ಓದು ಬೇಡ ನಿನಗೆ ಶಾಸ್ತ್ರ ಬೇಡ ಸುಶೀಲಬುದ್ಧಿಲಿ ದೃಷ್ಟಿ ನಿಲಿಸಿದರೆ ಸಾಕೋ ಪ
ವೇದ ಎನ್ನಲಿ ಬೇಡ ಯಮುನೆಧುಮುಕಲಿ ಬೇಡ ಕಪ್ಪೆಯಂತೆ ನೀರಲಿ ಮುಳಗಬೇಡ ಬಾಯಿ ಬಿಗಿಯಲಿ ಬೇಡ ಮೂಗ ಹಿಡಿಯಲಿಬೇಡ ಆ ಜಾಗದಲಿ ದೃಷ್ಟಿ ನಿಲಿಸಿದರೆ ಸಾಕೋ 1
ಆಯಾಸ ಬಡಬೇಡ ಅಡವಿ ಸೇರಲಿ ಬೇಡಕಾವಿ ಕಮಂಡಲ ಧರಿಸಬೇಡಜಪವ ಎಣಿಸಲಿ ಬೇಡ ಉಪವಾಸವಿರಬೇಡಕಾಳಷ್ಟು ದೃಷ್ಟಿ ನಿಲಿಸಿದರೆ ಸಾಕೊ 2
ಎರಡೂ ಕಣ್ಣಿನಿಂದ ನೋಡಿ ನಿಂತಿರಲಾಗಿಶರೀರ ಬಯಲಾದರೂ ಅಳಿವು ತಪ್ಪುದುಅರಿವಿಗೇ ಅರಿವಾಗಿ ಅರಿವಿಗೆ ಕುರುಹಾಗಿಗುರು ಚಿದಾನಂದನ ಗುರುತು ಇಲ್ಲೆನ್ನಬೇಡ 3