ಕ್ಷಣದಲಿ ಸೌಖ್ಯ ಕ್ಷಣದಲಿ ದುಃಖ
ಬಣಗು ಸಂಸಾರದಿ ಎಣಿಸಿದರೆ ಪ
ಕೊಟ್ಟರೆ ತಂದರೆ ಸಂತೋಷ
ಬಿಟ್ಟರೆ ಕೊಡದಿರೆ ಬಲುರೋಷ 1
ಎರೆಡು ಘಳಿಗೆ ಬಹಳಾಯಾಸ
ಏನು ಇಲ್ಲ ಕೊನೆಗೆ ನಿರಾಶ 2
ತಾನೇಕಾದಶಿ ಪಿಕ್ನಿಕ್‍ವೂಟ
ಭಾನುವಾರ ಇಸ್ಪೇಟಾಟ3
ಕೋಟುಷರಟು ಜುಬ್ಬ ಇಜಾರು
ನೋಟಕೆ ಮೇಲೆ ಕಾರ್ಬಾರು 4
ಕರುಡು ಕುಂಟ ಮೂಕರು ಮಾತ್ರ
ಸತ್ಪಾತ್ರ 5
ಅತಿಜಾರಿಗೆ ಕೆಂಪು ಬೆಂಡೋಲೆ 6
ಹಾದರಗಿತ್ತಿಗೆ ದೂದ್‍ಫೇಢ
ಸಾಧುಸ್ತ್ರೀಗನ್ನವು ಬೇಡ 7
ಹಿರಿಯರ ಮಾತಿಗೆ ನಾನ್ಸೆನ್ಸು
ದುರುಳರ ಬೋಧೆಗೆ ತಾ ಒಳ್ಳೆಮನಸು 8
ಮೋಕ್ಷವಿದ್ಯೆ ಕೆಲಸಕೆ ಬಾರದು
ಕುಕ್ಷಿಂಬರ ವಿದ್ಯೆ ಬಲು ದೊಡ್ಡದು 9
ಹರಿಕಥೆ ಕೇಳ್ವುದು ಬೇಜಾರು
ಹರಟೆ ಹರಟುವುದು ಬಲು ಜೋರು 10
ಪರರ ನೋಡಿ ನನ್ನಾಚರಣೆ
ಗುರುರಾಮ ವಿಠಲನಲಿಲ್ಲ ಸ್ಮರಣೆ 11