ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಮಾರ್ಯ ನಿಮ್ಮಂಘ್ರಿ ಕಮಲಗಳಿಗೆ ಕರವ ಕರುಣದಿ ನೋಡು ವೆಂಕಟ ಪ. ಬಾಹ್ಯ ಕರ್ಮವ ತೊರೆದು ಸರ್ವಗತನಾದ ನರ ಸಿಂಹನ ಪ್ರೀತಿಗಳಿಸುವ ಸ್ನೇಹದಿ ಮಹ್ಯಮರರಿಗೆ ವಿದ್ಯೆ ವಸ್ತ್ರಾನ್ನ ಪ್ರತಿ ದಿವಸ ಸಹ್ಯವಿಲ್ಲದೆ ಕೊಟ್ಟು ಮೋದಿಸುವ ವೆಂಕಟ1 ವಾಸುದೇವ ವಿಠಲನಂಘ್ರಿಗಳ ರಾ ಜೀವ ಮಧುಕರ ಮಧ್ವ ಶಾಸ್ತ್ರಜ್ಞನೇ ಅವ ದೇಶದೊಳಿದ್ದರೇನ್ಮರೆಯದೆ ನಿಮ್ಮ ಸೇವ ಸೇವಕರೊಳಗೆ ಎಣಿಸುವುದು ವೆಂಕಟ2 ಬಾಲಕನ ಬಿನ್ನಪ ಲಾಲಿಸಿ ಕರುಣದಿ ಗೋ ಪಾಲ ವಿಠಲನ ದಾಸರ ಮಗನೆಂದು ಪಾಲಿಪುದು ಪರಮ ಕರುಣಾಳು ಜಗನ್ನಾಥ ವಿಠಲ ಗಾಳೆನಿಪ ಪವಮಾನ ಗಾಯನನೆ ವೆಂಕಟ 3
--------------
ಜಗನ್ನಾಥದಾಸರು
ಹನುಮ-ಭೀಮ-ಮಧ್ವ ಇದು ಏನೊ ಚರಿತ ಯಂತ್ರೋದ್ಧಾರ ಪ. ಇದು ಏನೊ ಚರಿತ ಶ್ರೀಪದುಮನಾಭನ ದೂತಸದಾ ಕಾಲದಲಿ ಸರ್ವರ ಹೃದಯಾಂತರ್ಗತ ಅ.ಪ. ವಾರಿಧಿ ಗೋಷ್ಪಾದನೀರಂತೆ ದಾಟಿದಧೀರ ಯೋಗಾಸನಧಾರಿಯಾಗಿಪ್ಪೊದು 1 ದುರುಳ ಕೌರವರನ್ನು ವರಗದೆಯಲಿ ಕೊಂದಕರದಲ್ಲಿ ಜಪಮಾಲೆ ಧರಿಸಿ ಎಣಿಸುವುದು2 ಹೀನ ಮತಗಳನ್ನು ವಾಣಿಲಿ ತರಿದಂಥಜ್ಞಾನವಂತನೆ ಹೀಗೆ ಮೌನವ ಧರಿಸಿದ್ದು 3 ಸರ್ವವ್ಯಾಪಕ ನೀನು ಪೂರ್ವಿಕ ದೇವನೆಶರ್ವನಪಿತ ಬಂದೀ ಪರ್ವತ ಸೇರಿದ್ದು 4 ಪರಿ ಕುಳಿತದ್ದು 5
--------------
ಗೋಪಾಲದಾಸರು
ಹೆತ್ತ ತಾಯಿಗಿಂತ ಅತ್ಯಧಿಕ ಮಾಯವುಂಟೆಉತ್ತಮ ಅಶ್ವವ ಕತ್ತೆ ಹೋಲುವುದುಂಟೆ ಪ ವಿತ್ತವುಳ್ಳವನ ಕುಲ ಎಣಿಸುವುದುಂಟೆಸ್ವಾರ್ಥಕೆ ನ್ಯಾಯ ಎಂದಾದರೂ ಉಂಟೆ 1 ಅತ್ತೆಮನೆ ಸೇರುವಗೆ ಅಭಿಮಾನವುಂಟೆಬತ್ತಲೆ ತಿರುಗುವಗೆ ಭಯವು ಇನ್ನುಂಟೆ2 ಪೃಥ್ವಿಯೊಳಗೆ ಕಾಗಿನೆಲೆಯಾದಿಕೇಶವಗೆಮತ್ರ್ಯದೊಳನ್ಯ ದೇವರು ಸರಿಯುಂಟೆ 3
--------------
ಕನಕದಾಸ
ಎನ್ನ ಕಡೆಹಾಯಿಸುವುದು ನಿನ್ನಭಾರ|ನಿನ್ನ ಸ್ಮರಣೆ ಮಾಡುವುದು ಎನ್ನ ವ್ಯಾಪಾರ ಪಎನ್ನಸತಿಸುತರಿಗೆ ನೀನೆಗತಿ|ನಿನ್ನವರು ಎಂಬುದೇ ಎನ್ನ ನೀತಿ 1ಎನ್ನನಿತ್ಯಸಾಕುವುದು ನಿನ್ನ ಧರ್ಮ |ನಿನ್ನ ಮರೆತು ಬದುಕುವುದು ಎನ್ನಕರ್ಮ2ಎನ್ನ ತಪ್ಪ ಎಣಿಸುವುದು ನಿನಗೆ ಸಲ್ಲ |ನಿನ್ನ ಮರೆತು ತಿರುಗುವುದು ಎನ್ನದಲ್ಲ 3ಎನಗೆ ಪಡಿಯಿಕ್ಕುವುದು ನಿನ್ನಮಾನ|ನಿನ್ನ ಮರೆತು ತಿರುಗುವುದು ಎನ್ನ ಅಪಮಾನ 4ನೀನಲ್ಲದೆ ಇನ್ನಾರಿಗೆ ಮೊರೆ ಇಡುವೆ |ಎನ್ನ ಪುರಂದರವಿಠಲ ನಿನಗೆ ಪೇಳುವೆ 5
--------------
ಪುರಂದರದಾಸರು