ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಣಿಸಲೆನ್ನಳವೆ ನಿನ್ನ ಮಹಿಮೆಗಳ ಗುಣಗಣನುತ ನಾಮ ಕೋದಂಡರಾಮ ಪ. ಲಲನೆ ಧರಿತ್ರಿಯ ಪೊರೆದೆ ಛಲದಿ ಹಿರಣ್ಯಕಶಿಪುವ ಸಂಹರಿಸಿದೆ ಇಳೆಯಾಪೇಕ್ಷಿಸಿದೆ ಬಲಿಯ ಭಂಜಿಸಿದೆ 1 ದುರುಳ ರಾಯರ ತರಿದೆ ಹರನ ಬಿಲ್ಲ ಮುರಿದೆ ನರಗೆ ಸಾರಥಿಯಾಗಿ ಮೆರೆದೆ ತರುಣಿಯರ ವ್ರತ ಗೆಲಿದೆ ತುರಗವನೇರಿ ಶರಣಾಗತರನ್ನು ಪೊರೆವುದು ನಿನ್ನ ಬಿರುದೆ 2 ಕರುಣಾಸಾಗರ ನಿನ್ನ ಚರಣಸೇವೆಗೆ ಎನ್ನ ಕರುಣಿಸು ಗುಣಸಂಪನ್ನ ಸ್ಮರನಜನಕÀ ಚೆನ್ನ ಧರಣಿಜೆಯ ಮೋಹನ್ನ ಸ್ಥಿರವಾದ ಲಕ್ಷ್ಮೀಶ ಕರುಣಿಸೊ ಹಯವದನ 3
--------------
ವಾದಿರಾಜ
ಕ್ಷೇತ್ರವೆಂದರೆ ಉಡುಪಿ ಕ್ಷೇತ್ರ ಪ ಸೂತ್ರಾಂತರಾತ್ಮ ಹರಿ ಯಾತ್ರೆ ಮಾಳ್ಪನಿಗೆ ಅ.ಪ. ವಾಸುದೇವ ಮುನಿಯು ಪುಟ್ಟಿ ಪಾಜಕದಲ್ಲಿವಾಸುದೇವ ಕೃಷ್ಣನ್ನ ನಿಲ್ಲಿಸಿಹರೋ ||ಕಾಸು ವೀಸಕೆ ವರದನಲ್ಲವೊ ಭಕುತಿಪಾಶಗಳಿಗೇ ಒಲಿವ ಶ್ರೀ ಕೃಷ್ಣ ನಿಲಯಾ 1 ವಟುತನ ದೊಳಾಶ್ರಮ ಸ್ವೀಕರಿಸಿ ಸನ್ಯಾಸಿಅಷ್ಟ ಮಠದವರಿಂದ ಇಷ್ಟ ಪೂಜೆಗಳಾ ||ಸೃಷ್ಟಿಯೊಳಗಪ್ರತಿಮ | ಕೃಷ್ಣಕೊಳ್ಳುತ ಮನಮುಟ್ಟಿ ಭಜಿಸುವರ | ಇಷ್ಟಾರ್ಥಗಳ ಕೊಡುವಾ 2 ದಿನಕನೇಕಲಂಕಾರ | ಅನವರತ ಸಂಪೂಜೆಎಣಿಸಲೆನ್ನಳವಲ್ಲ ರುಕುಮಿಣಿಯನಲ್ಲಾ ||ದೀನನಾಥ ನಾಥ ಗುರು | ಗೋವಿಂದ ವಿಠ್ಠಲನಮನದಣಿಯ ನೋಳ್ಪುದಕೆ | ಘನವಾದ ಸದನಾ 3
--------------
ಗುರುಗೋವಿಂದವಿಠಲರು
ನಿನ್ನ ಮಹಿಮೆ ಇದೇನೊ ಕನ್ನಗಾರರ ಗುರುವೆ ಅಳಗಿರಿ ತಿಮ್ಮರಾಯಾ ಪ ಕ್ಷೋಣಿಯೊಳಗುಳ್ಳವರು ಕ್ಷಿಪ್ರದಲ್ಲಿ ನಿನ್ನ ಕಾಣಿವೇನೆಂಬ ತವಕದಲಿ ಬರಲು ಮಾಣದಲೆ ಅವರ ವಸನ ಸುಲಿಸಿ ತಡೆಯದೆ ಮಾನವನು ಕೊಂಬ ಅಭಿಮಾನಗೇಡಿ 1 ಬ್ರಹ್ಮಾದಿಗಳು ಇಲ್ಲಿ ಸುಲಿಸಿಕೊಳಬೇಕೆಂದು ಹೆಮ್ಮೆಯಿಂದಲಿ ನೋಡಿ ಹಿಗ್ಗುವರೋ ಹಮ್ಮಿನದೇವ ನಿನ್ನ ಸೋಜಿಗವೆ ತಿಳಿಯದು ಈ ಮ್ಮಹಿಯೊಳಗೆ ಇಂಥ ಸುಮ್ಮಾನವೇನೊ2 ಹಲವು ಕೇಳಿದರೇನು ನೀಚೋಚ್ಚ ಎಣಿಸಲೆ ಒಲಿಸಿದವರಿಗೆ ನೀನು ಒಲಿದು ಎಲ್ಲಾ ಸುಲಿಗೆಯನು ಯಿತ್ತು ಸಂತತಲವರ ಪಾಲಿಪ ಬಲು ದೈವ ವಿಜಯವಿಠ್ಠಲ ಅಳಗಿರಿ ತಿಮ್ಮಾ3
--------------
ವಿಜಯದಾಸ
ಬಾರೆಲೋ ಬೇಗನೆ ಭಾರತೀಪತಿ ಪ್ರಿಯ ಸಾರುತ ಬೇಗ ಶ್ರೀ ನಾರಾಯಣ ಪ. ನಾರದಾದಿ ವಂದ್ಯ ಪಾರುಗಾಣಿಸೆ ಭವ ಗಾರು ಮಾಡದೆ ಶ್ರೀಶ ಸರ್ವೇಶ ಅ.ಪ. ಸುಮನಸರೊಡೆಯನೆ ನೀನಾಗಮಿಸಲು ಸಕಲವು ಸುಗಮವಹುದೆ ಕಮಲೆಯ ಪ್ರೀಯನೆ ನಿನ್ನಾಗಮನವನೆ ಬಯಸುವೆ 1 ಭಕ್ತರ ಕಾಯುವ ಯುಕ್ತಿ ನಿನಗೆ ಸರಿ ಭಕ್ತವತ್ಸಲನೆಂಬೊ ಬಿರುದಿನ ದೇವ ಶಕ್ತಿ ಸ್ವರೂಪನೆ ಅಶಕ್ತರ ಪೊರೆವಾ ಸಕ್ತಿಯ ತೋರಿಸೆ ಭಕ್ತರಿದ್ದೆಡೆಗೆ 2 ಎನ್ನಪರಾಧ ಎಣಿಸಲೆನ್ನಳವೆ ಪನ್ನಗಾದ್ರಿನಿವಾಸ ಕೃಪೆತೋರೊ ಸನ್ನುತಚರಿತ ನಿನ್ನ ಪೊರತು ಎನ ಗನ್ಯರ ಕಾಣೆನಾ ಶ್ರೀ ಶ್ರೀನಿವಾಸ ದೊರೆ 3
--------------
ಸರಸ್ವತಿ ಬಾಯಿ