶ್ರೀರಾಮ ಸಲಹು 5