ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಣಿಸಲೆನ್ನಳವೆ ನಿನ್ನ ಮಹಿಮೆಗಳ ಗುಣಗಣನುತ ನಾಮ ಕೋದಂಡರಾಮ ಪ. ಲಲನೆ ಧರಿತ್ರಿಯ ಪೊರೆದೆ ಛಲದಿ ಹಿರಣ್ಯಕಶಿಪುವ ಸಂಹರಿಸಿದೆ ಇಳೆಯಾಪೇಕ್ಷಿಸಿದೆ ಬಲಿಯ ಭಂಜಿಸಿದೆ 1 ದುರುಳ ರಾಯರ ತರಿದೆ ಹರನ ಬಿಲ್ಲ ಮುರಿದೆ ನರಗೆ ಸಾರಥಿಯಾಗಿ ಮೆರೆದೆ ತರುಣಿಯರ ವ್ರತ ಗೆಲಿದೆ ತುರಗವನೇರಿ ಶರಣಾಗತರನ್ನು ಪೊರೆವುದು ನಿನ್ನ ಬಿರುದೆ 2 ಕರುಣಾಸಾಗರ ನಿನ್ನ ಚರಣಸೇವೆಗೆ ಎನ್ನ ಕರುಣಿಸು ಗುಣಸಂಪನ್ನ ಸ್ಮರನಜನಕÀ ಚೆನ್ನ ಧರಣಿಜೆಯ ಮೋಹನ್ನ ಸ್ಥಿರವಾದ ಲಕ್ಷ್ಮೀಶ ಕರುಣಿಸೊ ಹಯವದನ 3
--------------
ವಾದಿರಾಜ
ಬಾರೆಲೋ ಬೇಗನೆ ಭಾರತೀಪತಿ ಪ್ರಿಯ ಸಾರುತ ಬೇಗ ಶ್ರೀ ನಾರಾಯಣ ಪ. ನಾರದಾದಿ ವಂದ್ಯ ಪಾರುಗಾಣಿಸೆ ಭವ ಗಾರು ಮಾಡದೆ ಶ್ರೀಶ ಸರ್ವೇಶ ಅ.ಪ. ಸುಮನಸರೊಡೆಯನೆ ನೀನಾಗಮಿಸಲು ಸಕಲವು ಸುಗಮವಹುದೆ ಕಮಲೆಯ ಪ್ರೀಯನೆ ನಿನ್ನಾಗಮನವನೆ ಬಯಸುವೆ 1 ಭಕ್ತರ ಕಾಯುವ ಯುಕ್ತಿ ನಿನಗೆ ಸರಿ ಭಕ್ತವತ್ಸಲನೆಂಬೊ ಬಿರುದಿನ ದೇವ ಶಕ್ತಿ ಸ್ವರೂಪನೆ ಅಶಕ್ತರ ಪೊರೆವಾ ಸಕ್ತಿಯ ತೋರಿಸೆ ಭಕ್ತರಿದ್ದೆಡೆಗೆ 2 ಎನ್ನಪರಾಧ ಎಣಿಸಲೆನ್ನಳವೆ ಪನ್ನಗಾದ್ರಿನಿವಾಸ ಕೃಪೆತೋರೊ ಸನ್ನುತಚರಿತ ನಿನ್ನ ಪೊರತು ಎನ ಗನ್ಯರ ಕಾಣೆನಾ ಶ್ರೀ ಶ್ರೀನಿವಾಸ ದೊರೆ 3
--------------
ಸರಸ್ವತಿ ಬಾಯಿ