ತಪ್ಪು ಮಾಡುವದು ಮನುಜ ಧರ್ಮ | ನಮ್ಮದು ಬೇಡುವದು ಕಾಡುವದು ಪ
ನಡೆ ನುಡಿಗೆ ತಪ್ಪು ನೋಡುವದು ನ್ಯಾಯವೇ ನಿನಗೆ ||ಬಡವರಾಟಗಳೆಂದು ಸಲುಹಯ್ಯ | ಮಾಡಲಬೇಡ ತಡವ |ಕಡಿದ್ಹಾಕು ಕಮಳಲೋಚನಾ | ಎನ್ನ ನಿನ್ನಡಿಗೆಸೇರಿಸು | ಕಡಲಶಯನ ಮೋಹನ್ನಾ 1
ಮಡಹಿ ಮಲ್ಲನ ಕೆಡವಿ | ಜೋಡು ಮತ್ತಿಯ ಮರವ ತಡವಿ | ಮಧು ಮೊದಲಾದವರನ್ನು | ಅಡವಿ ಕಿಚ್ಚವ ನುಂಗಿ | ಕಡುವಿ ಮಡುವ ಧುಮುಕಿ | ಬಡವಿ ಕುಬ್ಜಿಯ ಕೈಪಿಡಿದು ಯಶವ ಪಡೆದಿ 2
ನಡೆವವನು ಎಡವುವನೆಂದು | ಅಪರಾಧಗಳನುಬಡಿದಾಡದೆ ಒಡಲೊಳಗೆ ಹಿಡಿವ | ಮಡದಿಯನುನಿಮ್ಮ ಜಡೆಯಲಿರಿಸಿದ ಮನೆಯಲಿ ಎನ್ನ |ಸಡಗರದ ರುಕ್ಮದಿಂದಿಡಿದು ಲಾಲಿಸು 3