ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಥೂ ನಿನ್ನ ಮೋರೆಗೆ ಬೆಂಕ್ಯ್ಹಚ್ಚ ಮನವೆ ಕುಯುಕ್ತಿ ಬಿಡು ಮನವೆ ಪ ಮುನ್ನ ನೀ ಪಡೆದದ್ದು ನಿನ್ನಗಿರಲಿಕ್ಕಾಗಿ ಅನ್ಯರೊಡವೆಯ ಬಯಸಿ ಕಣ್ಣಿಕ್ಕಿ ಕುದಿವಿ ಕುನ್ನಿಮನಸೆ ನಾಳೆ ಕಣ್ಣಿನೋಳುರಿಗೆಂಡ ವನ್ನು ತುಂಬಿಸುವೆ ಮನಚೆನ್ನಾಗಿ ನೋಡೊ 1 ಮಿಥ್ಯ ಸತಿಸುತರಿಗೆ ತೊತ್ತಾಗಿ ದುಡಿದು ಮುದಿಕತ್ತೆ ನೀನಾದಿ ಮೃತ್ವಿಗೆ ತುತ್ತಾಗಿ ಅತ್ತತ್ತು ಬಾಯಿಬಿಡುವ ಹೊತ್ತಿಗಿರರಾರಾರು ಅರ್ತು ನೀ ನೋಡೊ 2 ಚಿತ್ತಜಪಿತನಂಘ್ರಿ ಸತ್ಯಭಜನಕೆ ಕರೆಯೆ ಸುತ್ತಿ ಮಲುಗುವಿ ಸತಿಸತ್ತಳುವನಂತೆ ಮತ್ತೆ ಎತ್ತಕೆ ಕರೆಯೆ ವತ್ತರಿಲ್ಲ ಓಡ್ವಿ ಮುಕ್ತಿಕೊಂಡೆಯ್ವೆ ಮನ ತೊತ್ತಾಗಬೇಡೊ 3 ದಾಸಾನುದಾಸರ ದೂಷಣೆಯ ಮಾಡಿ ಮಹ ಹಾಸ್ಯದಿಂ ನಗುವಿ ಭವಪಾಶದೋಳ್ಸಿಲ್ಕಿ ನಾಶಬುದ್ಧಿಯ ಬಿಡು ಹೇಸಿಮನುಜನೆ ಯಮ ಪಾಶ ಬರುವುದು ಮುಂದೆ ಸೋಸಿ ನೀನೋಡೊ 4 ನೆರೆದು ತೋರುವ ಸಂತೆಪರಿಯಂತೆ ಸಂಸಾರ ಮರೆಮೋಸದ ಉರುಲು ದುರಿತದ ತವರು ಮರುಳತನವನು ನೀಗಿ ಪರಮ ಶ್ರೀರಾಮನ ಚರಣಸ್ಮರಣೆಯೊಳಿರ್ದು ವರಮುಕ್ತಿ ಪಡೆಯೊ 5
--------------
ರಾಮದಾಸರು