ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆತ್ಮಶೋಧನೆ ಪ್ರಧಾನ ಮಾಡೂ ಇಭಗಿರಿವಾಸ ಪ. ಮಂಗಳ ಮಹಿಮನೇ ರಂಗನಾಥನೆ ಕೃಷ್ಣಾ ತುಂಗ ವಿಕ್ರಮ ನರಸಿಂಗ ಲಕ್ಷ್ಮೀಕಾಂತ 1 ಮೃತ್ಯು ಬೆನ್ಹತ್ತಿರೆ ಕತ್ತರಿಸುವ ಮಹ ಶಕ್ತ ನೀನಿರುತಿರೆ ಮತ್ತಾರ ಬೇಡಲಿ 2 ನಿನ್ನ ಕಿಂಕರಳಾಗಿ ನಿನ್ನ ಸೇವೆಯ ಮಾಳ್ಪ ಉನ್ನಂತ ಅಭಿಲಾಷೆಯನ್ನು ಸಲ್ಲಿಸು ದೇವ 3 ಹಿಂದಿನ ಎಡರುಗಳೊಂದೊಂದರಲಿ ಕಾಯ್ದೆ ಇಂದು ಮುಂದೂ ಕಾಯೋ ಮಂದಹಾಸನೆ ಸ್ವಾಮಿ 4 ಹರಿಗುರು ಕಾರ್ಯಕಲ್ಲವೆ ಎನ್ನ ಈ ದೇಹಾ ಸಿರಿವರ ಗೋಪಾಲಕೃಷ್ಣವಿಠ್ಠಲ ಸ್ವಾಮಿ 5
--------------
ಅಂಬಾಬಾಯಿ
ಓದುವುದು ವೇದ ಹಾಕುವುದು ಗಾಳ ಪ. ಮಾಧವನು ತಾನೆ ಗಡ ಮನುಜರನುಸರಣೆ ಗಡವ್ಯಾಧಿಗಳು ಬಿಡವು ಗಡ ಸುರನದಿಯಯಾತ್ರೆ ಗಡ 1 ಆ ದೇವನೆ ತಮ್ಮ ಮನೆಮನೆಗೆ ದೈವ ಗಡಪೋದ ನಿಗಮವ ತಂದ ಹಯವದನನೇ ಜಗವ(?) 2 ಕಾದಿಗೆಲಿದನು ಗಡ ಎಡರುಗಳು ಬಿಡವು ಗಡಕ್ರೋಧದಿ ದೋಷವಲ್ಲದವಸ್ತು ತಾನೆ ಗಡ 3 ಶಿವನಲ್ಲ ಹರಿಯಲ್ಲ ವಿಪ್ರರುಗಳಲ್ಲಅವರ ನೋಡಲಿ ಬೇಡ ಅವರಿಗೀಯಲಿ ಬೇಡ 4 ಇಂತೆಂಬ ನುಡಿಯೊಳು ದ್ವೇಷ ಕಾಣಿಸಲುಸಂತರೆಲ್ಲರು ನೋಡಿ ಹಯವದನನಿದ ಮೆಚ್ಚ 5
--------------
ವಾದಿರಾಜ
ನಾ ಕಣ್ಣ ತುಂಬ ನೋಡಿ ನಲಿವೆನು ಲೋಕೇಶ ಶ್ರೀ ವೈಕುಂಠನನ್ನು ಪ ಶರಧಿ ಮಧ್ಯದಲ್ಲಿ ಉರಗಶಯನನಾಗಿ ನಿರುತ ಲಕ್ಷ್ಮೀತಾ ಚರಣ ಪೊತ್ತುತಿರುವವನ್ನ 1 ಸಾರಸೋದ್ಭವನಪಾರಲೀಲೆ ನೋಡಿ ನಾರದ ತುಂಬುರರ ಸಾರಗಾವ ಕೇಳ್ವವನ್ನ 2 ಗರುಡ ಆಂಜನೇಯರು ಮುಂಗಡೆ ಕರವ ಮುಗಿದು ತಾ ಸೇವೆ ಗೈಸುವವನ 3 ಬಿಡದೆ ಭಕ್ತರ ಎಡರುಗಳನು ಹರಿಸಿ ಒಡನೆ ಕಾಯ್ದಿಹ ಒಡೆಯ ಜಾಜೀಹರಿಯ 4
--------------
ಶಾಮಶರ್ಮರು
ರಾಘವೇಂದ್ರ ಸ್ವಾಮಿಗಳು ಅಂತರಂಗದಿ ಹರುಷವಾಂತೆವೈ ಗುರುವೆ ಪ ಸಂತಸದಿ ಸೇವೆಗಳ ಸ್ವೀಕರಿಸು ಪ್ರಭುವೆ ಅ.ಪ ಮಂಗಳಾಂಗಿಯರೆಲ್ಲ ಮಿಂದು ಮಡಿಗಳನ್ನುಟ್ಟು | ಮಂಗಳಾತ್ಮಕ ನಿನಗೆ ಮಜ್ಜನವ ಗೈಸೆ || ಅಂಗಳದಿ ದಧಿಕ್ಷೀರ ಘೃತಕುಂಭಗಳಧರಿಸಿ | ಸಿಂಗರದಿ ನಿಂದಿಹರೊ ಗುರುರಾಘವೇಂದ್ರ 1 ಧಾರುಣೀಸುರರೆಲ್ಲ ಧೀರಯತಿವರ ನಿನಗೆ | ಚಾರುವಿಭವದಿ ಕವಚ ಧಾರಣೆಯ ಗೈಸೆ || ಸೇರಿ ನುತಿಸುತೆ ನಿನ್ನ ಸಾರಗುಣ ಸಂಪನ್ನ | ಸಾರಿಹರೊ ನಿನ್ನಡಿಗೆ ಗುರುರಾಘವೇಂದ್ರ 2 ನಿಂದು ಭೂಸುರರೆಲ್ಲಾ ಜಯಜಯ ಜಯವೆನಲು| ಮಂದಹಾಸದಲವರ ಸೇವೆಯನು ಕೊಂಡೆ || ಇಂದು ಬೃಂದಾವನದಿ ನಿಂದು ದರ್ಶನವಿತ್ತೆ | ಕುಂದದಿಷ್ಟವ ಸಲಿಸೊ ಗುರುರಾಘವೇಂದ್ರ 3 ಉಡುರಾಶಿಗಳ ಮಧ್ಯೆ ಉಡುಪ ಮೆರೆಯುವ ತೆರದಿ | ಉಡುಗಣಿಕ್ಷೇತ್ರದೊಳು ನಿಂದು ಮೆರೆದೆ || ಕಡುಮಮತೆಯಲಿ ನಿನ್ನ ಸಡಗರದಿ ಸೇವಿಪರ | ಎಡರುಗಳ ಪರಿಹರಿಸೊ ಗುರುರಾಘವೇಂದ್ರ4 ನರಹರಿಯ ಮೆಚ್ಚಿಸಿದೆ ಪ್ರಹ್ಲಾದನೆನಿಸುತಲೆ | ಸಿರಿಕೃಷ್ಣನೊಲಿಸಿದಿಯೊ ವ್ಯಾಸಮುನಿ || ಸಿರಿರಾಮಚಂದ್ರಪ್ರಿಯ ಗುರುರಾಘವೇಂದ್ರನೆ | ಕರುಣದಲಿ ತೋರೀಗ ಶ್ರೀಶಕೇಶವನ5
--------------
ಶ್ರೀಶ ಕೇಶವದಾಸರು