ನಾ ಕಣ್ಣ ತುಂಬ ನೋಡಿ ನಲಿವೆನು
ಲೋಕೇಶ ಶ್ರೀ ವೈಕುಂಠನನ್ನು ಪ
ಶರಧಿ ಮಧ್ಯದಲ್ಲಿ ಉರಗಶಯನನಾಗಿ
ನಿರುತ ಲಕ್ಷ್ಮೀತಾ ಚರಣ ಪೊತ್ತುತಿರುವವನ್ನ 1
ಸಾರಸೋದ್ಭವನಪಾರಲೀಲೆ ನೋಡಿ
ನಾರದ ತುಂಬುರರ ಸಾರಗಾವ ಕೇಳ್ವವನ್ನ 2
ಗರುಡ ಆಂಜನೇಯರು ಮುಂಗಡೆ
ಕರವ ಮುಗಿದು ತಾ ಸೇವೆ ಗೈಸುವವನ 3
ಬಿಡದೆ ಭಕ್ತರ ಎಡರುಗಳನು ಹರಿಸಿ
ಒಡನೆ ಕಾಯ್ದಿಹ ಒಡೆಯ ಜಾಜೀಹರಿಯ 4