ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೇಕಿಲ್ಲ ಬೇಕಿಲ್ಲ ಇಹಲೋಕಾಡಂಬರವು ಸಾಕೀ ನಿನ್ನನು ಧ್ಯಾನಿಪ ಪರಲೋಕ ಜ್ಞಾನವನು ಪ. ಶ್ರೀಪ ಕರುಣಿಸಿ ನಿನ್ನ ಸ್ವಂತ ಜನರನ್ನೂ ಕಾಪಾಡೊ ದೊರೆಯೆ ಅ.ಪ. ನಿನ್ನ ಭಕ್ತರ ಸಂಗವನ್ನು ಕೃಪೆದೋರಿ ಸಲಹೊ ಚನ್ನ ಕೇಶÀವರಾಯ ಇನ್ನು ಕೃಪೆ ಮಾಡೊ 1 ಯನ್ನಪರಾಧಗಳನ್ನು ಎಣಿಸುವರೆ ದೇವ ಸನ್ನುತ ಚರಿತ ಭಕ್ತ ಸನ್ಮಾನಯುತ ನಿನ್ನ ಮಹಿಮೆಗಳನ್ನು ವರ್ಣಿಸಲಳವೆ ಮುನ್ನ ಶೇಷಾನಿಂದ ಸೇವ್ಯವಾಗಿರಲೂ ಯನ್ನಿಂದಾಡಿಶಿ ನೀನು ಸನ್ಮಾನಕೊಂಡು ನಿನ್ನಾ ಭಕ್ತಳೆಂದು ಸ್ತುತಿಗೊಂಡು ನಲಿನಲಿದೆ 2 ಯೆನ್ನಿಂದೇನಹುದೋ ಮನ್ಮನದೊಡೆಯ ಚನ್ನ ಶೇಷಾದ್ರಿನಿವಾಸ ಘನ್ನ ಶ್ರೀ ಶ್ರೀನಿವಾಸ ನೀನೇ ಆಡಿಸುತ ನೀನೇ ಮಾಡಿಸುತ ದಾಸಿ ನೀನಾಗಿರೆ ನಾನೇನ ಬಲ್ಲೆನೊ 3
--------------
ಸರಸ್ವತಿ ಬಾಯಿ