ಎಣೆಗಾಣೆನೀರ್ವರ್ಗೆ ವನಜನಯನ ಪ
ಧರೆಯನಾಳುವ ಸಿರಿಯರಸ ನೀನು ಈ
ಧರೆಯೊಳು ನಿರ್ಭಾಗ್ಯರೆರೆಯನಾನು 1
ಪರಮೇಷ್ಠಿಯನು ಪಡೆದ ಪರಮ ನೀನು ಬಲು
ದುರಿತಂಗಳಪ್ಪಿದ ದುರುಳನು ನಾನು 2
ಪುಣ್ಯವಂತರ ಹೃದಯ ಗಣ್ಯನೀಯ ಕೃತ-
ಪುಣ್ಯಹೀನಗರಿಗ್ರಗಣ್ಯ ನಾನು 3
ಪತಿತಪಾವನ ನೀನು ಪತಿತ ನಾನು
[ನುತ]ದಾತ ನೀನು ನಿರ್ಗತಿಕ ನಾನು 4
ವರ ವ್ಯಾಘ್ರಗಿರಿಯ ವರದ ವಿಠಲ ನೀನು ನಿಜ-
ಶರಣರ ಚರಣ ಧೂಳಿಪಟಲ ನಾನು 5