ನಡೆಯ ಬೇಕೆಲ್ಲೋರಂಗಾ ವಳಮನಿಗೆ |
ತಡವಾಯಿತು ಬಂದು ಸಭೆಯೊಳಗೆ ಪ
ಭಕುತರು ತಾಳ ಮೃದಂಗ ವೀಣೆಗಳಿಂದ |
ನಿಗಮಗೋಚರ ನಿಮ್ಮಚರಿತವನು |
ಬಗಿ ಬಗಿಯಲಿ ಪಾಡುವದಕೆ ಮರುಳಾಗಿ |
ನಗಧರನಿಂತೀ ಸಕಲ ಮರೆದು 1
ಹೊನ್ನು ಮಯದ ತೂಗು ತೊಟ್ಟಿಲ ವಂಬರ |
ಬಣ್ಣಬಣ್ಣದ ಪುಷ್ಪವಹಾಸಿ |
ರನ್ನ ದೀಪದ ಎಡಬಲಲಿಂದಿರೆದೇವಿ |
ನಿನ್ನ ಮಾರ್ಗವ ನೋಡುತಿಹಳಯ್ಯಾ | 2
ಬಂದ ಭಾಗವತರಿಗೆಲ್ಲ ಬೇಡಿದ್ದು ಕೊಟ್ಟು |
ಮಂದ ಹಾಸದ ಉಚಿತದಿ ಕಳುಹಿ |
ಸಾರಥಿ |
ಛಂದದಿ ಬಿನ್ನಹ ಅವಧರಿಸಿ 3