ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರಣು ಶ್ರೀ ನಂದನೇಶ್ವರ | ಪಾಲಿಸು ಜಗದೀಶ್ವರ | ಶರಣು ಶ್ರೀ ನಂದನೇಶ್ವರ ಪ ಶರಣು ಶ್ರೀ ಗುರುವರ ಗಂಗಾಧರ | ಕರ ಕಪಾಲಧರ ಹರ ಮೃತ್ಯುಂಜಯ ಅ.ಪ. ತಂದೆ ನಿನ್ನಯ ಪಾದವ | ಮರೆತಿಹುದರಿಂದ | ನಿಂದ ಹಲವಂಗದಲಿ ಭವಭವದಿ || ನೊಂದು ಬಂದೆ ನಾನಿಂದೀ ಭವದೊಳು | ಹೊಂದಿ ತವಾಂಘ್ರಿಯನಂದದಿ ಭಜಿಸುವೆ 1 ಭೇದ ಬುದ್ಧಿಯ ಮಾನವರು | ವೇದ ಶಾಸ್ತ್ರದ| ಹಾದಿಯರಿಯದ ಮತ್ಸರರು || ಸಾಧುಗಳೊಡನೆ ವಿರೋಧವನೆಣಿಸುವ | ಬಾಧಕರಾದರು ಹೇ ದಯಾನಿಧಿಯೇ 2 ತೊಡಕುಗಳನ್ನೆ ಬಿಡಿಸಿ | ಬಾಧೆಗಳ ವಾರಿಸಿ | ಕಡು ದುಷ್ಟಾತ್ಮರ ಶಿಕ್ಷಿಸಿ | ಎಡೆಬಿಡದೆನ್ನ ಮನೋರಥ ಸಲಿಸುತ | ದೃಢತರ ಭಕುತಿಯ ಕೊಡು ಕೃಪೆಯಿಂದಲಿ 3 ಪಾದ | ಮುಕುತಿ ಸಂಪದ ಪಾಲಿಸೊ || ಶಕುತಿಯೊಳಗೆ ನೀ ಯುಕುತಿಯಿಂದ ನಿಜ | ಸುಖದ ಪದವಿಯೊಳು ಪ್ರಕಟದಿ ಪೊರೆಯೈ4 ಯೋಗಿಗಳರಸ ನೀನೆಂಬ | ಬಿರುದುಗಳ ತೋರಿಸು- | ತೀಗೆನ್ನಪರಾಧವ ಕ್ಷಮಿಸೆಂಬ || ರಾಗದ ನುಡಿಯೊಳೆನ್ನಾಗಮನವೊಪ್ಪಿಸು- | ತೀಗ ಸದಾನಂದ ಯೋಗಾಂತರ್ಗತ 5
--------------
ಸದಾನಂದರು