ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರಕಮಲ ತಡೆಯುವುದೆ ಕಟುಖಾರವಾ ನಿತ್ಯ ಪೂಜಿಸುವ ಕೋಮಲದಾ ಪ. ಪರಿವಾರ ಜನವು ಭೋಜನಕೆ ಕುಳಿತಿರಲು ನರ ಹರಿಗೆ ಅರ್ಪಿತದ ಹುಳಿಯಲ್ಲಿ ಕರವಿಟ್ಟು ಪರಿಪಕ್ವ ಶಾಖದ ಹೋಳುಗಳ ಬಡಿಸಲು ಕರ ಕರೆಗೆ ಸಿಲುಕೇ 1 ಮಧ್ವದುಗ್ಧಾಭ್ಧಿಯಲಿ ಜನಿಸಿದ ಸುಧಾರಸವ ಶುದ್ಧ ದೃಷ್ಟಿಯಲ್ಲೀ ಸವಿಸವಿದು ಮಧುರಾ ಹೃದ್ವಜದಲಿ ತುಂಬಲನುವಾದ ಪುಸ್ತಕವ ಮುದ್ದಾಗಿ ಪಿಡಿಯಲನುಕೂಲವಾಗಿ ಇಂಥ 2 ಗಂಧ ಕುಸುಮಾಕ್ಷತೆಗಳಿಂದ ಶ್ರೀ ತುಳಸಿದಳ ದಿಂದ ವಿಠ್ಠಲ ಕೃಷ್ಣ ಲಕ್ಷ್ಮಿನರಹರಿಯಾ ವೃಂದ ಸಾಲಿಗ್ರಾಮ ಹನುಮ ಯತಿಕುಲಜರುಗ ಳಿಂದ ಸಹಿತದಿ ಪೂಜೆ ವಿಭವದಲಿ ಗೈದಾ 3 ಮಧುರಾನ್ನ ಸವಿದು ಮಧುಸೂದನನ ಗುಣಗಳನು ವಿಧವಿಧದಿ ಮಧ್ವಗ್ರಂಥದಿ ಕಂಡು ನಲಿದೂ ಹೃದಯ ನಿರ್ಮಲದಿ ಆಲಿಸುವ ಭಕ್ತರಿಗೆ ಮಧುರ ರಸಮನದ ಎಡೆಯಲ್ಲಿ ಬಿಡಿಸುವ ಇಂಥ 4 ಗೋಪಾಲಕೃಷ್ಣವಿಠ್ಠಲನ ಭಕ್ತರು ಬಂದು ಶ್ರೀಪಾದಕೆರಗೆ ಸಿರದಲ್ಲಿ ಅಕ್ಷತೆಯಾ ಅಪಾರ ಕರುಣದಿಂದಲಿ ಸೂಸಿ ನಲಿಯುತಲಿ ಅಪತ್ತು ಕಳೆವ ಶ್ರೀ ಪ್ರದ್ನುಮ್ನತೀರ್ಥಯತಿ 5
--------------
ಅಂಬಾಬಾಯಿ
ಗೋಪಿ ನಿನ್ನಯ ಬಾಲಕೃಷ್ಣನ ಚೇಷ್ಟೆಯ | ತಾಳಾಲಾರೆನು ನೀನು ಕರೆದು ಪೇಳದಿದ್ದರೆ ಬುದ್ಧಿಯ 1 ಮನೆಮನೆಗಳ ಪೊಕ್ಕು ಪೊಕ್ಕು ಪಾನ ಮಾಡುವ ಬಾಲನು | ಮಾನಿನೀಯರು ಕಂಡು ತಡೆದರೆ ಸ್ತನವ ಪಿಡಿದು ಮುದ್ದಿಪ 2 ಬೆಳಕು ಇಲ್ಲದ ಎಡೆಯಲ್ಲಿದ್ದರು ಹೊಳೆವನೇ ಸುರಧೀಪತಿ | ಉಳಿಯದಂತೆ ಕದ್ದು ಮೆದ್ದವ ಬಾಲನೆಂಬುದು ಉಚಿತವೆ 3 ಪರಿ ತನ್ನನೆಂದರೆ ಪರಮ ಹರುಷವ ಮಾಡುವ 4 ಮಣಿ ಏನು ಮಹಿಮೆಯ ಬಲ್ಲನೇ ರಘುತಿಲಕನೇ 5
--------------
ಅನ್ಯದಾಸರು
ಸುರನರ ವರಗುರು | ಸುರನರ ಪ. ಸುರನರ ವರಗುರು ನಿನ್ನಾ | ದಿವ್ಯ ಚರಣಕ್ಕೆ ಎರಗುವೆ ನಿನ್ನಾ | ಆಹ ಕರುಣದಿಂದೀಕ್ಷಿಸಿ ವರಮತಿ ಪಾಲಿಸಿ ಹರಿಯ ಶ್ರೀ ಚರಣಕ್ಕೆ ಎರಗಿಸು ಮನವನೂ ಅ.ಪ. ಹಣ್ಣೆಂದು ನುಂಗೆ ಪೋದುದಕೇ | ಓದಿ ತಣ್ಣಗೆ ಮಾಡಿದ ಮನಕೇ | ಹರಿ ಯನ್ನು ಓಲೈಸಲು ಮರಕೇ | ಅಡರಿ ಹೆಣ್ಣನ್ನೆ ತೊರೆದನು ವ್ರತಕೇ | ಆಹ ಸಣ್ಣ ರೂಪದಿ ಪುರವನ್ನು ಶೋಧಿಸಿ | ಮುಡಿ ಹೊನ್ನು ಸಲ್ಲಿಸಿ ವಾರ್ತೆಯನ್ನು ಪೇಳಿದ ಧೀರ 1 ರಕ್ಕಸಿಯೊಳು ಪ್ರೇಮದಾಟಾ | ದನುಜ ಗಿಕ್ಕಿದ ಕೂಳಿಗಾರಾಟ | ಅಣ್ಣ ತಕ್ಕೊಂಡ ಎಡೆಯಲ್ಲಿ ಊಟ | ಬಲು ಸೊಕ್ಕಿದರೊಡನೆ ಕಾದಾಟ | ಆಹ ಮಕ್ಕಳ ಕೊಯ್ದವ ನಿಕ್ಕಿದಸ್ತ್ರಕೆ ತಲೆ ಇಕ್ಕದೆ ಪುರವಾಳ್ದ ರಕ್ಕಸಾಂತಕ ದೂತ 2 ಗುರುವಿಗೆ ವರೆದು ತತ್ವಾರ್ಥ | ಮತ್ತೆ ಧರೆಯಲ್ಲಿ ಚರಿಸಿದ ವ್ಯಾಪ್ತಾ | ಮುನಿ ವರರೊಳು ಬಲು ಶ್ರೇಷ್ಠನೀತಾ | ಪೇಳ್ದ ಪರಿಶುದ್ಧ ವೇದ ಭಾವಾರ್ಥ | ಆಹ ಸುರರುಷಿ ಪೂಜಿಪ ಹರಿಗಿರಿಯಲಿ ಸತ್ಯ ವರಸೂನು ಚರಣದಿ ಗುರುಭಕ್ತಿರತ ವ್ರತ 3 ದುಡಿದು ಸ್ವಾಮಿಗೆ ಪ್ರತಿಫಲವಾ | ಬೇಡ ಕೊಂಡ ವ್ರತವಾ | ಗಿರಿ ವಡೆದನು ಕೈ ಜಾರೆ ಶತವಾ ಮಾಡಿ ಗೋಪಿ ಚಂದನವಾ | ಆಹ ಕಡಲ ತೀರದಿ ತನ್ನ ವಡೆಯನ್ನ ನಿಲ್ಲಿಸಿ ಅಡರಿದ ಹಿಮಗಿರಿ ದೃಢಕಾಯ ಹರಿಪ್ರೀಯ 4 ಎಷ್ಟು ವರ್ಣಿಸಲಳವಿವನಾ | ಮಹ ಗುಟ್ಟು ಮಂತ್ರವ ಸಾಧನವನಾ | ಮೂರು ಬಟ್ಟೆ ಮಾಡುವ ನಂಬಿದವನಾ | ಜ್ಞಾನ ಕೊಟ್ಟು ಕಾಯುವ ಕರುಣಿ ಮಾನ್ಯಾ | ಆಹ ದಿಟ್ಟ ಗೋಪಾಲಕೃಷ್ಣವಿಠ್ಠಲ ಬ್ರಹ್ಮನ ಪಟ್ಟ ಕಟ್ಟುವನೆಂದು ಘಟ್ಟಿ ಮನದಲಿಪ್ಪ 5
--------------
ಅಂಬಾಬಾಯಿ