ಪಡಿಶಟ್ಟು ಪಟ್ಟಣವ ಕೇಳದೆಯಕ್ಕಪಡಿಶಟ್ಟು ಪಟ್ಟಣವಪಡಿಶಟ್ಟು ಪಟ್ಟಣದ ವಿವರ ಕೇಳೇಹುಟ್ಟಳಿವುದಕೆ ಕಡೆಯಿಲ್ಲ ಪ
ಪಟ್ಟಣದರಸಗೆ ತಲೆಯೇ ಇಲ್ಲಪಟ್ಟಣದರಸನ ಹೆಂಡತಿ ರಂಡೆಪಟ್ಟುಗೊಡುವ ಓಲೆಕಾರರು ಪಾಪಾಶಿ ಬೆಲೆಯವರು 1
ಸಿಂಗಲೀಕನವ ಪ್ರಧಾನಿ ಶಿಷ್ಟನೀಗವನು ಕೋಣಮಂಗಳನೀಗವನು ತಳವಾರಅಂಗತಿರುಗುವವನೆ 2
ಕರಣೀಕನೀಗವ ಮೊಂಡನೊಣವು ಎಂಬುವನವನಾಚಾರಿಹಿರಿಯ ಗೂಗೆ ಬಹಳ ಮುದುಕಿ ಎಲ್ಲರಿಗು ಹಿರಿಯವಳು 3
ಹದ್ದು ಈಗ ತಾ ದಳವಾಯಿನೀಚರೆಲ್ಲರು ನಾಯಕರುಇದ್ದ ವಕ್ಕಲು ಎಲ್ಲ ದುಃಖಿಗಳು ಬಲು ಎಡವಟ್ಟುಗಳು 4
ಗುರು ಕರುಣದಿ ಅರಸಗೆ ತಲೆ ಬರಲುಅರಸನ ಹೆಂಡತಿ ಮಂಗಳೆಯಾಗಲುಗುರು ಚಿದಾನಂದ ತಾನಾದರಸು ಎಲ್ಲರು ಮುಕ್ತರೆ 5