ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಕೂರ್ಮಚಾರ್ಯರ ಚರಣಕಮಲಯುಗ್ಮ ಮಾನವ ಪ ಧರಣಿಯೊಳಗೆ ಸುಕ್ಷೇತ್ರಗಾಲವ ಪುರದಿ ಶ್ರಿ ನರಶಿಂಹಾ ಚಾರ್ಯರ ತರುಣಿಯಳ ಗರ್ಭಾಬ್ಧಿಯಲಿಹಿಮ ಕರನ ತೆರದಲಿ ಜನಿಸಿಮೆರೆದ ಅ.ಪ ವರಕೊಲ್ಹಾಪುರದಿ ಪೋಗಿರಲು ಸುಂದರವಾದ ಸಿರಿಯರೂಪವ ಕಾಣುತ್ತ ಅರಿತು ಪ್ರಾರ್ಥಿಸಲು ಶ್ರೀ ನರಶಿಂಹಾರ್ಯರಿಗೊಲಿದು ಕರುಣದಿಂದಲಿ ಕೊಟ್ಟಂಥ ಚರಣಕವಚ ಸ್ವರಣ ಸಂಪುಟದಲ್ಲಿ ನಿರುತ ಪೂಜೆಯ ಮಾಡುತ್ತ ಪ್ರವಚನಾಸಕ್ತ ಧರೆಯೊಳಗೆ ಬಹು ಶರಣು ಜನ ರಘ ತರಿದು ಸೌಖ್ಯವ ಗರಿವುದಕೆ ಸಂ ಚರಿಸುತಲಿ ಸಚ್ಛಾಸ್ತ್ರ ಮರ್ಮವ ನರುಹಿಜನರನುದ್ಧರಿಸಿದಂಥ 1 ಪೊಳೆವ ಫಾಲದಿ ಪುಂಡ್ರ ತಿಲಕ ಮುದ್ರಾಕ್ಷತಿ ವಿಲಸಿತ ಶುಭಗಾತ್ರದಿ ಅಲವ ಬೋಧರ ಮತದೊಳು ತತ್ವಬೋಧಕ ಸುಲಲಿತೋಪನ್ಯಾಸದಿ ಬಲು ವಿಧಾರ್ಥವ ಪೇಳಿಕುಳಿತಪಂಡಿತರನ್ನು ಒಲಿಸುತಿರೆ ಪೂರ್ವದಿ ಪಂಢರಪುರದಿ ಭವ ಮುದ್ಗಲಾಚಾರ್ಯರಿ ಗೊಲಿದು ಬಂದಿಹ ಚಲುವ ವಿಠ್ಠಲ ಮೂರುತಿಯ ಪದ ಜಲಜ ಮಧುಕರರೆನಿಸಿದಂಥ 2 ಜಡಜಾಪ್ತನುದಯದಿ ನಡೆದು ದ್ವಿಜಗೃಹದೇವ ರಡಿ ಗೊಂದನೆಯ ಮಾಡುತ್ತ ಎಡೆಬಿಡದಲೆ ತಮ್ಮ ಅಡಿಗೊಂದಿಸುವ ಭಕ್ತ ಗಡಣವ ಮನ್ನಿಸುತ ಬಿಡದೆ ಶತತ್ರಯ ಕೊಡ ಜಲದಲಿ ಸ್ನಾನ ದೃಢಮನದಲಿ ಮಾಡುತ್ತ ತಂತ್ರ ಸಾರೋಕ್ತ ಎಡಬಲದಿ ಶೇವೆಯನು ಮಾಡುವ ಪೊಡವಿಸುರಕೃತ ವೇದ ಘೋಷದಿ ಜಡಜನಾಭನ ಪೂಜಿಸುವ ಬಹು ಸಡಗರವ ನಾನೆಂತು ಬಣ್ಣಿಪೆ 3 ಭೂತಲದಲಿ ಶ್ರೇಷ್ಠವಾತ ಮಾತಾಂಬುಧಿ ಶೀತ ಕಿರಣನೆನಿಸಿ ಪ್ರಾತರಾರಭ್ಯ ಶ್ರೀನಾಥನೆ ಪರನೆಂಬೊ ಶಾಸ್ತ್ರದಿ ಮನವಿರಿಸಿ ಖ್ಯಾತ ಸತ್ಯಧ್ಯಾನ ತೀರ್ಥರೆಂಬುವ ಗುರು ಪ್ರೀತಿಯ ಸಂಪಾದಿಸಿ ಪುತ್ರರಿಗೆ ಬೋಧಿಸಿ ಪ್ರೀತಿಯಲಿ ಶಿಷ್ಯರಿಗೆ ಭಗವ ದ್ಗೀತೆಯನು ಪ್ರತಿದಿನದಿ ಪೇಳುತ ಪಾತಕವ ಪರಿಹರಿಸಿ ಪರಮ ಪು- ನೀತ ಗಾತ್ರರ ಮಾಡಿ ಸಲಹಿದ 4 ಧರೆಯೊಳಧಿಕಮಾದ ಗಿರಿ ವೇಂಕಟೇಶನ ದರುಶನವನೆ ಕೊಳ್ಳುತ ಗುರುವಾಜ್ಞೆಯಲಿ ಬಂದು ವರ ಸಭೆಯೊಳು ತಮ್ಮ ಪರಿವಾರದಿಂದಿರುತ ವರಷ ಶಾರ್ವರಿಯೊಳು ವರ ಮಾಘ ಪ್ರತಿಪದ ಬರಲು ಧ್ಯಾನವ ಮಾಡುವ ಹರಿಪದಾಸಕ್ತ ಪರಮ ಭಕುತಿಯಲಿಂದ ಶೇವಿಪ ಶರಣು ಜನ ಮಂದಾರ ನೆನಿಸುತ ಮೆರೆವ ಕಾರ್ಪರ ನಿಲಯ ಶಿರಿನರ ಹರಿಯ ಪುರವನು ತ್ವರದಿ ಶೇರಿದ 5
--------------
ಕಾರ್ಪರ ನರಹರಿದಾಸರು
ಬಾರಯ್ಯ ಬಾರಯ್ಯ ಭಕ್ತವತ್ಸಲ ಹರಿ ಶ್ರೀಕೃಷ್ಣ ಪ ಭಕ್ತರು ಬಂದು ದ್ವಾರದಿ ನಿಂದು ಭಕ್ತಿಲಿ ಹಾಡುತ ಪಾಡುತಲಿರುವರು ಮುಕ್ತಿದಾತ ನೀನಲ್ಲದೆ ಸರ್ವ- ಶಕ್ತರಿನ್ಯಾರಿಹರೈ ಎನ್ನುತ ಪೊಗಳ್ವರು 1 ತಾಳಮೇಳದವರೆಲ್ಲರು ನಿನ್ನಯ ಊಳಿಗ ಮಾಡಬೇಕೆನುತಲಿ ಬಂದು ವೇಳೆ ವೇಳೆಗೆ ತಮ್ಮ ಸೇವೆಯ ಸಲಿಸುತ ಭಾಳ ಸಂಭ್ರಮದಿಂದ ಹಾರೈಪರೊ ಹರಿ 2 ತುಂಬುರು ನಾರದರ್ವೀಣೆಯ ನುಡಿಸಲು ರಂಭಾದ್ಯಪ್ಸರ ಸ್ತ್ರೀಯರು ನರ್ತಿಸೆ ವಿಶ್ವ ಕು- ಟುಂಬಿಯೆ ಬಾ ಬಾರೆನ್ನುತ ಸ್ತುತಿಪರು3 ಅಂಬರದಲಿ ದೇವತೆಗಳೆಲ್ಲರು ನೆರೆದು ತುಂಬಿ ಪುಷ್ಪವೃಷ್ಟಿಗಳನೆ ಮಾಡುತ ಕುಸುಮ ಮಳೆ ಗಂಭೀರದಿ ಸುರಿಸುತ ಪ್ರಾರ್ಥಿಸುವರು 4 ಅತ್ರಿ ವಸಿಷ್ಠ ಗೌತಮ ಮೊದಲಾಗಿ ರಾತ್ರಿಹಗಲು ಎಡೆಬಿಡದಲೆ ಸ್ತುತಿಸುತ ವೃತ್ರಾರಿಯ ಸುತನಿಗೆ ಸಾರಥಿಯೆ ವಿ- ಚಿತ್ರ ವ್ಯಾಪಾರಿ ಶ್ರೀಹರಿ ಎಂದು ಪೊಗಳ್ವರು 5 ಅಣುಮಹದ್ರೂಪನೆ ಘನಮಹಿಮನೆ ನಿನ್ನ ಮಣಿದು ಬೇಡಿ ಕೈಮುಗಿಯುತ ಸ್ತುತಿಪರು ಪ್ರಣವ ಪ್ರತಿಪಾದ್ಯನೆ ನಿನ್ನ ಗುಣಗಳ ಎಣಿಸಲಸಾಧ್ಯವೆನುತ ಕೊಂಡಾಡ್ವರು 6 ನವನವ ರೂಪದಿ ನಲಿಯುವ ದೇವನೆ ನವವಿಧ ಭಕುತರು ನಮಿಸುತ ಕರೆವರು ಭುವನ ಮೋಹನ ಸುಂದರಮೂರ್ತಿಯೆ ಎಂದು ಕವಿಗಳು ಪೊಗಳುತ ಕುಣಿಯುತಲಿರುವರು 7 ಎಡಬಲದಲಿ ಶ್ರೀ ಭೂದೇವಿಯರಿರೆ ಬಿಡದೆ ಛತ್ರಚಾಮರಗಳಿಂದೊಪ್ಪುತ ತಡಮಾಡದೆ ಬಾ ಮಡದಿಯರ ಸಹಿತದಿ ದಡ ದಡ ಬಾರೆಂದು ಬಡ ಬಡ ಕರೆವರು 8 ವಿಶ್ವರೂಪಕ ವಿಶ್ವನಾಮಕ ವಿಶ್ವತೋಮುಖ ವಿಶ್ವನಾಟಕ ವಿಶ್ವವ್ಯಾಪಕ ವಿಶ್ವಾಧಾರಕ ವಿಶ್ವ ಕುಟುಂಬಿಯೆ ವಿಶ್ವಾಸದಿ ಬಾ 9 ವಿರೋಧಿಕೃತು ಸಂವತ್ಸರ ಬರುತಿರೆ ಪರೋಪಕಾರವ ಮಾಡುತ ಸುಜನರು ವಿರೋಧಿಗಳ ದೂರಿಡುತಲಿ ಶ್ರೀ ಹರಿ ಸರೋಜದಳ ನೇತ್ರನÀ ಸ್ತುತಿಸುವರು 10 ಕಮಲಾಕ್ಷಿಯ ಒಡಗೂಡುತ ಬಾ ಬಾ ಕಮಲಾಸನ ಜನಕನೆ ಹರಿ ಬಾ ಬಾ ಕಮಲನಾಭ ವಿಠ್ಠಲ ಬೇಗ ಬಾರೆಂದು ಸುಮನಸ ವಂದ್ಯನ ಸ್ಮರಿಸುತ ಕರೆವರು11
--------------
ನಿಡಗುರುಕಿ ಜೀವೂಬಾಯಿ
ಭಿಕ್ಷೆ ನೀಡೋ ಹರಿಯೇ ಮುಕ್ತಿಗೊಡೆಯನೇ ಪ ಹಗಲು ಇರಳು ಎಡೆಬಿಡದಲೆ ಪೊಗಳುತ ತವ ನಾಮ ಮಹಿಮೆಯ ಜಗದೀಶನೆ ನಿನ್ನ ಚರಣ ಯುಗಳಲಿ ಬಹು ಭಕ್ತಿ ಮನ ಬಗಿ ಬಗಿಯಲಿ ನಲಿದಾಡುವ 1 ನಿತ್ಯನೆ ಸರ್ವೋತ್ತಮನೇ ಮುಕ್ತಿಪ್ರದನೇ ಪರಮಾತ್ಮನೇ ಉತ್ತಮ ವೃತ್ತಿಯಾನಿತ್ತು ನೇತ್ರದಿ ತವ ನೋಡುತ ವರ ಸ್ತೋತ್ರ ದಿನಾ ಪಾಡುತಿರುವೆ 2 ಎನ್ನಪರಾಧಗಳನ್ನು ಮನ್ನಿಸಿ ಸಲಹಯ್ಯಾ ಜೀಯಾ ಹನುಮೇಶವಿಠಲರಾಯಾ ನಿನ್ನ ಸ್ಮರಣೆಯಲ್ಲಿ ಕಾಲ ವನ್ನು ಕಳೆಯುತಿರುವ ದಿವ್ಯ 3
--------------
ಹನುಮೇಶವಿಠಲ