ಬಿಜಯಂಗೈವುದು ತ್ರಿಜಗನ್ಮಾತೆಯೆ ದ್ವಿಜರಾಜಾನನೆಯೇ
ಅಜರಾಜಾತ್ಮಜಸುತನರಸಿಯೇ ಶ್ರೀ ಜಾನಕಿಯೇ ಪ.
ಪವನಜ ಗರುಡರ ಬಗೆಯಿಂ ನಿನ್ನಂ ಸೇವಿಸಲಾನರಿಯೆ
ಕವಿಕುಲ ಚೂಡಾಮಣಿಯೋಲ್ ನಿನ್ನನು ಭಾವಿಸಲೆನಗಳವೇ 1
ನೆಲದೊಳು ನಿನ್ನೀ ನೆಲೆಯಂ ತಿಳಿಯಲ್ ಬಲುಮೆಯದಾರೊಳು ಪೇಳ್
ಚಲದಿಂ ಪೇಳ್ವರು ಕೆಲವರು ನಿನ್ನಂ ಚಂಚಲೆಯನುವೋಲ್ 2
ಎಂತಾದರು ಸುಸ್ವಾಂತದಿ ನಿನ್ನೀ ಸಂತಾನದೊಳನಿಶಂ
ಶಾಂತ್ಯೌದಾರ್ಯ ಗುಣಾನ್ವಿತೆ ನೀ ಮೆರೆ ಸಂತತಮುಂ ನಲವಿಂ3
ಎಣಿಸಲ್ಕರಿಯದ ಋಣತಾಪದೊಳಕಟಾ ಹೆಣಗಾಡುತಲಿರುವೀ
ಅಣುಗರ ನೋಡಿ ಕ್ಷಣದೊಳೂ ನಿನ್ನ ಘನತೆ ತೋರಿಸು ದೇವಿ 4
ತಳುವುದಿದೇತಕೆ ನಳಿನÀದಳಂಬಕೆ ಗಳಿಲನೆ ಬಾರೆಂಬೆ
ಜಲಜಲೋಚನ ಶೇಷಗಿರೀಶನ ಲಲನಾಮಣಿ ಜಗದಂಬೆ 5