ಕುಲವೇನೆಂತು ಹೇಳಲಿ ಯೋಗೀಶನಕುಲವೇನೆಂತು ಹೇಳಲಿಕುಲವ ಕೇಳುತಿಹ ಕತ್ತೆಯ ಮಗನಿಗೆ ಪ
ಬಲಿದು ಆಧಾರವನು ಕುಂಬಕದೊಳು ನಿಲಿಸಿ ವಾಯುವನುನೆಲೆಯನು ಹತ್ತಿಸಿ ನೆಲೆಯಾಗಿ ನೆಲೆಸಿನೆಲೆಯೊಳು ಕುಳಿತಿಹ ಪುಣ್ಯ ಪುರುಷನಿಗೆ 1
ಜಾಗ್ರತದಿ ಸ್ವಪ್ನವನು ಸುಷುಪ್ತಿಯು ಸಹನಿಗ್ರಹಿಸೆಲ್ಲವನು ಸ್ವರ್ಗದ ಮೇಲೆ ಮಹಾ ಸ್ವರ್ಗವಿರಲುಸುಸ್ವರ್ಗದಿ ನೆಲೆಸಿಹ ಭರ್ಗನಾದವಗೆ2
ಎಣಿಕೆಯ ಜನ್ಮವನು ಕಳೆದು ಮುಂದೆಕ್ಷೀಣಿಸಿ ಪ್ರಾರಬ್ಧವನು ತ್ರಿಣಯನನಾಗಿ ದಿನಮಣಿಯಾಗಿ ಕಣಿಯಾಗಿಗುಣಕಗೋಚರ ಚಿದಾನಂದನಾದವನಿಗೆ 3