ಒಟ್ಟು 24 ಕಡೆಗಳಲ್ಲಿ , 15 ದಾಸರು , 24 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಪ್ಪ ಕೇಳೋ ಬೇಡಿಕೊಂಬೆ ನಿನ್ನ ತಿಳಿಯಪ್ಪಒಪ್ಪಿ ಮಾತನ್ನಾಡಿಸಿದರೆ ನೀನೆ ಜಗದಪ್ಪ ಪ ನಾನದಾರು ಬಂದೆನೆಲ್ಲಿಗೆ ಎನ್ನುತ ನೀನಪ್ಪನಾನು ಹೋಗುವೆ ಎಲ್ಲಿಗೆ ಎಂದು ಚಿಂತಿಸು ನೀನಪ್ಪನೀನು ಸುಳಿಗಾಳಿಯ ಶಾವದ ತೆರದಂದದಿ ಇಹೆಯಪ್ಪನಾನಾ ಭವವಾಚರಿಸುತಿಹೆ ಆದಿ ಅಂತ್ಯವಿಲ್ಲಪ್ಪತನುವ ನೆಚ್ಚಬೇಡ ಮೊದಲಿನ ತನುವದೇನಾಯಿತಪ್ಪತನಯ ಸತಿಯರನೆಲ್ಲ ಬಿಟ್ಟುಬಂದೆ ನೀನುಮನೆ ಕಟ್ಟುವೆ ನೀನು ಮೊದಲಿನ ಮನೆ ಏನಾಯಿತಪ್ಪಾನಿನಗೆ ಕುಲವು ಎಷ್ಟಾದವು ಎಣಿಸಿಕೊಳ್ಳಪ್ಪ2 ಹಿಂದೆ ಮುಂದೆ ಕಾಣದಂತೆ ತಿರುಗಿ ತಿರುಗಿ ಅಪ್ಪಬೆಂದು ಬೆಂದು ಓಡಾಡುತಿಹೆ ಸ್ವರ್ಗ ನರಕಕಪ್ಪಎಂದೆಂದಿಗೂ ಅರಿವಾಗದ ಮರೆವು ಮುಚ್ಚಿ ಅಪ್ಪಅಂಧಕಾರ ಸಂಸಾರದಿ ಕಳವಳಿಸುತ ಅಪ್ಪ3 ಕಣ್ಣುಯಿದ್ದು ಕಣ್ಣಿಗೀಗ ಬೀಳಬೇಡವಪ್ಪನಿನ್ನ ನರಿವುದಕ್ಕೆ ಮನುಜ ಜನ್ಮ ಸಾಧನವಪ್ಪಹೊನ್ನು ಹೆಣ್ಣು ಮಣ್ಣು ಎನಗೆ ಬೇಡ ಬೇಡಪ್ಪಎನ್ನ ಬೋಧೆ ಕೇಳದಿರಲು ಕೆಟ್ಟುಹೋದೆಯಪ್ಪ 4 ವಾಸನದಿಂದ ತಿರುಗುವೆ ರಾಟಾಳರಂತಪ್ಪದೇಶಿಕ ಸದ್ಗುರು ಹೊಂದು ದೇವನಹೆಯಪ್ಪನಾಶವಹವು ನಾನಾ ಗುಣಗಳು ಜೀವನ ತನುವು ಅಪ್ಪಈಶ ಚಿದಾನಂದನಹೆ ಜನ್ಮವಳಿದು ಅಪ್ಪ 5
--------------
ಚಿದಾನಂದ ಅವಧೂತರು
ಎಣಿಸಿಕೊ ನಿನ್ನೊಳಗಣ ದೋಷಗಣವಾಗಣಿಸು ಪರರೊಳಿಪ್ಪ ಶುಭಕರ ಗುಣವಾ ಪಪರರ ಬಾಗಿಲ ಕಾಯ್ದು ಪರಿಪರಿ ನುತಿಗೈದುಕರಗಿಸಿ ಮನವ ಬೋಧಿಸಿ ತತ್ವವಾಪಿರಿದಾಗಿಯವರ 'ತ್ತಾದಿಗಳೊಳು ಮನ'ರಿಸಿ 1ದೊರೆಯದಿರೆ ಪರಸತಿ ಪರಧನ ಪರರನ್ನಪರನಾಗಿ ಪರಿಪರಿಯುಪಚಾರಗೈದವರಪರ[ವಶ]ವ ಪಡೆದಿರುತವರೊಳು ದೋಷವೆರಸಿದ ಗುಣಗಳನರಸಿ ಕೆಡುವೆಯಾಕೆ 2ನಿನ್ನೊಳುದಿಸಿದ ಸದ್ಗುಣ ನಿನ್ನ ಭೂಸಿಯುನ್ನತನೆನಿಸಿಯೆ ರಕ್ಷಿಪುದೂನಿನ್ನೊಳಗಣ ದುರ್ಗುಣ ನಿನ್ನುವ ದೂಸಿಕಣ್ಣುಗೆಡಿಸಿ ಕೊಂದು ಕೂಗುವದದರಿಂದಾ3ಮೂಳ ಹೆಮ್ಮೆಯ ಬಿಡು ತಾಳುಖೂಳವಾದವ ಸುಡು ಹರುಷ ಬಿಡುಶೀಲತನವ ಹೂಡು ಬಾಳುವದನು ನೋಡುನಾಳೆ ತಾನಿರುವದೊ ಬೀಳುವದೋ ಗೂಡು 4ಪರರ ನಿಂದಿಸಿ ದೋಷ ಪಿರಿದಾಗಲಾಯಷ್ಯಕಿರಿದಾಗಿಯೂ ಕರ್ಮ ಸೂಕರ ಜನ್ಮಗೊಡದೆ ತೊಲಗಿ ಪೋಗುವುದರಿಂದಾ 5ವರಜನ್ಮಾಂತರದೆ ಸದ್ಗುಣ ಲೇಶ'ರಲದನೆ ಗಣಿಸುತ 'ಗ್ಗಲುಕರಗಿ ನಿನ್ನಯ ದೋಷ 'ರಿದುಮ್ಮಳವ ಪಡೆದಿರುವೆ ಸುಖ ಮತ್ತೆ ಪರಗತಿ ಪಡೆಯುವೆ 6ಗುರುವಾಸುದೇವಾರ್ಯ ಚರಣದೊಲವ ಪಡೆಯುವರೆಪರಗುಣಗಳ ಗಣಿಸು ಕಂಡ್ಯಾಕರುಣದಿಂ ಚಿಕನಾಗಪುರಪತಿ ವೆಂಕಟಗಿರಿವಾಸ ಸನ್ನಿಧಿ ದೊರೆಯುವದಿದರಿಂದಾ 7
--------------
ತಿಮ್ಮಪ್ಪದಾಸರು
ಏನು ಕಾರಣ ಮತಿಯಿಲ್ಲ ಮನವೆ ಪ ಹೀನಾಯವಾಡದಿರು ಪರರ ಗುಣಗಳ ಎಣಿಸಿ ಅ.ಪ ಅವನ ಗೊಡವೆಯೇಕೆ ಅವನಾರು ನೀನಾರು | ಅವನ ಪಾಪಕ್ಕೆ ನೀ ಭಾಗಾದಿಯೆ | ಅವನುತ್ತಮನಾದಡವನೆ ಬದುಕಿದ ಕಾಣೊ ಅವ ಪುಣ್ಯಮಾಡಿದರೆ ಅವನ ಕುಲ ಉದ್ಧಾರ 1 ನಿನಗೆ ಕೊಡುವುದರೊಳಗೆ ಬೇಡ ಬಂದವನಲ್ಲ | ನಿನಗೆ ಅವನಿಗೆ ಏನು ಸಂಬಂಧವೊ | ಮನೆ ಒಡವೆ ವಸ್ತುಗಳ ಹಂಚಿಕೊಂಬುವುದಲ್ಲ | ಕ್ಷಣ ಕ್ಷಣಕೆ ಕ್ಲೇಶವನು ಮಾಡಿಕೊಂಬುದು ಸಲ್ಲ 2 ನಿನ್ನ ಗತಿ ಮಾರ್ಗಕ್ಕೆ ಅವನಡ್ಡ ಬಾಹನೆ | ನಿನ್ನಿಂದ ಪರಲೋಕ ಅವನಿಗುಂಟೆ | ನಿನ್ನೊಳಗೆ ನೀ ತಿಳಿದು ವಿಜಯವಿಠ್ಠಲನ್ನ | ಸನ್ನುತಿಸಿ ಭವರೋಗ ಬನ್ನವನು ಕಳೆಯೊ 3
--------------
ವಿಜಯದಾಸ
ಕಮಲ ನಯನ |ಬರಿದೆ ಬಳಲಿಸಬೇಡ | ಮರುತ ಪ್ರಿಯ ದೇವ ಪ ಮಣಿ ಭೂಷಣಾದಿಗಳುಇನಿತು ಯೇನೇನುಂಟೊ | ವನಜ ಜಾಂಡದಲೀಎಣಿಸಿಹೆನೊ ನಶ್ವರವು | ಎನಿತೆಂದು ಶ್ರೀಹರಿಯೆಘನ e್ಞÁನ ಕೊಡು ಎಂದು | ಮಣಿದು ಬೇಡುವೆನೋ 1 ಕೃತ್ತಿ ವಾಸನ ತಾತ 2 ಭವ ನೀಗೋ3
--------------
ಗುರುಗೋವಿಂದವಿಠಲರು
ಕ್ಷಣದಲಿ ಸೌಖ್ಯ ಕ್ಷಣದಲಿ ದುಃಖ ಬಣಗು ಸಂಸಾರದಿ ಎಣಿಸಿದರೆ ಪ ಕೊಟ್ಟರೆ ತಂದರೆ ಸಂತೋಷ ಬಿಟ್ಟರೆ ಕೊಡದಿರೆ ಬಲುರೋಷ 1 ಎರೆಡು ಘಳಿಗೆ ಬಹಳಾಯಾಸ ಏನು ಇಲ್ಲ ಕೊನೆಗೆ ನಿರಾಶ 2 ತಾನೇಕಾದಶಿ ಪಿಕ್ನಿಕ್‍ವೂಟ ಭಾನುವಾರ ಇಸ್ಪೇಟಾಟ3 ಕೋಟುಷರಟು ಜುಬ್ಬ ಇಜಾರು ನೋಟಕೆ ಮೇಲೆ ಕಾರ್ಬಾರು 4 ಕರುಡು ಕುಂಟ ಮೂಕರು ಮಾತ್ರ ಸತ್ಪಾತ್ರ 5 ಅತಿಜಾರಿಗೆ ಕೆಂಪು ಬೆಂಡೋಲೆ 6 ಹಾದರಗಿತ್ತಿಗೆ ದೂದ್‍ಫೇಢ ಸಾಧುಸ್ತ್ರೀಗನ್ನವು ಬೇಡ 7 ಹಿರಿಯರ ಮಾತಿಗೆ ನಾನ್ಸೆನ್ಸು ದುರುಳರ ಬೋಧೆಗೆ ತಾ ಒಳ್ಳೆಮನಸು 8 ಮೋಕ್ಷವಿದ್ಯೆ ಕೆಲಸಕೆ ಬಾರದು ಕುಕ್ಷಿಂಬರ ವಿದ್ಯೆ ಬಲು ದೊಡ್ಡದು 9 ಹರಿಕಥೆ ಕೇಳ್ವುದು ಬೇಜಾರು ಹರಟೆ ಹರಟುವುದು ಬಲು ಜೋರು 10 ಪರರ ನೋಡಿ ನನ್ನಾಚರಣೆ ಗುರುರಾಮ ವಿಠಲನಲಿಲ್ಲ ಸ್ಮರಣೆ 11
--------------
ಗುರುರಾಮವಿಠಲ
ಕ್ಷೇತ್ರದರ್ಶನ ಅ. ಕಂಚಿ ಕರಿಗಿರಿವಾಸ ವರದರಾಜ ಕರಿಗಿರಿವಾಸ ಪ ದುರಿತ ವಿನಾಶನೆ ಸುರಮುನಿ ಪೋಷನೆ ಭವರೋಗ ನಾಶನೆ ಅ.ಪ ರಾಜನೆಂಬೊ ಬಿರುದು ಪೊತ್ತಿಹ ದೇವ 1 ಮಾಯೆಯ ಬಿಡಿಸೊ ನಿನ್ನಲಿ ಎನಗೆ ಮೋಹವ ನಿಲಿಸೊ ಪಾದಧ್ಯಾನವನಿತ್ತು ಕಾಯೊ ವರದರಾಜ 2 ಚತುರಹಸ್ತದಲೀ ಕೈಪಿಡಿದು ದಿವ್ಯವಾದ ಶಂಖಚಕ್ರಗದೆಯಲಿ ನಿಮ್ಮ ಪಾದವ ಸೇರಿಸು ಎನ್ನ ಚಿತ್ತಜಜನಕ 3 ಹಾ ಕೃಷ್ಣ ಎಂದು ದ್ರೌಪದಿ ಕರೆಯೆ ಮನಕೆ ನೀತಂದು ಅಕ್ಷಯ ಮಾಡಿದೆ ಪಕ್ಷಿವಾಹನ ಪಾಂಡವಪಕ್ಷ ಶ್ರೀಕೃಷ್ಣ 4 ಇನ್ನು ನಾ ಜನಿಸಲಾರೆನೊ ಹೀನಜನ್ಮದಿ ಮನ್ನಿಸಿ ರಕ್ಷಿಸೊ ಎನ್ನ ವರದರಾಜ5 ಭವಬಿಸಲಿನಲಿ ಬಳಲಿ ಬಂದೆ ತಾಪತ್ರಯದಲ್ಲಿ ನಿಮ್ಮ ಚರಣ ಪಂಕಜವೆಂಬೊ ಆತಪತ್ರದ ನೆರಳ ತಾಪ ದೂರ ಮಾಡಿಸೊ ದೇವ 6 ನಾಮಾಡಿದಂಥ ಪಾಪಗಳೆಲ್ಲ ಸಾವಿರ [ಅ]ನಂತ ಎಣಿಸಿ ನೋಡಲು ಏನೂ ದಾರಿಯ ಕಾಣೆನು [ಎನ್ನ] ಸರ್ವಾಪರಾಧವ ಕ್ಷಮಿಸಿ ರಕ್ಷಿಸೊ ದೇವ 7 ವಿಂದ್ಯಾರಣ್ಯದಲಿ ಭಕ್ತರು ಕರೆಯೆ ಬಂದೆ ಬೇಗದಲಿ ಇಂದಿರೆ ಸಹಿತಾಲೆ ತೀರ್ಥವ ಗ್ರಹಿಸಿ ಭಕ್ತರ ಕರೆ ತಂದು ಕರಿಗಿರಿಯಲಿನಿಂದ ವರದರಾಜ ಕರಿಗಿರಿವಾಸ 8
--------------
ಯದುಗಿರಿಯಮ್ಮ
ತನುಮನದಲ್ಲಿ ಯೋಚನೆ ಮಾಡೀ ಎಣಿಸಿ ಗುಣಿಸಿ ಮನಸಿಜನ್ನ ಜನಕನ ಲೀಲೆ ಪ ನರನಾರಾಯಣನೀತ ಕೃಷ್ಣ ಹರಿ ಹೃದ್ಭಾನು ಕಪಿಲನೀತ ಹರಿನಾರಾಯಣೇನೀತ ಯೋಗೀ ಶ್ವರ ತಾಪಸ ವೈಕುಂಠನೀತ ಹರನಸಖ ಸ್ವಧಾಮನೀತ ಕರುಣಿ ಸಾರ್ವಭೌಮನನೀತಾ 1 ಅಜಿತಯಜ್ಞನಾಮನೀತ ಅಜಗೆ ಪೇಳಿದ ಹಂಸನೀತ ಸುಜನಪಾಲ ವ್ಯಾಸ ವೀ ರಜ ಮಹಿದಾಸ ದತ್ತನೀತ ನಿಜ ಮಹಿಮ ಧನ್ವಂತ್ರಿ ಈತ ತ್ರಿಜಗವಳೆದುಪೇಂದ್ರನೀತ ಭಜಕರೊಡಿಯ ವಿಷಕ್ಸೇನ ಭುಜಗಶಾಯಿವಿಭುವೆ ಈತ 2 ಚಲುವ ಧರ್ಮಶೇತು ಈತ ಬಲುವುಳ್ಳ ಶಿಂಶುಮಾರನೀತ ಮತ್ಸ್ಯ ಕೂರ್ಮವರಹ ಲಲಿತನರಸಿಂಹನೀತ ಬಲಿಗೊಲಿದ ವಾಮನ್ನನೀತ ಕುಲವೈರಿ ರಘರಾಮನೀತ ಕಲಕಿ ರೂಪನಾದನೀತಾ 3 ವಾಸುದೇವ ಜಯಪತಿ ಸುಂ ದರ ಪ್ರದ್ಯುಮ್ನ ಈತ ನಿರಂತರ ಅನಿರುದ್ಧನೀತ ಚ ತುರ ವಿಂಶತಿ ಮೂರುತಿಯೇ ಈತ ಮೆರೆವ ಅಜಾದಿ ನಾಮಕನೀತ ವರ ಪಂಚಮೂರುತಿಯೇ ಈತಾ ಎರಡೈದು ಮೇಲೊಂದನೀತ 4 ಪರಿಪರಿ ರೂಪ ಉಳ್ಳನೀತ ಹೊರಗೆ ಒಳಗೆ ವ್ಯಾಪ್ತನಾಗಿ ಸರಿಸರಿ ಬಂದ ತೆರದಿ ಜಗವ ಸರಸದಲಿ ಆಡಿಪನೀತ ಸ್ಮರಣೆ ಮಾಡಲು ಸಕಲ ಇಷ್ಟವ ಕರೆÀದು ಕೊಡವನೀತ ಮರಣ ಜನನರಹಿತ ನೀತ 5
--------------
ವಿಜಯದಾಸ
ತಾಮರಸ ನೆರೆ ನಂಬಿದೆ ಪ ಕಾಮಕ್ರೋಧವ ಕಳೆದು ನಿನ್ನ ನಾಮಾಮೃತವ ಪ್ರೇಮದಲಿ ಎನಗುಣಿಸೋ ಸ್ವಾಮಿ ಅ.ಪ. ಉಪರಾಗ ದಶಮಿ ದ್ವಾದಶಿ ದಿವಸ ಮೊದಲಾದ ಉಪೇಕ್ಷೆ ಮಾಡಿ ಕಳೆದೆ ಉಪಕಾರಯೆಂದು ನಿಜ ಉಕ್ತಿ ಪೇಳಿದರೆನಗೆ ಅಪಕಾರ ಕಾಣುತಿದೆಕೋ ನಿಪುಣನೆನಿಸುವೆನೆಂದು ಅe್ಞÁನಿಗಳ ಮುಂದೆ ತಪ ವೃದ್ಧರನ್ನು ಹಳಿವೆ ಸ್ವಪನದೊಳಗಾದರೊ ವೈರಾಗ್ಯ ಬಯಸದಲೆ ಕಪಟ ಮನುಜರೊಳಾಡಿ ನಿನ್ನ ಮರೆದೆ ಸ್ವಾಮೀ 1 ಮಾರನ ಉಪಟಳಾಕಾರದಲಿ ನಾ ಬಲು ಪೋರ ಬುದ್ಧಿಯನು ಮಾಡಿ ಆರು ಇಲ್ಲದ ಸಮಯದೊಳವಳು ಕಣ್ಣು ಸನ್ನೆಯ ಮಾಡಿ ಕೋರಿದ್ದು ಇತ್ತು ನೀಡಿ ಕ್ರೂರಮಾನವರೊಳಗೆ ಆಡಿ ವಾರಿಜನಾಭ ನಿನ್ನ ಆರಾಧನೆಯ ಮರೆದು ಧಾರಿಣೀ ಭಾರದೆ ಪರಲೋಕ ಮರೆದೆ 2 ಭೂಸುರರು ಚಂಡಾಲ ಜಾತಿಯೆನ್ನದೆ ಬಲು ಹೇಸಿಕಿಲ್ಲದೆ ತಿರುಗುವೆ ಪರಿ ವೇಷವನು ಧರಿಸಿ ಮೆರೆದೇ ಆಶೆಯುಳ್ಳ ಮಹಪಿಶಾಚಿಗೊಳಗಾಗಿ ಹರಿ ದಾಸ ಸಹವಾಸ ಜರೆದೆ ವಾಸುಕೀಶಯನ ವಸುದೇವತನಯನೆ ನಿನ್ನ ದಾಸನೆನ್ನಿಸದೆ ಅಪಹಾಸ ಮಾನವನಾದೆ 3 ಹರಿದಾಸರ ಬಳಿ ಅರಘಳಿಗೆ ಕೂತರೆ ಶಿರವ್ಯಾಧಿಯೆಂದೇಳುವೇ ದುರುಳ ದುರ್ವಾರ್ತೆಗಳ ಪೇಳಲು ಹಸಿವು ತೃಷೆ ಮರೆದು ಲಾಲಿಸಿ ಕೇಳುವೆ ತರುಣಿ ಮಕ್ಕಳು ಎನ್ನ ಪರಿಪರಿ ಬೈದರೆ ಪರಮ ಹರುಷವ ತಾಳುವೆ ಗುರುಹಿರಿಯರೊಂದುತ್ತರವನಾಡಲು ಕೇಳಿ ಧರಿಸಲಾರದೆ ನಾನು ಮತ್ಸರಿಪೆನವರೊಡನೇ 4 ನಾ ಮಾಡಿದಪರಾಧ ಎಣಿಸಿ ಬರೆದರೆ ಈ ಭೂಮಂಡಲವು ಸಾಲದಿಹುದೊ ಕ್ಷಮೆಯೊಳಗುಳ್ಳ ದುರ್ಮತಿ ಕೂಡಿಡಲು ಈ ಮತಿಯ ಅದು ಪೋಲದು ಹೋಮ ಜಪತಪಗಳನು ಎಷ್ಟು ಮಾಡಲು ಪಾಪ ಸ್ತೋಮ ಎಂದಿಗು ಪೋಗದೊ ಸಾಮಜವರದ ಜಗನ್ನಾಥ ವಿಠಲ ನಿನ್ನ ಕಾಣಿ 5
--------------
ಜಗನ್ನಾಥದಾಸರು
ನಮೋ ನಮೋ ಭೀಮಾ | ಜೀವೋತ್ತುಮಾಪ್ತ ಜನ ಪ್ರೇಮಾ ಪ ಕುಮಾನ ಜನ ಸುಪ್ರಮೋದ ವಿನಾಶಕ ಶಮಾದಿ ಗುಣನಿಧೆ | ಕ್ಷಮಾಪಣಂ ಕುರು ಅ.ಪ. ಕಾನನ ಸುಕುಠಾರ ||ಭ್ರಾಂತ ದುಶ್ಯಾಸನ | ಅಂತ್ಯವ ಕಾಣಿಸಿಕಾಂತಾ ಮಣೀಯನು | ಸಂತೋಷ ಪಡಿಸಿದೆ 1 ಗೋಪಿ | ನಂದಾನಗತಿ ಪ್ರೀಯವಂದೀಸಿ ಬೇಡುವೆ | ಕುಂದೂಗಳೆನ್ನಯನೊಂದಾನು ಎಣಿಸಿದೆ | ನಂದನ ಪಾಲಿಸೊ 2 ಕಾಯ ಭವ ಮುಖಾದಿ ಗೇಯ ||ಅವಿರತದಿ ಗುರು | ಗೋವಿಂದ ವಿಠಲನಸ್ತವನ ಗೈವನ | ಭವವ ಕಳೆಯುವ 3
--------------
ಗುರುಗೋವಿಂದವಿಠಲರು
ನಿನ್ನ ದರುಶನಕೆ ಬಂದವನಲ್ಲವೊ ಪುಣ್ಯವಂತರ ದಿವ್ಯ ಚರಣ ನೋಡಲಿ ಬಂದೆ ಪ ಎಲ್ಲೆಲ್ಲಿ ನಿನ್ನ ವ್ಯಾಪ್ತತನವಿರಲಿಕ್ಕೆ ಇಲ್ಲಿಗೆ ಬರುವ ಕಾರಣವಾವುದೊ ಸೊಲ್ಲಿಗೆ ಕಂಭದಲಿ ತೋರಿದ ಮಹಾಮಹಿಮ ಅಲ್ಲಿ ಇಲ್ಲೇನಯ್ಯ ಬಲ್ಲ ಭಜಕರಿಗೆ1 ಕರೆದಾಗಲೆ ಓಡಿ ಬಂದೊದಗುವ ಸ್ವಾಮಿ ಮರಳಿ ಗಾವುದ ಎಣಿಸಿ ಬರಲ್ಯಾತಕೊ ನೆರೆ ನಂಬಿದವರಿಗೆ ಆವಲ್ಲಾದರೇನು ಅರಿದವರ ಮನದೊಳಗೆ ನಿಂದಾಡುವ ಚಂದವಾ 2 ಕಠಿನವೊ ನಿನ್ನ ಭಕುತರನ ನೋಡುವ ಲಾಭ ಸಟೆಯಲ್ಲಾ ವೇದಗಳು ಸಾರುತಿವಕೊ ವಟು ಮೊದಲಾದ ವೈಷ್ಣವಾಗ್ರೇಸರಂಘ್ರಿ ತ್ರಿಟಿಯಾದರೂ ಎನಗೆ ಸೋಕಲು ಗತಿಗೆ ದಾರಿ3 ಧ್ಯಾನಕ್ಕೆ ಸಿಲುಕುವನೆ ನಿನ್ನ ಕಾಣಲಿಬಹುದು e್ಞÁನಿಗಳು ಎಂತು ಬರುವರೊ ಅಲ್ಲಿಗೆ ಅನಂತ ಜನುಮದಲ್ಲಿ ಜಪ ತಪ ಹೋಮ ವ್ರತ ಏನೇನು ಮಾಡಿದರು ಇಷ್ಟು ಜನ ಕೂಡುವದೇ4 ನೀನಿದ್ದ ಸ್ಥಾನದಲಿ ಸಕಲ ಪುಣ್ಯಕ್ಷೇತ್ರ ನೀನಿದ್ದ ಸ್ಥಾನದಲಿ ಸರ್ವತೀರ್ಥ ನೀನಿದ್ದ ಸ್ಥಾನದಲಿ ಸಮಸ್ತ ತಾತ್ವಿಕರು ನಾನಿತ್ತ ಬರುವುದು ನಿನಗೆ ತಿಳಿಯದೆ ಸ್ವಾಮಿ5 ಇದನೆ ಲಾಲಿಸು ಜೀಯಾ ನಿನ್ನದೊಂದೇ ಮೂರ್ತಿ ನಿದರುಶನವಲ್ಲದೆ ಮಿಗಿಲಾವುದೊ ಪದೋಪದಿಗೆ ಮಧ್ವಮತ ಹೊಂದಿದ ಸುಜನರ ಹೃದಯದೊಳಗಾನಂತಪರಿ ನಿನ್ನ ರೂಪಗಳು 6 ಭಳಿರೆ ತಿರುಮಲರಾಯ ನಿನ್ನ ಕರುಣಾ ರಸಕೆ ವೊಲಿದು ಭಕುತರಿಗಾಗಿ ಮದುವೆ ಹಮ್ಮಿಕೊಂಡೆ ಸುಲಭ ದೇವರದೇವ ವಿಜಯವಿಠ್ಠಲ ವೆಂಕಟಾ7
--------------
ವಿಜಯದಾಸ
ನೋಡಿದೆನು ಯಾದವ ಕೃಷ್ಣನ | ಪಾಡಿದೆನೊ ಮನದಣಿಯ ವರಗಳ | ಬೇಡಿದಾಕ್ಷಣ ಕೊಡುವ ಜಗತ್ರಯ | ವಾಡಿಸುವ ವಾಗೀಶ ಜನಕನ ಪ ಮೇದಿನಿ ಪ್ರ | ಹ್ಲಾದ ಸುರಪನ ಕಾದ ವಂಶವ | ಛೇದ ಸಾಗರ | ಹಾದಿ ಬಿಗಿದ ಗೋಯಿದ ಬತ್ತಲೆ | ಯಾದ ತುರಗವ | ಬೀದಿ ವದಿಸಿದನೀತ ಹಯಮೊಗ | ಬಾದರಾಯಣ ದತ್ತ ವೈಕುಂಠ | ಬೋಧ ಮೂರುತಿ ಕಪಿಲ ನಾನಾ ವಿ | ನೋದ ರೂಪದ ಆದಿ ದೈವವ 1 ಜನನಿಗಾಟವ ತೋರಿ ಕಡಗೋ | ಲನು ನೇಣರು ಕರದಲಿ ಪಿಡಿದು | ರು ಕ್ಮಿಣಿಯ ಕೈಯಿಂದ ಪೂಜೆಗೊಂಡರ್ಜು | ಗೋಪಿ ಚಂ | ದನದೊಳಡಗಿ ಅಲ್ಲಿಂದ ಆನಂದ | ಮುನಿಗೊಲಿದು ಬಲು ವೇಗ ಪಡುವಣ | ವನಧಿ ತೀರದಲಿಪ್ಪನಂತಾಸನ ಬಳಿಯ ನಿಂದಿದ್ದ ಚಲುವ 2 ಸುತ್ತ ಯೋಜನ ಕ್ಷೇತ್ರವಿದರೊಳು | ಉತ್ತಮ ವಿಮಾನ ವೇದ ಪ | ರ್ವತಗಳು ಅಲ್ಲೆಲ್ಲಿ ಸರೋವರ | ಕತ್ತಲಿಗಭಿಮಾನಿನಿ ದುರ್ಗಾ | ದುರಿತ ಪರಿಹರ | ಸೋತ್ತಮರಿಗಿದು ಸಿದ್ಧ ಸರ್ವದ | ತತ್ತಳಿಪ ಪರತತ್ವ ಹರಿಯ3 ತಂತ್ರ ಸಾರೋಕ್ತದಲಿ ಪೂಜೆ ನಿ | ರಂತರದಿ ಕೈಗೊಂಬ ಬಲು ಗುಣ | ವಂತ ನೀತನ ಹೊಳವು ಪೊಗಳಿದ | ರಂತ ಗಾಣವು ಶ್ರುತಿ ಪುರಾಣಗ | ಳೆಂತು ಪೇಳಲಿ ಮೆರೆವ ವೈಭವ | ಸಂತರಿಗೆ ಅತಿ ಪ್ರಿಯನಾಗಿಪ್ಪ | ನಿತ್ಯ ಸ್ವಾತಂತ್ರ ಪುರುಷನ 4 ಮಕರ ತಿಂಗಳು ಮೊದಲು ಪಕ್ಷದ | ಲಕುಮಿರಮಣನ ದಿವಸದಲ್ಲೀಗ | ಭಕುತಿಯಿಂದಲಿ ಬಂದು ವಂದಿಸಿ | ಅಕುಟಿಲರ ವೊಡಗೊಡಿ | ನಿಂದು ಗೋ | ಳಕವ ಚಿಂತಿಸಿ ಸ್ನಾನ ಒಂದೆ | ಸುಖ ತೀರ್ಥ ಸರೋವರದಲಿ ಮಾಡೆ | ಮುಕುತರೊಳು ಪೊಂದಿಸುವ ದಾತನ 5 ಶುಕ್ರವಾರದ ಪೂಜೆ ನೋಡಲು | ವಕ್ರಗತಿಗಳು ಮುಟ್ಟಲಂಜೊವು | ಚಕ್ರವರ್ತಿ ತಾನಾಗಿ | ಸಕಲ ಪರಾಕ್ರಮದಲಿ ಚರಿಸಿ ಜಗದೊಳು | ಶುಕ್ರ ದೇವಸ್ಥಾನದೊಳು ಕಾ | ಲಕ್ರಮಣ ಮಾಡೆ | ಗೋತ್ರದೊಡನೆ ಪೂ ರ್ಣ ಕ್ರೀಡೆÀಯಾಡಿಸುತ ಸಲಹುವ | ಚಕ್ರಧರ ಅಕ್ರೂರ ವರದನ 6 ಕಣಿಸಿ ಉಡಿಸುವ ಕುಣಿಸಿ ನೋಡುವ | ಕನಸಿನೊಳಗಾವಾಗ ತನ್ನನು | ಮನಸಿನಲಿ ಕ್ಷಣ ಬಿಡದೆ ಗುಣಗಳ | ಎಣಿಸಿ ಮೈ ಮರೆದಡಿಗಡಿಗೆ ಈ | ತನುವೆ ನಿನ್ನಾಧೀನವೆಂದಾ | ಜನರಿಗಪವಾದ ಬರಲೀಸನು | ದನುಜದಲ್ಲಣ ವಿಜಯವಿಠ್ಠಲನ್ನ 7
--------------
ವಿಜಯದಾಸ
ಪಾರ್ವತಿದೇವಿ ಗಿರಿಜೆ ನೀ ಒಲಿಯುವರೇ ಪರಶಿವನು ತಕ್ಕ ವರನೆಂದು ಮೆರೆಯುವರೆ ಪ ಪರಮ ವೈಷ್ಣವ ಭಕ್ತಾಗ್ರಣಿಯಾದ ಶಿವನಿಗೆ ಇರುತಿಹ ಕೊರತೆಗಳರಿಯದೆ ಗರುವದಲಿ ಅ.ಪ ಮನ್ಮಥನ ವೈರಿಗೆ ವಾಸಕೆ ಯೋಗ್ಯ ಮನೆಯಿಲ್ಲದಿರುವಾತಗೆ ಮನೆಯು ಮಶಾಣವೆನ್ನುತ ಪೇಳುತಿಹರಿನ್ನು ಸುಮನಸರೊಡಯನೆ ಸಖನಂತೆ ಇದು ಕೇಳು ಮನಸಿನ ಅಭಿಮಾನಿ ಶಿವನು ಘನತರದ ವಿಷಪಾನಗೈದನು ಮನದಿ ಶ್ರೀ ರಘುವರನ ಸ್ಮರಿಸುತ ವೃಷಭ ವಾಹನವೇರಿ ಚರಿಪಗೆ 1 ರುಂಡಮಾಲೆಯ ಧರಿಸಿದ ಕೊರಳೊಳಗೆ ಸರ್ಪ ದಂಡೆ ಅಲಂಕರಿಸಿರುವ ಮಂಡೆಯೊಳಗೆ ಚಲುವ ಗಂಗೆಯ ಧರಿಸಿಹ ಚಂದ್ರಶೇಖರ ಶಿವನೆಂದು ಕರೆಸಿಕೊಂಬ ಕೆಂಡಗಣ್ಣಿನ ಕ್ರೂರರೂಪನ ಕಂಡು ಹರುಷದಿ ಹಿಗ್ಗಿ ನಲಿಯುವಿ ಮಂಡೆಯಲಿ ಕೆಂಜಡೆಯ ಸುತ್ತಿಹ ಹಿಂಡು ವಿಷ ಸರ್ಪಗಳಲಂಕೃತನಿಗೆ 2 ಕರಿಚರ್ಮಾಂಬರನುಡುವ ಕೈಯಲ್ಲಿ ಕಪಾಲ ತಿರಿದುಂಡು ಹರುಷಿಸುವ ಪರಿ ದೈತ್ಯ ಪಿಶಾಚಯಕ್ಷರ ಕೂಡಿ ಚರಿಸುತ್ತ ಕುಣಿಯುತ್ತ ಗೊರವನಂತಿರುತಿಹ ಪರಮ ವೈರಾಗ್ಯವನು ಧರಿಸಿ ಫಣೆಯ ಗಣ್ಣನು ಬಳಿದು ಭಸುಮವ ಚರಿಸುವನು ರುಷಿವರರ ತೆರದಲಿ ಎಣಿಸಿ ಮಣಿಗಳ ಒಲಿಸಿ ಹರಿಯನು 3 ರಾಮಮಂತ್ರವ ಜಪಿಸಿ ರಮಣಿಗೆ ದಿವ್ಯ ರಾಮಚರಿತೆಯ ಬೋಧಿಸಿ ಕಾಮಹರನು ಕೈಲಾಸಪತಿಯು ಮತ್ತೆ ಕಾಮದೇವನು ಎಂಬ ನಾಮಸ್ಮರಿಸುವ ಆ ಮಹಾಗಣಪತಿಯು ಪುತ್ರನು ವೀರಭಕ್ತನು ಸುತನು ಶಿವನಿಗೆ ಪ್ರೇಮದಲಿ ಷಣ್ಮುಖನು ಸುತನೆಂ- ದೀ ಮಹಾಮಹಿಮೆಗಳು ತಿಳಿಯದೆ4 ಸುಂದರಾಂಗಿ ನಿನ್ನಯ ಚಲುವಿಕೆಗೆ ತಕ್ಕ ಚಂದದ ವರನೇ ಕೇಳು ಮಂದರೋದ್ಧರ ಶ್ರೀ ಮುಕುಂದನ ಭಜಿಸಲು ಚಂದದ ವರಗಳ ಕುಂದದೆ ಕರುಣಿಪ ಕಂದುಗೊರಳನು ಶಿವನು ಕಮಲ ನಾಭ ವಿಠ್ಠಲನ ಭಜಿಪ ಸಂತತ ಮಂದಗಮನೆಯ ಇಂದುಧರನಿಗೆ ಚಂದದಲಿ ವನಮಾಲೆ ಹಾಕುತ 5
--------------
ನಿಡಗುರುಕಿ ಜೀವೂಬಾಯಿ
ಮನಕಧೀಶನೆನಿಪ ಗುರುವರಾ | ನಿನ್ನ ಪಾದನೆನೆವೆ ಕಳೆಯೊ ಮಲಿನ ಸತ್ವರಾ ಪ ಅನಿಲ ಸುತನು ಎನಿಸಿ ನೀನು | ಅನಿಲ ನೆನಿಸಿ ಪಾಪತೂಲಘನ ಸುಮೇರುವನ್ನೇ ದಹಿಸೊ | ಅನಲ ಈಕ್ಷಣಾನೆ ಶಿವನೆ ಅ.ಪ. ಅನುದಿನ ಪಾದ | ವನಜ ಭಜಿಪ ಶರಣರೀಗೆತೃಣವು ತೆರನು ಪಾಪ ನಿ5iÀು | ಎಣಿಸಿ ಪೊರೆವುದುಚಿತ5É್ಲ 1 ಗೌರಿಧವನೆ ವಿಷಯ ಮೋಹನ | ಕಳೆದು ವೇಗಸೂರಿ ಜನರ ಸಂಗ ಮಾಡುವ ||ಸಾರ ಮನವವಿತ್ತು ಸಲಹೊ | ಕ್ರೂರಿ ಜನರ ದೂರಮಾಡೊಘೋರಾಘೋರ ರೂಪಿ ಹರನೆ | ಮಾರಪಿತನ ಸಖನೆ ರುದ್ರ 2 ಶುಕ ವಿಭೂತಿ 3
--------------
ಗುರುಗೋವಿಂದವಿಠಲರು
ಮಾನವ ಜನುಮ ನಾನು ಯಾರೆಂಬ ಖೂನವಿಲ್ಲದೆ ಪ ಕಾಲನಾಜ್ಞೆಯನ್ನು ಪಡೆದು ಸೂಳ ಎಣಿಸಿ ಜಗಕಿಳಿದು ಜಾಲಹಾಕಿ ಜವನಗೊಲಿದು ಶೂಲಕ್ಹಾಕುವ ಮಾರಿಗೊಲಿದು 1 ತಂದ ಪುಣ್ಯವನ್ನು ಕೆಡಿಸಿ ಮಂದಿಮಕ್ಕಳನ್ನು ಬಿಡಿಸಿ ಮಂದನೆನಿಸಿ ಕುಂದುಹೊರೆಗೆ ಬಂಧಕ್ಕೆಳೆವ ರಂಡೆನ್ಹೊರೆಸಿ2 ಜನನಿಜನಕರನ್ನು ಜರೆದಿ ಮನೆಯ ಹೆಂಡಿರ ಮಾನ ಕಳೆದಿ ಬಿನುಗು ಸೂಳೆಗೆ ವಶನಾದಿ ಬಿನುಗರೊಳಗೆ ಬಿನುಗನಾದಿ 3 ನೀಗಿದಿ ಕುಲಶೀಲತೆ ಮುದಿ ಗೂಗೆಯಂದದಿ ದಿನಗಳೆದಿ ಭಾಗವತದ ಭಾಗ್ಯ ಮರೆದಿ ಕಾಗೆನುಂಗಿದ ಹೊಲೆಯನಾದಿ 4 ಸಾಧು ಸುಜನಬೋಧ ಜರೆದಿ ವೇದವಾಕ್ಯ ಮೀರಿ ನಡೆದಿ ಶೋಧಿಸಿ ಸಮಯ ತಿಳಿಯದ್ಹೋದಿ ಆದಿ ಶ್ರೀರಾಮಗ್ಹೊರತಾದಿ 5
--------------
ರಾಮದಾಸರು
ಯುವ ಹೊಸಪರಿ ರೂಪದಿ ಪ. ಶಂಖಚಕ್ರ ನಾಮಾಂಕಿತಮಾಗಿಹ ಸಂಕರ್ಷಣ ರೂಪದಿ ಮೆರೆಯುವ 1 ರವಿಶಶಿ ಬಿಂಬಗಳ್ ಎಡಬಲದೋಳ್ ನವವಿಧದಿಂದಲಿ ಮೆರೆಯುವ 2 ನಾಡಿನೊಳೀಪರಿ ಗೂಢರೂಪದಿ ನಾಡಿನ ಭಕ್ತರು ಬೇಡಿದುದೀಯುವ 3 ಎಣಿಸಿ ಗುಣಿಸಲ್ ತಣಿಯದ ಮಹಿಮನ ಮಣಿಸುವೆನು ಶೇಷಗಿರೀವರನಿವನ 4
--------------
ನಂಜನಗೂಡು ತಿರುಮಲಾಂಬಾ