ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂಬಿದೆನೊ ನಿನ್ನ ಪಾದಾರವಿಂದಾ ಇಂಬು ಈವದು ಎನಗೆ ವೈಕುಂಠಪುರದೊಳಗೆ ಪ ಮಲಭಾಂಡದಲ್ಲಿ ಪೊಕ್ಕು ನೆಲೆಗಾಣದಲೆ ಸಿಕ್ಕು ಸಲೆ ಸೊರಗಿ ತಿರುಗಿದೆನೊ ಬಳಲಿ ಮರುಗಿ ಉಳಿವದಕುಪಾಯವನು ಒಂದರೆ ಕಾಣೆನೊ ಎಲೊ ಬಲುದೈವ ನೀನೆ ದಯಾಳು ಎಂದೂ 1 ಕೈವಲ್ಯ ಕೊಡುವಲ್ಲಿ ಮಂಡಲದೊಳು ಎಣಿಯಾರು ನಿನಗೆ ಭಂಡಕಾಯವ ತೆತ್ತು ಬರಲಾರೆ ನಿನ್ನ ತೊತ್ತು ನಿತ್ಯ ಎಳೆನೋಟದಲಿ ನೋಡು 2 ಯದುಕುಲಲಲಾಮ ಸುರಸಾರ್ವಭೌಮ ಮಹಿಮ ಮದನಪಿತ ಕಾಳಿಂಗಭಂಗ ರಂಗಾ ಮಧುಸೂದನ ವಿಜಯವಿಠ್ಠಲ ಲಕುಮಿನಲ್ಲಾ ಹೃದಯದೊಳು ಪೊಳೆವ ಬಲು ವಿಚಿತ್ರ ಚಲುವಾ 3
--------------
ವಿಜಯದಾಸ
ಮನೋದಣಿಯಾ ಕುಲಮಣಿಯಾ ಪ ಎಳೆಬಿಸಿಲೊಳು ಥಳ ಥಳಿಸುವಾ ಬೆಳಗಿನಾ| ಬಳದ ಒಬ್ಬುಳಿಯಂತೆ ದಿನಮಣಿಯಾ| ಕಳೆಶತ ಮಡಿಯೊಳು ಹೊಳೆವ ರನ್ನಮುಕುಟಾ| ಝಳ ಝಳಿಸುವ ರಳ ಕಾವಳಿ ದೋರಣಿಯಾ 1 ಚಲಾಚಲ ಭೂತಾವಳಿಗಳ ಸಲಹುವ ಭ್ರೂಲಲಿತ ಮೃಗಮದಾಂಕಿತದ ಫಣಿಯಾ| ವಿಮಲತರ ಕಮಲದೆಸಳ ಸುಗಂಗಳ| ನಾಸಿಕ ಸಂಪಿಗಿ ನೆನಿಯಾ 2 ಎಳೆನಗೆ ಚುಬುಕಾಗ್ರ ಚೆಲುವಾ ಕುಂದರದನಾ| ಇಳೆಯೊಳು ಕಾಣೆ ಕುಂಡಲಕ ಎಣಿಯಾ| ಕದಪು ವದನ ಮೋಹನಾರಾಯ| ಒಲಿವ ಮಹಿಪತಿ ಜನ ಪ್ರಭು ಗುಣಖಣಿಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು