ಒಟ್ಟು 7 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

2. ಆತ್ಮ ನಿವೇದನೆ ಅಪರಾಧವೆನ್ನದೈಯ ಹೇ ಜೀಯಅಪರಾಧವೆನ್ನದೈಯ ಅಪರಿಮಿತವೆ ಸರಿ ಪ ಕೃಪೆ ಮಾಡೊದಿಲ್ಲವೆ ಕೃಪಣವತ್ಸಲ ಕೃಷ್ಣ ಅ.ಪ ಹುಡುಗರು ಮಾಡುವ ತಪ್ಪಿಗೆ ಜನನಿ ತಾಬಿಡುವಳೆ ಅದರಿಂದ ಕೃಪೆಯ ಮಾಡದಲೆನಡೆವ ಕುದುರೆ ತಾನು ಎಡಹಿದರೆ ಸ್ವಾಮಿಕಡೆಗೆ ಕಟ್ಟುವನೇನೊ ತಿರುಗಿ ನೋಡದಲೆ 1 ಮಾಡು ಎಂದದ್ದನು ಬಿಟ್ಟರೆ ಅಪರಾಧಬೇಡವೆಂದನು ಮಾಡುವುದಪರಾಧಈಡಿಲ್ಲ ನಿನ್ನ ದಯ ಬೇಡುವೆನೋ ನಿನಗೆಮಾಡುವೆ ಬಿನ್ನಹ ನಾಚಿಕೆಯಿಲ್ಲದಲೆ2 ವಾಸುದೇವ ಶ್ರೀಹರಿಯೆನೋಡದಿದ್ದರೆ ಭಕುತ ಜನರು ತಮ್ಮಬೀಡ ಸೇರಿಸರೆನ್ನ ಕೇಡೇನೊ ಇದಕಿಂತನೋಡೊ ನೀ ದಯದಿಂದ ಭಕುತವತ್ಸಲ ಕೃಷ್ಣ 3
--------------
ವ್ಯಾಸರಾಯರು
ಛಲ ಮಾಡುವ ಲೀಲೆಗಳರಿನ್ನಾರನು ಕಾಣಿನೊ | ತ್ಸಲನೆಂಬೊ ನಾಮವನು ಧ್ವಜವೆತ್ತಿ ಮೆರವುವದೊ ಪ ಅತಿಶ್ರೇಷ್ಠನಾಗಿ ಕೀರ್ತಿ ಪಡೆÀದು ಪಸರಿಸಿ | ಪ್ರತಿಯಿಲ್ಲ ಎನಿಸಿಕೊಂಬೆ ನಾ | ಸತತವನು ಪರರಾಶೆ ಮಾಡದಲೆ | ಚತುರತನ ಚತುರೋಪಾಯದಿ ಬಾಳುವೆ | ಕ್ಷಿತಿಯೊಳಗೆ ಅಭಿಮಾನ ಕ್ಷಿತಿಯಾಗದಂತೆ ಸು | ಮತಿಗಳಿಂದಲಿ ಬದುಕುವೆ | ಸುತ ಸಹೋದರ ನಡುವೆ | ಅತುಳ ಬಲವಂತನೆನೆಸುವೆನೆಂದು ಇದ್ದೆನಲ್ಲನೆ 1 ಜಡದೇಹವನು ಮೆಚ್ಚಿ ಮುಪ್ಪು ದೂರೆಂತೆಂದು | ಕಡು ಸಾಹಸವ ತಾಳಿದೇ ಒಡಿಯರಾರೆನಗಿಲ್ಲ ಒಬ್ಬರಿಗೆ | ಒಡಿಯನೆಂದು ಎಡೆಎಡೆಗೆ ಪೇಳಿಕೊಂಬೆ | ಮಡಗಿ ಧನವನು ಧರ್ಮ ಕೊಡದತೀ ಕೃಪಣನಾಗಿ | ಪಡವೆ ಸಂಸಾರವೆಂಬೊ ಅಹಂಕಾರವನು ತಾಳಿ | ಎಡಹಿ ಮುಂಗಾಣದ ಅಧಮನಂತೆ ಇದ್ದೆನಲ್ಲದೆ 2 ಪುರುಷ ಪಟಾಂತ್ರದವನಾಗಿ ಎಲ್ಲ | ಧಿಕ್ಕರಿಸಿ ನಿರಾಕರಿಸುವೆ | ಜರೆದು ನಿಷ್ಕರುಣದಲಿ | ವರ ಅಭ್ಯಾಗತಿಗಳನು | ಹುರುಳಗೆಡಿಸಿ ನೋಡುವೆ | ಗುರು ಹಿರಿಯರನು ಮರುಗುವಂತೆ ಕೇಡು ನುಡಿದು ಉ | ತ್ತರ ಅನುತ್ತರನಾಡುವೆ | ಪರಿಪರಿಯ ಮಾಯದ ಶರಧಿಯೊಳು ಬಿದ್ದು ಲಜ್ಜಿ ಉರಿಯೊಳಗೆ ಪೊಕ್ಕಂತೆ ಮರುಗುತ್ತಿದ್ದನಲ್ಲವೆ 3 ಅಪರಾಧವೇನಯ್ಯಾ ವಿಪರೀತ ತೋರದೆ | ಅ | ಪರಿಮಿತ ಪರಮಹಿಮನೆ | ಉಪಕಾರಕ್ಕಪಕಾರವೊ | ನಿಪುಣತನವಿರಲಿಲ್ಲವೊ | ಸಪುತೆರಡು ಲೋಕದೊಳಗಾನೆಂದು ಇದ್ದೆನಿಲ್ಲವೊ | ವಿಪುಳ ವೈಕುಂಠ ತೊಲಗಿಸದೆ ಸುಮ್ಮನಿರಬಲ್ಲನೆ4 ಪರದೈವ ನಾನೆಂದು ಪೇಳುವರ ಗಂಡನೆ | ಸರಿಗಾಣೆ ಈ ಮಹಿಯೊಳು | ಪತಿ | ಕರಿಸಿ ನಿಜಕರವ ಪಿಡಿಯಾಡದೆ | ಪರಮೇಷ್ಠಿ ಹರಿದು ತಲ್ಲಣಿಸಿ ನೆರದು ಭೀಕರಗೊಂಬರು | ಪರಮಾಣು ರೂಪ ಭಕ್ತರ ಪರುಶ | ಸಿರಿ ವಿಜಯವಿಠ್ಠಲ ವರ ವೆಂಕಟನೆ | ಶರಣಜನ ಪರಿವಾರ5
--------------
ವಿಜಯದಾಸ
ನೆನೆಮನವೇ ನಾರಾಯಣ ನಾಮವ ಅನುದಿನ ಧ್ಯಾನಿಸು ಗುರಮುಖದಂತೆ ಪ ಅನುಸಂಧಿಸುತಲಿ ಅವನಡಿ ಪಿಡಿಯುತ ಕನಿಕರದಿಂ ಕಾಯುವ ಕೈ ಹಿಡಿದು ಅ.ಪ ಅಡಿಗಡಿಗೊಂದೊಂದು ಯೋಚನೆ ಗೈವೆವೇ ಎಡಹಿ ಮುಗ್ಗುರಿಸುವೆ ಸುಡುಗಾಡೊಳಗೆ ಕಡಿದೋಡಿಸುತಲಿ ಪಾಪದ ಪಡೆಯಂ ಕಡೆಹಾಯಿಸುವನು ಕಷ್ಟದ ಕಡಲಿಂ 1 ತಮವೇ ತಾನು ಎಂಬ ಮೋಹದಿ ಕನವರಿಸುತ ಬಹು ಸಾಹಸ ತೋರ್ವೈ ಮನದೊಡೆ ಜೀವನು ಶರೀರವನು ಬಿಡೆ ಅನುಮತಿಸುತ್ತಲದ ಸುಟ್ಟು ಬಿಡುವರು 2 ತೃಷೆ ಜ್ವರ ರೋಗಗಳೊಳು ತಣಿವಂ ಕಾಣದೆ ತೊಳಲುತ್ತಿರುವೈ ಘನತರದಾಯುವು ಗತಿಸದ ಮೊದಲೆ ರಿನಕರನೊಳಗಿಹ ಶ್ರೀಶನ ನೋಡೈ 3 ಅನುಮಾನನ್ಯ ಆಶ್ರಯ ಬಿಡುಬಿಡು ತನುಮನ ತೊರೆಯನು ಆಪದ್ಭಂದು ಕೊನೆಗಳಿಗೆಯೊಳು ಕಡೆ ನುಡಿನುಡಿದು ಸನುಮತದಿಂ ಸಿರಿಯರಸನ ಪದವುಗು 4 ಸುಣ್ಣವ ತಿಂದ ತಿಮ್ಮಣನ ತೆರದಿ ನಿನ್ನ ಸ್ಥಿತಿಯ ಅನ್ಯಾಯವು ಸಹಜ ಕರ್ಮ ಬೆನ್ನನು ಬಿಡದಿದೆ ಇನ್ನು ಹೆಜ್ಜಾಜಿ ಶ್ರೀಶನ ಮರೆಹೊಗು 5
--------------
ಶಾಮಶರ್ಮರು
ಬಿನ್ನೈಪೆ ನಿನಗಾನು ಭಕ್ತ ಬಂಧು ನಿನ್ನ ವಿಸ್ಮøತಿ ದೋಷ ಕೊಡದಿರೆಂದೆಂದು ಪ ಭಾರ ತಾಳುವಾಗಲಿ ಎಡಹಿ ಕಾಲ ಕಾಲಗಳಲ್ಲಿ ಕಾಲನಾಮಕ ನಿನ್ನ ಲೀಲೆಗಳ ಮರೆಯದೆ ನಾಲಿಗ್ಗೆ ಬರುವಂತೆ 1 ನಿಲ್ಲುವಾಗ ಕುಳಿತು ಮೈದೊಳೆವಾಗ ಅನ್ನಗಳ ಮೆಲುವಾಗ ವಿದ್ಯೆಗಳ ಕಲಿವಾಗ ಮಲಗಿ ಸುಖದಿಂದ ನಲಿವಾಗ ಭಕ್ತವ ತ್ಸಲ ನಿನ್ನ ಮಹಿಮೆಗಳ ತಿಳಿವಂತೆ ಮಾಡಯ್ಯ 2 ಖೇದ ಮೋದಗಳು ಸಂತೋಷ ಸಂಪಾದಿಸಿದ ವೈದೀಕವೈದಿಕಗಳು ಸ್ತ್ರೀ ಧನಗಳೆಲ್ಲ ಶ್ರೀಧವನ ಆರಾಧನೆಗೆ ನಿ ವೇದಿಪುದ ತಿಳಿಸೆಂದು 3 ಮೃಗ ಚೋರ ಮುಂತಾದ ಭಯಗಳಲಿ ಭ್ರಾಂತಿಗೊಳಿಸುವ ವಿಷಯ ಸಂತತಿಯಲಿ ಪ್ರಾತಃ ಕಾಲದಿ ರಮಾರಮಣ ನಿನ್ನ ಮೂರ್ತಿ ಚಿಂತನೆಗೆ ಬರಲೆಂದು ಸಂತೋಷದಾತ 4 ಶ್ವಾನ ಸೂಕರ ಜನ್ಮ ಬರಲಿ ಯಮ ದಂಡ ದೂತರ ಪಾಶಕಂಜೆ ನಾನು ಪಾಂಡವ ಪ್ರಿಯ ಜಗನ್ನಾಥ ವಿಠಲನೆ ಪಾ ಷಂಡಿ ಮತಗಳಲಿ ಚೆನ್ನ ಕೊಡದಿರೆಂದು 5
--------------
ಜಗನ್ನಾಥದಾಸರು
ವೃಂದಾವನದ ಸೇವೆಯ ಪ. ವೃಂದಾವನದ ಸೇವೆಮಾಡಿದವರಿಗೆ ಭೂ-ಬಂಧನ ಬಿಡುಗಡೆಯಾಗುವುದು ಅ.ಪ. ಕರವ ಮುಗಿದು ಬೇಗೀ-ರೇಳು ಲೋಕದ ಮಾತೆಗೆ ನಮೋಯೆಂಬೋದಲ್ಲದೆಏಳು ಪರದಕ್ಷಿಣೆಯನು ಮಾಡಿದವರಿಗೆಏಳು ಜನಮದ ಪಾಪ ಹಿಂಗುವುದು1 ಸಾರಿಸಿ ರಂಗವಲ್ಲಿಯನಿಟ್ಟು ಮೇಲೆ ಪ-ನ್ನೀರನೆರೆದು ಪ್ರತಿದಿವಸದಲ್ಲಿಸಾರಿ ಸೇವೆಯ ಮಾಡಿದವರಿಗೊಲಿದು ಮುನ್ನಸೇರಿಸುವಳು ತನ್ನ ಪದವಿಯನು 2 ಒಡೆಯನ ಮನೆಗೆ ನೀರುತರುತಲೊಬ್ಬಳುಎಡಹಿ ಬಿದ್ದಳು ತನ್ನ ಕೊಡನೊಡೆಯೆಸಿಡಿದು ಶ್ರೀತುಳಸಿಗೆ ತಂಪಾಗಲು ಮುನ್ನಕೊಡಳೆ ಅವಳಿಗೆ ಮೋಕ್ಷಪದವಿಯನು 3 ಕೇಶವ ಎಂಬ ಭೂಸುರಗೆ ಶುಕಯೋಗಿ ಉಪ-ದೇಶಿಸಿದನು ತನ್ನ ಭಾಗವತದಲ್ಲಿಕಾಸುವೀಸ ಹೊನ್ನು ಹಣ ಸವೆಯದಾಮುನ್ನ ನಿ-ರಾಶೆಯಿಂದಲಿ ಮುಕ್ತಿ ದೊರಕುವುದು 4 ಪೊಡವಿಗಧಿಕವಾದ ಸೋದೆ ಪುರದ ತ್ರಿವಿಕ್ರಮಎಡಭಾಗದಲಿ ಲಕ್ಷ್ಮಿದೇವಿಯ ಸಹಿತಸಡಗರದಿಂದಲಿ ಹಯವದನನ ಪಾದಬಿಡದೆ ಪೂಜಿಸಿ ಭಕ್ತಿ ಪಡೆಯಿರಯ್ಯ 5
--------------
ವಾದಿರಾಜ
ಎಂಥ ಉಪಕಾರಿಗಳು ಸುಜನರು ಶ್ರೀಕಾಂತ ನಿನ್ನೊಲುಮೆಯ ಉಪಾಯದೋರುವರು ಪ.ಅಜ್ಞಾನ ಕತ್ತಲೆಯೊಳು ಎಡಹಿ ನಡೆಗೆಟ್ಟಡಿ ಯವÀ? ರಿಗೆಸುಜ್ಞಾನವೆಂಬ ಅಂಜನವನಿಟ್ಟುಪ್ರಜ್ಞಾಪೂರ್ಣರ ಶಾಸ್ತ್ರಪ್ರಭೆಯಲ್ಲಿ ಪಥವಿಡಿಸಿಯಜೆÕೀಶ ನಿನ್ನ ಬಳಗವ ಕೂಡಿಸುವರೊ 1ಭವತಾಪದಲಿ ಬಳಲಿ ಎದೆಯಾರಿದರಿಗೆ ಸನ್ನವಭಕ್ತಿಯಮೃತ ರಸವಾರಿನಿಧಿಯಸವಿದೋರಿ ಸ್ನಾನಪಾನವ ಕಲಿಸಿ ಸುಖವಿತ್ತುಸವಿಯದಾನಂದ ಉರದಲಿ ಪೊಯ್ದಿಡುವರು 2ವಿಷಮ ವಿಷಯ ಧ್ಯಾನ ದಾರಿದ್ರ್ಯ ಪೀಡಿತಮಾನುಷರ ಜಂಗುಳಿಗೆ ವೈರಾಗ್ಯವೆಂಬಅಸಮಭಾಗ್ಯವನಿತ್ತುಭವಬಿಡಿಸಿ ಸಲಹಿ ಅಕಲ್ಮಷ ಪ್ರಸನ್ನವೆಂಕಟಪತಿಯ ನಂಬಿಸಿದರು 3
--------------
ಪ್ರಸನ್ನವೆಂಕಟದಾಸರು
ನಾಮವನೊದಗಿಸಯ್ಯ -ಶ್ರೀಹರಿ ನಿನ್ನ |ನಾಮವನೊದಗಿಸಯ್ಯ ಪನಾಮವನೊದಗಿಸಯ್ಯ ನಾನೆಂಬ ಕರ್ತೃತ್ವ ಬಿಡಿಸಿ |ಸಾಮಜಪೋಷಕ ನಿನ್ನ ಪಾದಸರಸಿಜಗಳಿಗೆರಗುವೆ ಅ.ಪಮಾತನಾಡುವಾಗ ಮಲಗುವಾಗ ನಡೆಯುವಾಗ |ಭೀತಿಗೊಂಡಾಗ ಎಡಹಿಬೀಳುವಾಗ |ಸೀತಾರಾಮ ಗೋವಿಂದ ಶ್ರೀ ವೈಕುಂಠಾಧೀಶ ಅ-|ನಾಥ ಬಾಂಧವ, ಕೃಷ್ಣಾ, ಕೃಷ್ಣಾ ಎಂದು ಕರೆವ 1ತನು ತಾಳದಂಥಕ್ಷುಧೆದಾಹವಿಕಾರಗ-|ಳನುಭವಿಸುತ ಕಂಗೆಡುವಂಥ ಸಮಯದಲ್ಲಿ ||ವನಜನಾಭಗೋವಿಂದ, ವಾಣೀಪತಿಪಿತ ಕೃಷ್ಣ |ದನುಜಮರ್ದನ ಭಕ್ತ ವತ್ಸಲನೆಂದು ಕರೆವ2ಆಸಹ್ಯವಾದಜರೆರೋಗಂಗಳಾವರಿಸಿ |ಅಸುಗಳು ಕಂಠಗತವಾಗಿ ಧೃತಿತಪ್ಪಿ ||ವಿಷಮದೂತನ ಕೈವಶವಪ್ಪ ಸಮಯದಲ್ಲಿ |ಬಿಸಜಾಕ್ಷ ಪುರಂದರವಿಠಲನೆಂದು ಕರೆವ 3
--------------
ಪುರಂದರದಾಸರು