ಹಣವನರಸುವರೆಲ್ಲ ಗುಣವನರಸುವರೆ
ಮಣಿಯನರಸುವ ಕೆಲರು ಹಣಕೆ ಬಾಯ್ ಬಿಡರೆ ಪ
ನೀಡುವವನೊಬ್ಬನಿರೆ ಬೇಡವೆಂಬುವರಿಹರೆ
ನೀಡಲೊಲ್ಲದ ನರನ ನೋಡುವವರಿಹರೆ
ಬೀಡು ಹೆಚ್ಚಳಸಿರಿಯ ನೀಡೆನಗೆ ತನಗೆಂಬ
ನಾಡಿಗರ ಗಡಣವನು ಎಣಿಸಲಳವೇ 1
ಕಲಿಯುಗದ ನೀತಿಯೋ ಬಲುದುರಾಸೆಯ ಬಲೆಯೋ
ಸಲೆ ಬೆಳೆದಸೂಯೆಯೋ ಕಲಿತ ದುರ್ನೀತಿಯೋ
ಜಲಜಾಕ್ಷನನೀ ದುಶ್ಶೀಲ ಪ್ರವಾಹದಲಿ
ಅಲೆಯಬಿಡಬೇಡಯ್ಯ ಮಾಂಗಿರಿಯ ರಂಗ 2