ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಡು ನಿನ್ನ ಧ್ಯಾನ ಒಡೆಯ ಶ್ರೀರಮಣ ಎಡಬಿಡದಲೆ ತವಅಡಿಭಕ್ತಿಜ್ಞಾನ ಪ ವನವಸೇರಿರಲಿ ಮತ್ತನುಗಾಲ ಬಡತನ ವನುಭವಿಸುತಿರಲಿ ಘನಸುಖದಿರಲಿ 1 ಸತಿಯಳೊಂದಿಗೆ ಬಿಡದೆ ರತಿಕ್ರೀಡೆಲಿರಲಿ ಸತತದಿ ತವಭಕ್ತಿ ಹಿತಾಹಿತದ ಚಿಂತನೆಯನು 2 ಚಳಿ ಮಳೆಯೊಳು ಬಿದ್ದು ಕಳವಳಗೊಳ್ಳುತಿರಲಿ ಹುಲಿಯ ಬಾಯೊಳು ಸಿಲ್ಕಿ ಹಲುಬಿ ಎದೆಯೊಡೆದು 3 ಕೊಟ್ಟ ಒಡೆಯರು ಬಂದು ಕಟ್ಟಿ ಕಾದಲಿ ಜನ ಬೆಟ್ಟ ಬೇಸರಮಾಡಿ ಅಟ್ಟಬಡಿಯುತಿರಲಿ 4 ಬೇನೆಯೊಳ್ ಬಿದ್ದಿರಲಿ ಹಾನಿಯಾಗಲಿ ಮಾನ ಕಾಣದೆ ಸುಳ್ಳನೆಂದು ಹೀನನುಡಿಯಲಿ ಬಿಡದೆ 5 ಹಗೆಗಳು ಬಂದೆನ್ನ ಬಗೆ ಬಗೆ ನಿಂದಿಸಿ ನಗೆಗೇಡು ಮಾಡೆನ್ನ ಜಗದೆಳಡಾಡುತಿರಲಿ 6 ಅವ ಪರಿಯಲಿರಲಿ ದೇವ ಶ್ರೀರಾಮ ನಿನ್ನ ಸಾವಿರನಾಮ ಎನ್ನ ಭಾವದಿ ನುಡೀತಿರಲಿ 7
--------------
ರಾಮದಾಸರು
ವೀರೆಯ ನೋಡಿರೋ ಅಸುರರ ಮಾರಿಯ ನೋಡಿರೋಶೂರಾದಿ ಶೂರರ ದಾರಿಯ ಹಚ್ಚಿಸಿಮುರಿದ ಮಹಿಷಾಸುರನ ತರಿದಪರಿಶಿಲೋಮನು ಶಕ್ತಿಯ ಪಡೆದು ನಡೆದು ಕಣ್ಕೆಂಪಿಡಿದುಮಸಗುತಲಿಡಲು ಶಕ್ತಿಯ ದೇವಿಯು ಹಿಡಿದೆ ಹಲ್ಲನು ಕಡಿದೆಕೊಸರಿಯೆ ಇಟ್ಟಳು ಅಸುರನ ಎದೆಗೆ ಹೊಯ್ದು ರಕ್ತದಿ ತೊಯ್ದುಬಸವಳಿಯುತ ರಿಶಿಲೋಮನು ಭೂಮಿಗೆ ಬೀಳೆ ಬಹು ಹುಡಿಯೇಳೆ1ವರರುದಗ್ರನು ಗದೆಯನು ಹೊತ್ತು ಬರಲು ದೇವಿಗೆರಗಲುಶರದಿಂದಲಿ ತಲೆಯುರುಳಿಸಿ ಶಿರ ಬೊಬ್ಬಿರಿದು ಡಿಂಬವು ನಡೆದುಭರದಲಿ ಹೊಯ್ದುದು ಗದೆಯಲಿ, ಶರ ಸೋನೆಯ ಸುರಿದು ಖಡ್ಗವಹಿರಿದು ಪರಮೇಶ್ವರಿ ಭಾಪೆನಲು ನಡೆದು ಬಿತ್ತು ಪ್ರಾಣ ಹೋಗಿತ್ತು2ದಳಪತಿಯಹ ಚಿಕ್ಷುರಗೆ ಸಮನೆ ತ್ರಿಣಯನ ಕಾಣೆನು ಎಣೆಯನಹೊಳಕಿದ ನಾನಾಪರಿಆಯುಧದಿ ಮುಂದೆ ಧಿರುಧಿರು ಎಂದೆಒಳ ಹೊಕ್ಕಿರಿದನು ದೇವಿಯ ಶೂಲದಿ ಎದೆಯ ಶೌರ್ಯ ಶರಧಿಯಬಳಿಯದ ದೇವಿಯು ತಪ್ಪಿಸಿ ಶೂಲದಿ ತಿವಿಯೆ ಕಂಗಳ ಮುಗಿಯೆ3ದುಷ್ಟ ಬಿಡಾಲನು ಶರಗಳ ಸುರಿದನು ಮುಚ್ಚೆ ಸುರರೆದೆ ಬಿಚ್ಚೆಎಷ್ಟನು ಹೇಳಲಿ ಮಾಯದಿ ಮುಸುಕಿ ಇರಿದ ಬಹು ಬೊಬ್ಬಿರಿದಮುಷ್ಟಿಯಲಿ ತಿವಿದನು ದೇವಿಯ ಕೋಪವು ಹೆಚ್ಚಿ ತಾನವುಡುಗಚ್ಚಿಬಿಟ್ಟನು ದೇಹವ ದೇವಿಯು ಶೂಲದಿ ತಿವಿಯೆ ರಿಪುಭವವಳಿಯೆ4ಎಡಬಿಡದಲೆ ರೌದ್ರದಿ ಮಹಿಷಾಸುರನೊತ್ತೆ ದೇವಿಯು ಮತ್ತೆಕಿಡಿಕಾರುತ ಹೊಕ್ಕೊದೆದಳು ಬೀಳಲು ಕವಿದು ಶೂಲದಿ ತಿವಿದುಕಡಿದಳು ಕೊರಳನು ತಲೆಯನು ಮೆಟ್ಟಿ ಓಡಿತು ಭಯ ಹಿಮ್ಮೆಟ್ಟಿಮೃಡಚಿದಾನಂದನು ತಾನಾದ ಬಗಳ ಕರುಣಿ ಭಕ್ತರಭರಣಿ5
--------------
ಚಿದಾನಂದ ಅವಧೂತರು