ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲೋಕನೀತಿ ಎಲ್ಲಿಗೇತಕೆ ಪೋಗಿ ತಲ್ಲಣಿಸುವೆಯೊ ಮನವೆ ಇಲ್ಲೆ ಶ್ರೀಹರಿಯಿಲ್ಲವೆ ಪ ಬಲ್ಲವರ ಹೃದಯಗುಹೆಯಲ್ಲಿ ಪ್ರಕಟಿಸುತ ಜನ ತುಂಬಿ ಸೂಸುತಲಿರುವ ಅ.ಪ ಕಾಶಿ ರಾಮೇಶ್ವರ ಬದರಿ ತಿರುಪತಿಯೆಂದು ಘಾಸಿಗÉೂಳ್ಳುವೆ ಏತಕೋ ವಾಸನೆಯ ನೀಗದವನಾಶೆಪಾಶಗಳಿಂದ ಬೇಸತ್ತು ಚರಿಸಲೇಕೋ ಈಶನಾವಾಸವೀಜಗವೆಲ್ಲವಿಲ್ಲಿಲ್ಲ ವಲ್ಲಿರುವನೆಂಬುದೇಕೋ ಶ್ರೀಶ ಶ್ರೀಹರಿಯ ನೀನಿರುವಲ್ಲೆ ಶೋಧಿಸುವ ಆಸೆಯುದಯಿಸಲಿಲ್ಲವೇಕೋ 1 ಅಣುಮಹತುಗಳಲ್ಲಿ ತೃಣಜೀವಕೋಟಿಯಲಿ ಗುಣ ಮಹಿಮನರಿಯ ಬಯಸೋ ಎಣಿಸಲಾಗದನಂತಗುಣನ ಪ್ರಾಣಿ ಸಮೂಹ ಗಣಗಳೊಳು ಕಾಣಬಯಸೋ ಅಣುವಿಗಣುವೆನಿಸಿ ಮಹತಿಗೆ ಮಹತ್ತಹನ ಕಣ್ದಣಿಯೆ ಕಾಣುತ ಭಾವಿಸೊ ಗುಣನಿಧಿಯು ನಿನ್ನ ಶ್ರದ್ಧಾಭಕ್ತಿಗಳಿಗೊಲಿದು ಕ್ಷಣದಿ ಕಾಣಿಸುವನಿದನರಿತು ನೀ ಚರಿಸೋ 2 ವ್ರತನಿಯಮಗಳ ಕಾಮ್ಯ ಫಲದಾಸೆಯಿಂ ಮಾಡೆ ಫಲವೇನು ವ್ಯರ್ಥಶ್ರಮವೋ ಸತತ ನಿನ್ನಯ ವ್ಯಾಪ್ತ ಮಹಿಮೆಯರಿಯದೆ ಪೂಜೆ ಮಾಡಿದರು ವ್ಯರ್ಥಶ್ರಮವೋ ಮತಿವಿಕಳ ಕೋಪ ತಾಪದ ದಾಸನವ ಮಾಳ್ಪ ದಾನವದು ವ್ಯರ್ಥಶ್ರಮವೋ ಅಕಳಂಕಮಹಿಮ ರಘುರಾಮವಿಠ್ಠಲನೆಂದು ನಂಬಿ ನಡೆವುದೆ ಸಾರ್ಥಕವೋ 3
--------------
ರಘುರಾಮವಿಠಲದಾಸರು