ಒಟ್ಟು 13 ಕಡೆಗಳಲ್ಲಿ , 10 ದಾಸರು , 13 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಧ್ಯಾಯ ಮೂರು ಜನ್ಮನಾಕಾಶನಂದಾ ವಸುಧಾನಾಗ್ರಜಾ ನಿಜಾನ್ ಪದ್ಮಾವತೀ ಪದ್ಮಭವಾ ವನಕ್ರೀಡಾರತ್ಯಾವತಾತ್ ವಚನ ಸಂದರ್ಶನಾದದ್ದು ತಂದೆಯ ಕಥೆಸ್ಮøತಿಗೆ ತಂದು ಅದು ವಿಸ್ತಾರದಿಂದ ಪೇಳುವೆನು ಸುಧರ್ಮನೆಂದು ಇರವನು ಅವಗೆ ಮುಂದೆ ಇಬ್ಬರು ಸುತರು ಚಂದದಲಿ ಆಕಾಶನೆಂದು ತೊಂಡಮಾನಸೆನಿಸುವನು 1 ವ್ಯಾಕುಲದಿ ಹೀಗೆ ಇಲ್ಲೆಂದು ಶೋಕದಲಿ ಕಣ್ಣೀರು ಹಾಕಿ ಸ್ಮರಿಸಿದ ದೇವಲೋಕ ಗುರುವ ಯಾಕೆ ಸ್ಮರಿಸಿದೆ ಎನ್ನನೀಕಾಲದಲಿ ಏನುಬೇಕು ಬೇಡಲೋನೀನು ನಾ ಶೋಕವನು ನುಡಿದಾ2 ಪಾಪಿಷ್ಠ ಏನು ಇದ್ದೇನು ನಾನು ಮಾಡಿದ ಪೇಳೋ ಹೀನಬುದ್ಧಿ ಕೊಲಿಸಿದೆನೇನು ಏನು ಕಾರಣ ಸಂತಾನ ಕಣ್ಣಿಲಿ ಕಾಣೆ ನಾನು ಅಯ್ಯಯ್ಯೊ 3 ಮಕ್ಕಳಾಡಿದರೆ ಬಹಳಕ್ಕರತೆ ಜೀವಕ್ಕೆ ಮಕ್ಕಳಿಲ್ಲದೆ ಮತ್ತೆ ಮಿಕ್ಕರಸ ಮಕ್ಕಳಿÀಂದಲೆ ಹಬ್ಬ ಹುಣ್ಣಿಮೆಯು ಉಲ್ಲಾಸ ಮಕ್ಕಳಿಂದಲೆ ಮುಂಜಿ ಮದುವೆಯ ಧರೆಯೊಳಗಿಲ್ಲ ಮಕ್ಕಳಿಂದಲೆ ಇಹವು ಮಕ್ಕಳಿಂದಲೆ ಪರವು ಮಕ್ಕಳಿಲ್ಲೆನ್ನ ಭಾಗ್ಯಕ್ಕೆ ಅಯ್ಯಯ್ಯ 4 ನೋಡಿಲ್ಲ ಮಕ್ಕಳಾಡಿದ ಮಾತು ನಕ್ಕು ಕೇಳಿಲ್ಲ ನಾ ಮಕ್ಕಳಿಂದಲೆ ಕೂಡಿ ಅಕ್ಕರದಿ ಉಣಲಿಲ್ಲ ಮಕ್ಕಳನು ಎತ್ತಿ ಮುದ್ದಿಕ್ಕಿದವನಲ್ಲ ಮಕ್ಕಳಿಲ್ಲದ ಮನುಜ ಲೆಕ್ಕದಾವದರೊಳಗೆ ಬೆಕ್ಕು ಮೊದಲಾದಂಥ ಮಿಕ್ಕ ಪ್ರಾಣಿಗಳೆಲ್ಲ ಮಕ್ಕಳಾಡಿದ ಬಹಳ ಚಕ್ಕಂದವನು ನೋಡಿ ಸೌಖ್ಯ ಪಡುತಿಹದಯ್ಯ ಧಿಕ್ಕರಿಸು ಎನ ಜನ್ಮ ಅದಕ್ಕಿಂತ ವ್ಯರ್ಥ 5 ಮುನ್ನ ನಮ್ಮೊಳಗಾರು ಉಣ್ಣದಲೆ ಈ ಬದುಕು ಮಣ್ಣು ಪಾಲಾಗುವದು ಘನ್ನ ಈ ಚಿಂತಿಯಲಿ ಬಣ್ಣಗೆಟ್ಟೆನು ಕುದ್ದು ಸುಣ್ಣಾದೆನಯ್ಯ ಉಭಯಕುಲ ತಾರಿಸುವಂಥ ನಾನು ಅಣ್ಣತಮ್ಮರ ಒಳಗೆ ಪುಣ್ಯ ಇಲ್ಲೊಬ್ಬನಲಿ ಪುಣ್ಯಗುರುವೆ 6 ರಾಗ:ಶಂಕರಾಭರಣ ಆದಿತಾಳ ಇಂಥ ಮಾತಿಗೆ ಜೀಯ ಹೀಗಂತ ನುಡಿದನು ಚಿಂತೆ ಮಾಡಬೇಡ ಭೂಕಾಂತ ಎಂದನು 1 ಪುತ್ರ ಕಾಮೇಷ್ಟಿಮಾಡು ಭಕ್ತಿಯಿಂದಲಿ ಪುತ್ರನಾಗುವನು ನಿಮಗೆ ಸತ್ಯ ನೀ ತಿಳಿ 2 ಗುರುವಿನ ಮಾತುಕೇಳಿ ಪರಮ ಹರುಷದಿಂದಲಿ ಅರಸ ಬ್ರಾಹ್ಮಣರನೆಲ್ಲ ಕರೆಸಿದಾಗಲೇ 3 ಮುಂದೆ ಯಜ್ಞ ಮಾಡಬೇಕು ಎಂದÀು ತ್ವರದಲಿ ಒಂದು ಭೂಮಿ ಶೋಧಿಸಿದನು ಚಂದದಲಿ 4 ಚಲುವ ನೇಗಿಲ ಜಗ್ಗಿ ಎಳೆವ ಕಾಲಕೆ ಹೊಳೆವ ಪದ್ಮ ಬಂತು ಅಲ್ಲಿ ಸುಳಿದು ಮೇಲಕೆ 5 ಇರುವಳೊಬ್ಬಳಲ್ಲಿ ಮತ್ತೆ ಪರಮಸುಂದರಿ ಅರಸನೋಡಿ ಬೆರಗಿನಿಂತ ಸ್ಮರಿಸಿ ಪರಿಪರಿ 6 ಕಾಣಿಸಿದಲೆ ಗಗನದಲಿ ವಾಣಿಯಾಯಿತು ಕಾಣದಿದ್ದರೂ ಈಗ ಸಕಲಪ್ರಾಣಿ ಕೇಳಿತೊ 7 ಇನ್ನು ಚಿಂತೆ ಮಾಡಬೇಡ ಧನ್ಯ ಅರಸ ನೀ ನಿನ್ನ ಮಗಳು ಎಂದು ಚೆನ್ನಾಗಿ ತಿಳಿಯೋ ನೀ8 ಕ್ಲೇಶ ಹಿಂದೆ ಬಿಡುವಿಯೊ ಮುಂದೆ ಮುಂದಕಿನ್ನು ಆನಂದ ಬಡವಿಯೊ9 ಗಗನ ವಾಣಿಯನ್ನು ಕೇಳಿ ಅರಸ ಬಗೆಯಲಿ ಮಗಳ ನೆತ್ತಿಕೊಂಡನಾಗ ಮುಗಳು ನಗೆಯಲಿ 10 ತಂದೆ ಮಗಳ ಜನ್ಮ ಪದ್ಮದಿಂದ ತಿಳಿದನು ಮುಂದೆ ಪದ್ಮಾವತಿಯೆಂದು ಕರೆದನು11 ಮಗಳಕಾಲಗುಣದಿ ಮುಂದೆ ಮಗನು ಆದನು ಅವನ ಕರೆದ ವಸುಧಾನನೆಂದು ಗಗನರಾಜನು 12 ತಕ್ಕವಾಗಿ ಅರಸಗ್ಹೀಗೆ ಮಕ್ಕಳಾದರು ಸೌಖ್ಯದಿಂದ ಮುಂದೆ ದಿನದಿನಕ್ಕೆ ಬೆಳೆದರು13 ಬಂತು ಯೌವನವು ಭೂಕಾಂತ ಪುತ್ರಿಗೆ ಬಂತು ಆಗ ಮತ್ತೆ ಬಹಳ ಚಿಂತೆ ಅರಸಗೆ 14 ಇಂಥ ಮಗಳಿಗಿನ್ನು ತಕ್ಕಂಥ ಪುರುಷನು ಪ್ರಾಂತದೊಳಗೆ ಇಲ್ಲದಿವ್ಯ ಕಾಂತಿ ಮಂತನು 15 ಎಂತು ನೋಡಲಿನ್ನು ಹುಡುಕಿ ಶ್ರಾಂತನಾದೆನು ಚಿಂತೆಯೊಳಗೆ ಬಿದ್ದು ಮುಂದೆ ಪ್ರಾಂತಗಾಣೇನು 16 ಅಂತರಂಗದೊಳಗೆ ಹೀಗಂತ ಅನುದಿನ ಚಿಂತಿಸಿದನು ಮರೆತು ಅನಂತಾದ್ರೀಶನ17 ವಚನ ಚಂದಾದ ಕುಸುಮಗಳ ಕೂಡಿ ಮುಂದೆ ಇಂದು ಮುಖಿಯು ನೋಡುತಲೆ ಮುಂದೆ ತೆಗೆದು ತ್ವರದಿಂದ ಆಭರಣಗಳ ಮುಂದೆ ತರಿಸಿದಳು1 ಕೆತ್ತಿಸಿದ ರಾಗುಟಿಯ ಒತ್ತಿ ಮೊದಲ್ಹಾಕಿ ಹತ್ತೊತ್ತಿದಳು ಸಾಲ್ಹಿಡಿದು ಇತ್ತಿತ್ತು ಮತ್ತೆ ತುದಿಗೆ ಅತ್ತಿತ್ತ ಮತ್ತ ಮೇಲರಿಸಿನವ ಚಿತ್ತಗೊಟ್ಟಚ್ಚಿದಳು ಚಿತ್ತಾರ ಬರೆದಂತೆ ಮತ್ತ ಗಜಗಮನೆ 2 ಥಳಥಳನೆ ಜಾತಿಯಿಂದ್ಹೊಳೆವ ಮುತ್ತಿನ ಭವ್ಯ ಎಳೆಯ ಇಮ್ಮಡಿ ಮಾಡಿ ನಳಿನಾಕ್ಷಿ ಬೈತಲಗೆ ಅಳತೆಯಿಂದ್ಹಾಕಿದಳು ತಳಪಿನಲಿ ಎಡಬಲಕೆ ಎಳೆದು ಕಟ್ಟಿದಳ್ಹಿಂದೆ ಹೆರಳಿಗ್ಹಾಕಿ ತೊಳೆದ ಮುತ್ತಿನ ಬುಗಡಿ ಪೊಳೆವ ಮೀನ್ಬಾವಲಿಯು ಝಳಿ ಝಳಿತವಾಗಿರುವ ಗಿಳಿಗಂಟಿ ಚಳತುಂಬುಗಳ ನಿಟ್ಟು ಕರ್ಣದಲಿ ಉಳಿದ ದ್ರಾಕ್ಷಾಲತೆಯ ಎಳೆದು ಬಿಗಿದಳು ಮೇಲೆ ಸುಳಿಗುರಳಿನಲ್ಲಿ 3 ಇದ್ದ ಮುತ್ತುಗಳ್ಹಚ್ಚಿ ತಿದ್ದಿ ಮಾಡಿದ ನತ್ತು ಉದ್ರೇಕದಿಂದಿಡಲು ಮುದ್ದು ಸುರಿವುತ ಮುಂಚೆ ಇದ್ದ ಮುಖ ಮತ್ತೆ ಎದ್ದು ಕಾಣಿಸಿತು ಪ್ರದ್ಯುಮ್ನ ಚಾಪದಂತೆರಡÀು ಹುಬ್ಬುಗಳ ಮಧ್ಯೆ ನೊಸಲಿನ ಮೇಲೆ ಶುದ್ಧ ಕಸ್ತೂರಿಯನ್ನು ತಿದ್ದಿ ತಿಲಕವನಿಟ್ಟು ತಿದ್ದಿದಳು ಕಾಡಿಗೆಯ ಪದ್ಮಲೋಚನಗಳಿಗೆ ಪದ್ಮಜಾತೆ 4 ಚಂದ್ರಗಾವಿಯನ್ನುಟ್ಟು ಚಂದಾದ ಕುಪ್ಪಸವ ಮುಂದೆ ಬಿಗಿ ಬಿಗಿತೊಟ್ಟು ಮುಂದಲೆಗೆ ಶೋಭಿಸುವ ಚಂದ್ರಸೂರ್ಯರನಿಟ್ಟು ಚೆಂದಾಗಿ ಬೈತಲೆಗೆ ಚಂದಿರವ ಸುರಿದಳು ಚಂದ್ರಮುಖಿಯು ಪರಿ ಗೀರು ಗಂಧವನು ಕೈಗ್ಹಚ್ಚಿ ಮುಂದೆ ಕೊರಳಿಗೆ ಒರಿಸಿ ಚಂದ್ರಸರ ಮುಂದೆ ಹಾಕಿದಳು 5 ಮೇಲಿಟ್ಟು ಚಿಂತಾಕವನು ಕಟ್ಟಿ ತಾಯತ ಬಟ್ಟಕುಚಗಳ ಏಕಾವಳಿಯ ಇಟ್ಟು ಪುತ್ಥಳಿ ಸರವು ಅಷ್ಟು ಸರಗಳನೆಲ್ಲ ಮೆಟ್ಟಿ ಮೇಲ್ಮೆರೆವಂಥ ಶ್ರೇಷ್ಠ ಸರಿಗಿಯತರಿಸಿ ಇಟ್ಟಳಾಕೆ6 ಟೊಂಕದಲಿ ಒಡ್ಯಾಣ ಮುಂದಲಂಕರಿಸಿದಳು ಪೊಂಕದಿಂದಿಟ್ಟು ಅಕಳಂಕ ಕೊಂಕವನು ಮಾಡುತಲೆÉ ಕಿಂಕಿಣಿಪೈಜಣ ಇಟ್ಟಳಾಕೆ7 ಪಿಲ್ಲೆ ಮೇಲಾದ ಮುಸುಕಿಕ್ಕಿ ಬಹು ಬಾಲೆಯರು ಕೊಟ್ಟ ಕೂಡಿ ಭಾಳ ಹರುಷದಿ ಹೊರಟಳಾಕಾಲದಲ್ಲಿ. 8 ವಚನ ಪರಿ ಗಜಗಮನದಿಂದಾ ವನ ಮದನ ಸತಿಯಂತಿಪ್ಪ ತರುಣಿರೂಪವ ತಾಳಿ ವನಮಧ್ಯದಲ್ಲಿ ತಾಂ ಬೆಸಗೊಂಡಳು ಯಾರಲೆ ಬಾಲೆ ನೀ ಬಾಲಚಂದ್ರ ಲಲಾಟೆ ಕಾಳಾಹಿ ವೇಣೀ ನೀ ಜಾತೆಯರ ಕೂಡಿ ಬಳಗವು ಕಾಂತನ್ಯಾರು ಪೇಳೆಂದು 1 ಧ್ವನಿ ಕೇಳೆ ಕುಸುಮಕ್ಕೆ ನಾ ಬಂದೆ ತಿಳಿಯೆ ಮಾತಿನರಗಿಳಿಯೆ 1 ಅಸಮ ತೋಂಡಮಾನನೆಂಬುವನು ನಮ್ಮ ಕಕ್ಕನು 2 ನಾ ಖೂನವನು ಪೇಳಿದೆ ಸಾರಿ ಪೇಳಿದೆ &ಟಿ
--------------
ಅನಂತಾದ್ರೀಶ - ಕಥನಕಾವ್ಯಗಳು
ಆನಂದ ಲಹರಿ (ಪಾರಮಾರ್ಥ ಮುಯ್ಯದ ಹಾಡು ) ಗಿರಿಜೇಶ ಮನೋಜಾತಾ ಸುರಮುನಿಜನಪ್ರೀತಾ ಕರುಣಾ ಸಾಗರ ಗಣನಾಥಾ ಜಗವದನಾ ಚರಣಕೆ ಶರಣೆಂದು ಬಲಗೊಂಬೆ ಕೋಲೆ 1 ಸಕಲಾ ಮುಖದೊಳು ಯುಕುತಿಯ ನುಡಿಗಳಾ ಪ್ರಕಟದಿ ನುಡಿಸುವೆ ಜನನಿ ಸರಸ್ವತಿ ಭಕುತಿಲಿ ಶರಣೆಂಬೆ ಕಲ್ಯಾಣಿ 2 ಆಚ್ಯುತಾನಂತನೆ ಸಚ್ಚಿದಾನಂದನೆ ನೆಚ್ಚಿದ ಶರಣರ ಸುರಧೇನುವೆ ಅವಧೂತಾ ಎಚ್ಚರ ಕೊಟ್ಟು ಸಲಹಯ್ಯ 3 ಕರಿಯಾ ಮೊರೆಯ ಕೇಳಿ ಭರದಿಂದೊದಗಿ ಬಂದು ಕರದಿಂದಲೆತ್ತಿ ಸಲಹಿದೆ ಶ್ರೀಶಾ ಚರಣವದೋರಿ ಕಾಯಯ್ಯ 4 ಶರೀರ ಒಂದರಲಿದ್ದು ನರನಾರೀರೂಪದಲಿ ಚರಿತವ ದೋರದೆ ಅನುಪಮ ಶಂಕರ ಕರುಣಿಸು ಫಣಿಗಣ ಭೂಷಣಾ 5 ಅಂಜನೀಸುತನಾಗಿ ಕಂಜನಾಭವ ಸೇವೆ ರಂಜಿಸುವಂತೆ ಮಾಡಿದ ದೈತ್ಯರ ಭಂಜನ ಹನುಮಂತ ಕರುಣಿಸು6 ಚಾರು ಚರಿತಗಳ ತೋರಿದೆ ಜಗದೊಳು ಮುನಿರಾಯಾ ಸುಖತೀರ್ಥ ತಾರಕ ಶರಣರ ನಿಜಗುರು7 ಮೇದನಿಯೊಳಗುಳ್ಳ ಸಾಧು ಸಂತರ ನಿಜ ಅನುದಿನ ಜಗದೊಳು ಸಾದರದಿಂದ ನೆನೆಯುತ 8 ಶರಣವ ಹೊಕ್ಕರ ಕರುಣದಿಂದಲಿ ನೋಡಿ ತರುಣೋಪಾಯವ ತೋರುವಾ ಮಹಿಪತಿ ಗುರುರಾಯ ನಿನ್ನ ಬಲಗೊಂಬೆ9 ಕರುಣವಾಗಲು ಅವರ ಪರಮ ಮೂಕನಜ್ಜಿಹ್ವಾ ಸುರಸ ಮಾತುಗಳ ಆಡೋದು ಹುಸಿಯಲ್ಲ ಧರೆಯೊಳು ಅನುಭವವಿದು10 ಅವರಾಮಹಿಮೆಗಳ ವಿವರಿಸಿ ಹೇಳಲು ಹವಣವೆಲ್ಲಿಹುದು ಮನುಜಗ ಭಕುತರು ಅವನಿಲಿಬಲ್ಲರು ನಿಜಸುಖ 11 ಏನೆದು ಅರಿಯದಾ ಹೀನ ಅe್ಞÁನಿಯು ನ್ಯೂನಾರಿಸದೇ ಸಲಹಯ್ಯಾ ಮಹಿಪತಿ ದೀನೋದ್ಧಾರಕಾ ಕರುಣಿಸು 12 ಪದುಮನಾಭನ ಭಕ್ತಿ ಚದುರಾ ಮುತ್ತೈದೇರು ಒದಗಿನ್ನು ಬನ್ನಿ ಹರುಷದಿ ಮುಪ್ಪದಾ ಉದಿತಾ ನುಡಿಗಳ ಕೇಳಲು 13 ವಿವೇಕಬೋಧಿಯಂತ ನಾವಕ್ಕತಂಗೇರು ದೇವಗುರುರಾಯನ ಮಕ್ಕಳು ನಿಜಶಕ್ತಿ ಭುವನದಿ ನಮ್ಮಾ ಹಡೆದಳು 14 ಸುe್ಞÁನ ವೈರಾಗ್ಯ ಸಂಜ್ಞದಿ ಮೆರೆವರು ಪ್ರಾಜ್ಞರು ನಮ್ಮಣ್ಣಾ ತಮ್ಮರು ಹರಿಭಕ್ತಿ ಮಜ್ಞರು ಅವರಿಗೆ ಸರಿ ಇಲ್ಲಾ 15 ಭಕ್ತಿಯ ತೌರಮನಿ ಶಕ್ತಿಯ ಬಲದಿಂದ ಯುಕ್ತೀಲಿ ನಾವು ಬರುತೇವು ಹರಿಭಕ್ತಿ ಭೋಕ್ತರು ನೀವು ಬರಬೇಕು 16 ದಿವ್ಯಾಂಬರವನುಟ್ಟು ಸುವಿದ್ಯಾ ಇಡಗಿಯು ತೀವಿದರ ಅರಹು ಅಂಜನಾ ವನೆ ಇಟ್ಟು ಸುವಾಸನೆಯ ಪುಷ್ಪ ಮುಡಿದಿನ್ನು 17 ಈರೆರಡು ಭೇರಿಯ ಸಾರಿಸಿ ಎಡಬಲಕ ಆರು ವಂದಣಾ ನಡಸೂತ ಕಹಳೆಗಳು ಮೂರಾರು ಊದಿಸುತೆ ಬರುತೇವು 18 ಸಾಧನ ನಾಲ್ಕರ ಕುದುರೆಯ ಕುಣಿಸುತ ಒದಗಿದ ಪ್ರೇಮದ ಮದ್ದಾನಿ ಯೊಡಗೂಡಿ ಚದುರೇರು ಮುಯ್ಯ ತರುತೇವು 19 ಭಾವದ ಬಯಲಾಟ ಆವಾಗ ಆಡುತ ಸಾವಧ ಮುಯ್ಯಾ ತರುತೇವು ನುಡಿಗಳ ನೀವಾತ ಕೇಳಿ ಜನವೆಲ್ಲಾ 20 ಮೆರೆವಾಭಿಮಾನಿಯು ಇರುವ ಸೋದರ ಮಾವ ಅರಸಿ ವಿಷಯಯೆಂಬತ್ತೆರಯರ ಮನಿಗೀಗ ಭರದಿಂದ ಮುಯ್ಯ ತರುತೇವು 21 ರಾಯ ಅಭಿಮಾನಿ ಸಿರಿಯದ ಸಡಗರ ನಾ ಏನ ಹೇಳಲಿ ಜಗದೊಳು ಪಸರಿಸಿ ತಾ ಎಡ ಬಲವನು ನೋಡನು 22 ಏಳು ಸುತ್ತಿನ ಗೋಡಿ ಮೇಲಾದ ಮನಿಗಿನ್ನು ಸಾಲಾದ ಒಂಭತ್ತು ಬಾಗಿಲು ಚಲುವಾದ ಮ್ಯಾಲಿಹ ಒಂದೊಂದು ಗಿಳಿಗಳು 23 ಅಂಗಳ ಹೋಗಲಿಕ್ಕೆ ಕಂಗಳ ಲೇಸಕಂಡೆ ಮಂಗಳವಾದ ಉಪ್ಪರಿಗೆ ಥರಥರ ರಂಗ ಮಂಟಪ ನಡುವಂದು24 ಬಿಡದೆಂಟು ಕಂಬದಿ ಸಡಗರ ರಚಿಸಿದ ಒಡನಿಹ ಚಾವಡಿರಾಯನ ಸೌಖ್ಯಕ ಪೊಡವಿಲಿ ಸರಿಯಾ ಕಾಣೆನು 25 ಎಂಟು ದಿಕ್ಕಿಗೆ ನೋಡೀ ಘಂಡೆಯ ಕಟ್ಟಿದ ಎಂಟು ಆನೆಯಾ ಘಡಘಾಡಿ ತಲಿಯಲಿ ಉಂಟಾದ ಗುರುತರದ ಅಂಕೂಶಾ 26 ಬಿಡದೆಂಟು ಕಂಬದಿ ಸಡಗರ ರಚಿಸಿದ ಒಡನಿಹ ಆನೆಯಾ ಘಡಘೂಢೀ ಥಳೀಐಳೀ ಊಂಠಾಧ ಘೂಋಊಥೃಧ ಆಂಖೂಶಾ 26 ಐದೈದು ಸಾಲಕ ಐದೈದು ಕುದುರೆಯು ಐದೈದು ಭಂಟರು ಅದಕಿನ್ನು ಅನುದಿನ ಮೈದಡುವುತಾ ಏರುವರು27 ಹತ್ತು ಮಂದಿಯಾ ಆಪ್ತರು ಮನರಾಯಾ ಒತ್ತಿ ಆಳುವ ಪ್ರಧಾನಿ 28 ಅನುವಾದ ಗುಣತ್ರಯಾ ಅನುಜರು ಈತಗೆ ಅನುಭವಿ ಒಬ್ಬ ಇದರೊಳು ಹರಿನಾಮಾ ನೆನೆವನು ಅನ್ಯ ಹಂಬಲವಿಲ್ಲಾ 29 ನಾಕಾವಸ್ಥೆಗಳೆಂಬಾ ನಾಕು ಒಳ ಮನೆಗಳು ಇಕ್ಕಿಹದೊಂದು ಅದರೊಳು ಭಂಡಾರ ಬೇಕಾದವರೆ ತೆರೆವರು 30 ಈರಾಯ ನೈಶ್ವರ್ಯ ಆರು ಬಣ್ಣಿಸುವರು ಆರೊಂದು ಮಂದಿ ಮಕ್ಕಳು ಹೆಸರಾದ ಪರಿಯಾಯ ಕೇಳಿ ಹೇಳುವೆ 31 ಮೊದಲು ಕಾಮ ಕ್ರೋಧವೊದಗಿ ಲೋಭಮೋಹ ಮದಮತ್ಸರೆಂಬ ಬಾಂಧವರು ನಿಜ ತಂಗಿ ವಿದಿತ ಅe್ಞÁನಿ ಶಕ್ತಿಯು 32 ಬಂದು ಹೊರಗನಿಂತು ಒಂದು ಜಾವಾಯಿತು ಮುಂದಕ ನಮ್ಮ ಕರಿಯಾರು ನಾವರಸಿ ಕಂದಿದ ಮಾರೀ ತೋರಳು 33 ಪಶ್ಚಾತಾಪವೆಂಬ ಬಿಚ್ಚಿ ಹಾಸಿಗೆ ಹಾಸಿ ತುಚ್ಚರ ದೂರ ಝಾಡಿಸೀ ಬರುತೇವು ಎಚ್ಚರ ಲೋಡಾ ತಂದಿರಿಸಿ 34 ಈ ಕಲ್ಲ ಮ್ಯಾಲದ್ದು ಈ ಕಲ್ಲಿಗ್ಹಾರುವಾ ತಾ ಕೋಡಗನಾ ಗುಣದಂತೆ ಭಾವಯ್ಯ ಆ ಕಾಮಣ್ಣನ ಕರಿಯಾರೆ35 ಎಷ್ಟು ಉಂಡರ ದಣಿಯಾ ಎಷ್ಟು ಇಟ್ಟರ ದಣಿಯಾ ಎಷ್ಟು ಉಟ್ಟರ ದಣಿಯಾನು ಕಾಮಣ್ಣ ಎಷ್ಟು ಕೊಟ್ಟರ ದಣಿಯಾ 36 ಒಳ್ಳೆವರರಿಯನು ಹೊಲ್ಲವರರಿಯನು ಕೊಳ್ಳಿಕಾರನಾ ಮತಿಯಂತೆ ಭಾವಯ್ಯ ನಿಲ್ಲರು ಈತನ ಇದರೀಗೆ 37 ಈತನ ತಮ್ಮನು ಮಾತು ಮಾತಿಗೆ ಬಹಳಾ ಖ್ಯಾತಿಯ ತಾನು ಪಡೆದಾನು ಕೋಪಣ್ಣ ಆತನ ಮುಂದಕ ಕರಿಯಾರೆ 38 ನೆಂಟರ ಅರಿಯನು ಇಷ್ಟರ ಅರಿಯನು ಬಂಟರಾ ಮೊದಲೇ ಅರಿಯನು ತಪಸಿಗೆ ಕಂಟರನಾದಾ ಈತನೇ 39 ಥರ ಥರ ಕುಣಿವುತ ಘರ ಘರ ಹಲ್ಲು ತಿಂದು ನೆರೆಮೋರೆ ಕೆಂಪು ಮಾಡುವಾ ಕೋಪಣ್ಣಾ ಸ್ಮರಣೆಯಾ ತನ್ನ ಮರೆವನು 40 ಕಂಡವರಿಗೆ ತಾನು ಕೆಂಡದ ನುಡಿಯಾಡಿ ಖಂಡಿಸಿ ಬಿಡುವಾ ಗೆಳತನಾ ಕೋಪಣ್ಣ ಹಿಂಡುವ ಹಿಡಿದು ಪ್ರಾಣವ41 ತಾನಾರೆ ಉಣ್ಣನು ಜನರಿಗೆ ಇಕ್ಕನು ಜೇನಿನನೊಣದಾ ಗುಣದಂತೆ ಲೋಭೇಶಾ ದೀನನ ಮುಂದಕ ಕರಿಯಾರೆ42 ಬಿಚ್ಚಾರುವಿಯನು ವೆಚ್ಚಮಾಡೆಂದಿಗೆ ಬಚ್ಚಿಟ್ಟು ಹೂಳಿನೆಲದೊಳು ಲೋಭೇಶಾ ಹುಚ್ಚಾಗಿ ಕಾಯ್ದಾ ಫಣಿಯಂತೆ43 ಕಾಸು ಹೋದಾವೆಂದು ಅಸುವ ಹೋಗುವವರಿ ಕಾಸಾವೀಸಿಯಾ ಬಡವನು ಲೋಭೇಶಾ ಹೇಸನು ಎಂದು ಮತಿಗೇಡಿ 44 ಇಳೆಯೊಳೀ ಪರಿಯಲೀ ಗಳಿಸಿದ ಧನವನು ಕಳೆದುಕೊಂಬರು ಅರಸರು ಕಡಿಯಲಿ ಶೆಳೆದು ಕೊಂಡನು ಪುಗಸಾಟೆ 45 ಇವರಿಂದ ಕಿರಿಯನಾ ಹವಣವ ನೋಡೀರೆ ಅವಗುಣದ ರಾಶಿ ಜಗದೊಳು ಮೋಹಾಂಗಾ ಅವನಾ ಮುಂದಕ ಕರಿಯಾರೇ 46 ತಾಯಿ ತಂದೆಗಳ ನ್ಯಾಯನೀತಿಗಳಿಂದ ಸಾಯಾಸದಿಂದ ಭಕ್ತಿಯ ಮಾಡದೆ ಮಾಯದಾ ಬಲಿಗೊಳಗಾದಾ 47 ಏನು ಬೇಡಿದುದೆಲ್ಲಾ ಪ್ರಾಣವವೆಚ್ಚಿಸಿ ಮಾನಿನೀಯರಿಗೆ ಕುಡುವನು ಮೋಹಾಂಗಾ ಮನವಿಡ ಒಳ್ಳೆವರ ಸೇವೆಗೆ 48 ಲೆಕ್ಕ ವ್ಯವಹಾರವಾ ಲೆಕ್ಕದಿ ಮಾಡದೇ ಮಕ್ಕಳಾಟಕಿಯ ಮಾಡುವಾ ಕ್ರೀಡೆಯಾ ನಕ್ಕಾರೆಂಬ ಸ್ಮರಣಿಲ್ಲಾ 49 ಕಮಲದ ವಾಸನೆಗೆ ಭ್ರಮರವು ಸಿಕ್ಕಿದ ಕ್ರಮದಿಂದ ನೋಡಿ ಸೆರೆಯಾದಾ ಶ್ರೀವಧು ರಮಣನ ನಾಮಾ ನೆನಿಯನು 50 ತರುವಾಯದವನೀತಾ ದುರುಳನ ನೋಡಿರೆ ಮರಳು ಬುದ್ಧಿಯಾ ಮದರಾಯಾ ಆತನಾ ಸರಕು ಮಾಡುವಾ ಕರಿಯಾರೆ 51 ಹೊರಸು ತೊಯ್ಯದಂತೆ ಭರ್ರನೆ ಬಿಗಿವನು ಶರಣರ ಕಂಡು ಬಾಗನು ತಲೆಯನು ಅರಿತವರಿಗೇನಾ ಹೇಳಲಿ 52 ಬಗೆಯಾದೆ ಹಿತವನು ಪಗಡಿಪಂಚಿಗಳಾಡಿ ಹಗಲಿನಾ ಹೊತ್ತುಗಳೆವನು ರಾತ್ರೀಲಿ ಮುಗುಧೇಯರೊಡನೆ ಒಡನಾಟಾ 53 ಕಣ್ಣಿಲ್ಲದಾನೆಯು ಚನ್ನಾಗಿ ತಿರುಗುತ ಮುನ್ನ ಬತ್ತಿದಾ ಬಾವಿಯ ಬೀಳ್ವಂತೆ ಕಣ್ಣೆದ್ದು ಕುರುಡನಾದನು&
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆನಂದವಾಯಿತು ಬ್ರಹ್ಮ ಆನಂದವಾಯಿತುಆನಂದದೊಳು ಆನಂದವೇ ಆಗಿಸ್ವಾನಂದ ಸುಖ ಶರೀರ ವ್ಯಾಪಿಸೆ ಪ ಬಂಧತ್ರಯಾಭ್ಯಾಸದ ಬಂಧವ ಪಿಡಿಯುತನಿಂದು ನಾಸಿಕಗೊನೆ ನಿಟಿಲವ ನೋಡುತಛಂದ ಛಂದದ ಪುಷ್ಟ ಚದುರಲಿ ಕಾಣುತಸುಂದರನಾದ ಕೇಳಿ ಸುಖಿಸುವರ ಕಂಡು 1 ಎಡಬಲ ಹಾದಿಯ ಎಡಬಲಕಿಕ್ಕುತನಡುವಿನ ಮಾರ್ಗವ ನೇರದಿ ಪೊಕ್ಕುನಡೆದು ಸುಷುಮ್ನದ ನಾಳನೆಲೆಯ ನೋಡಿಕುಡಿದಮೃತವ ಸೊಕ್ಕಿ ಕುಳಿತಿಹರ ಕಂಡು 2 ಕುಂಡಲಿ ನಿದ್ರೆಯ ತಿಳಿಪುತಮುದ್ರಿಸಿ ನವಬಾಗಿಲನೆಲ್ಲವ ಮುಚ್ಚುತಭದ್ರ ಮಂಟಪದೊಳು ಭಾಸದಿ ಬೆಳಗಿ ಸ-ಮುದ್ರ ಗುರು ಚಿದಾನಂದ ಬೆರೆದವರ ಕಂಡು3
--------------
ಚಿದಾನಂದ ಅವಧೂತರು
ಇಕ್ಕೊ ಇಲ್ಲೆವೆ ಅದ ನಿಜಧನಾ ತಕ್ಕೊಂಬುದು ಬಲುಕಠಿಣ ಧ್ರುವ ಅದಕೊಂದದ ಉಪಾಯ ನೋಡಿ ಸದ್ಗುರುಪಾದಕ ಮನಗೂಡಿ ಒದಗಿ ಬಾಹುದು ತಾಂ ಕೈಗೂಡಿ ಇದೇ ಸಾಧಿಸಿ ಸುಖ ಸೂರ್ಯಾಡಿ 1 ಎಡಬಲಕ ತಾಂ ತುಂಬೇದ ದೃಢಮನಕ ತಾಂ ಸಿದ್ಧದ ಮೂಢಜನರಿಗಿದೇ ದೂರದ ನೋಡೇನೆಂದರ ಬಲು ಸಾರ್ಯದ 2 ಗುರುಪಾದಲ್ಯದ ಧನಸಮಸ್ತ ಅರಿತುಕೊಂಬುದು ಮನಮಾಡಿ ಸ್ವಸ್ಥ ತರಳಮಹಿಪತಿಗಿದೆ ಸುಪ್ರಸ್ತ ಗುರುನಾಥನೆ ತಾಂ ಸುವಸ್ತಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇವನಾರೆ ಮನಸೂರೆಗೈದೋಡುವಾ ನವನೀತ ಮೆಲುವಾತ ಪರಿದೋಡುವಾ ಪ ಸವಿನೋಟ ರಸದೂಟವನೆ ಬೀರುವ ಸುವಿಲಾಸ ಪರಿಹಾಸಗಳ ತೋರುವ ಅ.ಪ ಓರೆನೋಟವ ತೋರುತ ನಲಿವ ಕ್ಷೀರವ ಕುಡಿವ ಬೆರಳಲಿ ಕರೆವ ಕೊರಳಿನ ಹಾರವ ಎಡಬಲಕೆಳೆವ ಕೊರಳನು ಕೊಂಕಿಸಿ ಪರಿಪರಿ ಕುಣಿವ 1 ನೀರಜನೇತ್ರನು ನೀರದ ಗಾತ್ರನು ನಾರಿಯತನುವನು ಬರಸೆಳೆಯುವನು ಚೋರನು ಭವಭಯಹಾರನು ಧೀರನು ಶ್ರೀರಮೆಯರಸನು ಮಾಂಗಿರಿವರನು 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಉಂಬುವ ಬನ್ನಿರೋ ಅನಂದದೂಟವ ಹಂಬಲಿಸಿ ಸವಿದು ತುತ್ತು ಕೊಂಬ ಬನ್ನಿರೋ ಧ್ರುವ ಬಡಿಸಿಹಿದು ನೋಡಿ ಅನೇಕ ಪರಿಯಲಿ ಎಡಬಲಕೆ ನೋಡಲಾಗದಾನಂದ ಘನಲೀಲೆ 1 ಇಡಿದು ತುಂಬಿದೇ ನಿಧಾನದೂಟವು ನೋಡಲಿಕ್ಕೆ ತೃಪ್ತಿಗೈಸುತಿಹುದು ನೋಟವು 2 ಬೇಡಿಸಿಕೊಳ್ಳದೆ ಬಡಸುತಿಹ್ಯನು ಮೂಢ ಮಹಿಪತಿ ಒಡೆಯ ಭಾನುಕೋಟಿತೇಜನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಎಲ್ಲಿಗ್ಹೋಗಿ ತಡಮಾಡಿದ್ಯೋ ಫುಲ್ಲಲೋಚನ ಕೃಷ್ಣ ನೀ ಎಲ್ಲಡಗಿದ್ಯೊ ಧ್ರುವ ಬಲ್ಲವರಿಗೆ ಬಲ್ಲತನದೋರ ಹೋಗಿದ್ಯೊ ಅಲ್ಲಿ ಅವರ ಸಹಕಾರ ನೀನಾದ್ಯೊ ಸುಲ್ಲಭವಾಗಿ e್ಞÁನಕೆ ನೀ ಸಿಲುಕಿದ್ಯೋ ಒಲ್ಲದ್ಹಾಂಗ್ಹೋಗಿ ಎಲ್ಲರಿಗಾಗಿದ್ಯೊ 1 ಙÁ್ಞನಿಗಳಿಗೆ ಙÁ್ಞನಸಮುದ್ರ ನಾಗಿದ್ಯೊ ಧ್ಯಾನಮಾಡುವರ ಧ್ಯಾನವೆ ಅಗಿದ್ಯೊ ಮುನಿಜನರೊಡನೆ ಮಾನಸ ಹಂಸನಾಗಿದ್ಯೊ ಖೂನದೋರಲು ಹೋಗಿ ನೀನೆ ಆಗಿದ್ಯೊ 2 ಧೃಢಭಕ್ತರೊಡನೆ ಭಿಡಿಯೊಳಗಾಗಿದ್ಯೊ ಕಡಿಗಾಗದ್ಹಾಂಗ ಕೈಯೊಳಗಾಗಿದ್ಯೊ ಎಡಬಲಕವರೆಂದು ಬಿಡದ್ಹಾಂಗಾಗಿದ್ಯೊ ಒಡಲ ಹೊಕ್ಕವರ ಒಡಿಯನಾಗಿದ್ಯೊ 3 ಪ್ರೇಮ ಉಳ್ಳವರ ಪ್ರೀತಿಯೊಳಗಾಗಿದ್ಯೊ ಸ್ವಾಮಿತನದಲಿ ಸಮೀಪನಾಗಿದ್ಯೊ ಕಾಮ ಪೂರಿಸಲಿಕೆ ನೇಮವ ಪಿಡಿದ್ಯೊ ಮಾಮನೋಹರ ನೀ ಸುಗಮವಾಗಿದ್ಯೊ 4 ಇಂದು ನೆನಪಾಯಿತೆಂದು ಓಡಿ ನೀ ಬಂದ್ಯೊ ಚಂಚವಾಗೆನ್ನೊಳಗಾದ್ಯೊ ನೀ ಬಂದ್ಯೊ ಕಂದಮಹಿಪತಿಗನುಭವದೋರ ನೀ ಬಂದ್ಯೊ ತಂದೆ ಸದ್ಗುರು ಅನಂದವ ತಂದ್ಯೊ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಂಗಿ ಕೇಳೆ ಅತಿಕೌತುಕ ಒಂದು ಸುದ್ಧಿಯ ಸಿಂಗನ ಮೋರೆ ಮಗುವು ಪುಟ್ಟಿ ಮಾಡಿದಾ ಚರ್ಯ ಪ. ತಂದೆ ತಾಯಿಗಳಿಲ್ಲಾದ್ಹಾಂಗೆ ಕಂದ ಪುಟ್ಟಿತು ಬಂಧು ಎತ್ತು ಕೊಂಬೇನೆಂದರೆ ಗುಡು ಗುಡುಗುಟ್ಟಿತೂ ಅಂದ ಛಂದವ ನೋಡೇನೆಂದರೆ ಘೊರಾಕೃತಿಯಾಯ್ತು ತಂದ ತೊಟ್ಟಿಲೊಳಿಟ್ಟೀನೆಂದರೆ ಹೊಸಲೊಳ್ ಕೂತೀತು 1 ತೊಡೆಯಲ್ಲಿಟ್ಟು ತಟ್ಟೀನೆಂದರೆ ಕಿಡಿ ಕಿಡಿ ಉಗುಳೀತು ಕಡುಪಾಪಿ ರಕ್ಕಸನ ತನ್ನ ತೊಡೆಯಲ್ಲಿಟ್ಟಿತೂ ಕಡು ಕೋಪದಿಂದಾಲಿ ಅವನ ಒಡಲ ಬಗೆದಿತು. ಎಡಬಲಕೊಬ್ಬರು ಬರದಂತೆ ಆರ್ಭಟಿಸುತಲಿದ್ದಿತು 2 ರುಧಿರ ಪಾನವ ಮಾಡಿತು ಮಾಲೆ ಹಾಕಿ ಮುದ್ದಿಪನೆನೆ ಕರುಳ್ಮಾಲೆ ಹಾಕೀತು ಮೇಲೆ ಕೇಶ ಕಟ್ಟೀನೆಂದರೆ ಕೆದರಿಕೊಂಡೀತೂ ಬಾಲಲೀಲೆ ನೋಡೇನೆಂದರೆ ಜಗವ ಬೆದರಿಸಿತು 3 ಸಿರಿಕಂಡೂ ಬೆರಗಾಗೆ ಮನವು ಕರಗದೆ ಕಲ್ಲಾಯ್ತು ತರಳನೊಬ್ಬನ ಕೂಡೆ ತಾನೂ ಆಟವನಾಡಿತು ಉರಿಮುಖ ಹುಬ್ಬೂ ಗಂಟೂ ಬಿಟ್ಟು ಕಿರುನಗೆ ನಕ್ಕೀತು 4 ಶ್ರೀಪತಿ ಎಂದು ತರಳನು ಪೊಗಳೇ ಸಿರಿಯ ಬೆರತೀತು ಆಪತ್ತನು ಪರಿಹರಿಪ ಲಕ್ಷ್ಮೀನರಹರಿ ಎನಿಸೀತು ದ್ವಾಪರದಲ್ಲಿ ಮತ್ತೆ ಪುಟ್ಟಿ ಮುದುವ ಬೇಡೀತು ಗೋಪಾಲಕೃಷ್ಣವಿಠ್ಠಲನೆನಿಸಿ ಗೋಪಿಯ ಮಗುವಾಯ್ತು 5
--------------
ಅಂಬಾಬಾಯಿ
ಥಳ ಗುಟ್ಟೊಳುತೊಬ್ಬಳೆವಾಗೆದ ತಾ ವಳಗುಟ್ಟಲೆ ದಟ್ಟದ ಬೆಳಗು ತಾಂ ತಿಳಿಗೊಟ್ಟರೆ ಸದ್ಗುರು ಭಾಸುದು ತಾ ಕಳೆಮುಟ್ಟಿದು ನೋಡಲು ಶಾಶ್ವತ 1 ಅರಿಯೊ ಸುರಿಯೊ ಪರಮಾಮೃತ ಬೆರಿಯೊ ಗುರುವೆಂದು ನೀ ಸುಗುರುತಾ ಜರಿಯೊ ಮರಿಯೊ ಮದಗರ್ವನೆ ತಾ ನೆರಿಯೊ ಗುರುಪಾದಕೆ ನೀ ತ್ವರಿತ 2 ತಿಳಿ ಸರ್ಕನೆ ನಿನ್ನೊಳು ಬ್ಯಾಗ ತಾ ಅಳಿ ತರ್ಕದ ಮಾತಿನ ಗರ್ವನೆ ತಾ ತೊಳಿ ನರ್ಕಕೆ ಬೀಳುವ ತಾಮಸ ತಾ ಸುಳಿ ಗರ್ಕನೆ ಸದ್ಗುರು ಪಾದÀದಿ ತಾ 3 ಬಿಡು ಮರ್ಕಟ ಬುದ್ಧಿಯ ಭಾವನೆ ತಾ ಕೂಡು ಸರ್ಕನೆ ಸುಮ್ಮನೆ ಗುರುವಿಗೆ ತಾ ಸುಡು ನರ್ಕಕೆ ಬೀಳುವ ಪಾಶÀವ ತಾ ತೊಡು ಮರ್ಕಟವಾದ ಸದ್ಗುಣ ತಾ 4 ಹಿಡಿಯೊ ಪಡಿಯೊ ದೃಢಭಾವನೆ ತಾ ಜಡಿಯೊ ಒಡನೆ ಗುರುಪಾದನಿ ತಾ ಕಡಿಯೊ ಬಿಡದೆ ಭವಬಂಧನ ತಾ ಅಮೃತ 5 ನಡಿಯೊ ನುಡಿದಂತೆನೆ ಸನ್ನಮತ ಹಿಡಿಯೊ ಪಡೆದಂತೆನೆ ಪಾದವ ತಾ ಇಡದಂತೆನೆ ತುಂಬೆದ ಸದ್ಘನ ತಾ ಕಡೆಗಾಂಬುದು ನೋಡಿದು ಶಾಶ್ವತಾ 6 ತಿಳಿಯೊ ಬಳಿಯೊ ಒಳಗುಟ್ಟನೆ ತಾ ಹೊಳಿಯೊ ಸುಳಿಯೊ ನೆಲಿಗೊಂಡಿದು ತಾ ಕಳಿಯೊ ಅಳಿಯೊ ಅನುಮಾನವ ತಾ ಕಳೆಕಾಂತಿಯ ನಿನ್ನೊಳು ತುಂಬ್ಯದ ತಾ 7 ಒಳಗುಟ್ಟನೆ ಸಾಧಿಸಿ ನೋಡುವು ದೆಲ್ಲಾ ಥಳಗುಟ್ಟುದು ಸಾಸಿರ ಪದ್ಮ ದಳ ನೆಲೆಗೊಂಡರೆ ವಾಗುವ ತಾ ಸಫಲಾ ತಿಳಕೊಂಬುದು ಸದ್ಗುರು ಸ್ವಾಮಿ ಬಲ 8 ಬಿಡಬಾರದು ಸಂಗತಿ ಸಜ್ಜನರ ಹಿಡಿಬೇಕಿದು ಒಂದೇ ನೋಡಿ ಸ್ಥರ ಅಡಿ ಇಟ್ಟನೆ ಬಾಹುದು ಪುಣ್ಣಿದರಾ ಪಡಕೊಂಡರೆ ಅಹುದು ಇಹಪರ 9 ತಡಮಾಡದೆ ನೋಡುವುದೀ ಸುಪಥ ಪಡಿಬೇಕಿದು ಒಂದೇ ಸುಸ್ವಹಿತ ಒಡಗೂಡದೆ ಬಾರದು ಕೈಗೂಡಿ ತಾ ಎಡಬಲಕೆ ತುಂಬಿದೆ ತುಳುಕುತ 10 ಜಾಗರ ತಾ ಎಡಿಎಡಿಗೆ ಸಂದಿಸಿ ತುಂಬಿದೆ ತಾ ಬಡಿಸಿಟ್ಟೆದ ಭಾಗ್ಯದ ನಿಧಿಯು ತಾ ಪಡಕೊಳ್ಳೆಲೊ ಮಹಿಪತಿ ಪೂರ್ಣಹಿತ11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಾಬಾ ಭಾಮಿನಿ ಬಾಬಾ ಭಾಮಾಮಣಿ ಪೀಠಕೆ ಪ. ರತ್ನ ಮಂಟಪದೊಳು ಮುತ್ತಿನಮಣೆನ್ಹಾಕಿ ಮಿತ್ರೆಯರ್ ಕರೆವರು ಈಗ ಎತ್ತ ನೋಡಿದರೂ ಸುತ್ತ ಜ್ಯೋತಿಗಳು ಶಿಸ್ತಿಲಿ ಬೆಳಗುತಿಹುದು 1 ವÀರ ಜರತಾರಿ ಪೀತಾಂಬರನುಟ್ಟು ಸರಗಳು ಹೊಳೆಯುತಲೀಗ ಬೆರಳಿನುಂಗುರ ಥಳಥಳಿಸುತಲಿ ಬೆಡಗನು ತೋರುತಲಿ 2 ಕಡಗ ಕಿಂಕಿಣಿ ಕರದಲಿ ಪೊಳೆಯೆ ಅಡಿ ಇಡುತಲಿ ನೀ ಬೇಗ ಮುಡಿದ ಮಲ್ಲಿಗೆ ಎಡಬಲಕುದುರುತ ಒಡೆಯ ಶ್ರೀ ಶ್ರೀನಿವಾಸನ ಮಡದಿ 3
--------------
ಸರಸ್ವತಿ ಬಾಯಿ
ಶ್ರೀರಂಗ ಯಾತ್ರೆಯನು ಮಾಡಿಬಾರೆಂದೆನ್ನ ಈ ರೀತಿಯನುವ ಮಾಡಿದೆಯ ಸ್ವಾಮಿ ಪ ಕಾರುಣ್ಯನಿಧಿಯೆ ವೇಲಾಪುರಾಧೀಶ್ವರನೆ ಆರುಣ್ಯದೊಳು ಕೆಡಹಿದೆಯ ಸ್ವಾಮಿ ಅ.ಪ ದಾರಿಯನು ತೋರಲೈತಂದ ಶ್ರೀವೈಷ್ಣವನು ಸೇರಿಸಿದ ನೀಯಡವಿಯಸ್ವಾಮಿ ಕಾರುಗತ್ತಲೆ ಸುರಿವ ಮಳೆಯ ಸಿಡಿಲಿನ್ನೆಲ್ಲಿ ಸೇರುವೆನು ಈ ಗಿರಿಯೊಳೂ ಸ್ವಾಮಿ 1 ನಾರಿ ಮಕ್ಕಳು ಭೃತ್ಯರೆಲ್ಲಿ ಪೋದರೋ ಯೇನು ಕಾರಣಬಂದೆನಯ್ಯ ಸ್ವಾಮಿ ಭೂರಮಣ ತ್ರಿಭುವನಾಧಾರ ನೀ ನಲ್ಲದಿ ನ್ನಾರು ಕಾವರೆನ್ನನು ಸ್ವಾಮಿ 2 ಘುಡಿಘುಡಿಸುತಲಿವೆ ಪುಲಿ ಕರಡಿ ಸುತ್ತಲು ಭೋ ರಿಡುತಲಿವೆ ಭಕ್ಷಿಸುವಡೇ ಸ್ವಾಮಿ ಬಿಡದೆ ಕರಿಗಳು ಕೂಗಿ ಕಂಗೆಡಿಸುತಲಿವೆ ಇದೇ ಕಡೆಗಾಲವಾಯಿತೆಲ್ಲೋ ಸ್ವಾಮಿ 3 ನಡೆವರೆಡೆಗಾಣೆ ಇಲ್ಲಿರುವುದಾಗ ದಾಗದು ಕಷ್ಟ ಬಡುವುದಕೆ ಗುರಿಯಾದೆನೇ ಸ್ವಾಮಿ ಎಡಬಲಕ್ಕೊಲೆಯೆ ಕಪ್ಪು ಕಲ್ಲು ಮುಳ್ಳುಗಳಿದೆಕೋ ಒಡೆಯ ಕೈವಿಡದೆ ಸಲಹು ಸಲಹೋ ಸ್ವಾಮಿ 4 ಒಂದೆಸಗಲೇಳಡಸಿತೆಂದು ಪೇಳುವ ನುಡಿಗೆ ಸಂದು ಬಸವಳಿದೆನೆಲೋ ಸ್ವಾಮಿ ಇಂದು ಸಂಧ್ಯಾ ಗಾಯತ್ರಿ ಕರ್ಮವುಳಿದುದರ ವಿಂದಾಕ್ಷ ಸುಮ್ಮನಿಹರೇ ಸ್ವಾಮೀ 5 ಎಂದೆಂದು ಮಾತನಾಡುವನಾಥರಕ್ಷಕನೆ ಬಂದುದೀಗೇನು ಸಿರಿಯು ನಿನಗೇ ಬಂಧನವ ಬಿಡಿಸು ದುರ್ಮರಣದಲಿ ಕೊಲ್ಲದಿರು ತಂದೆ ವೈಕುಂಠ ರಮಣಾ ಸ್ವಾಮೀ 6
--------------
ಬೇಲೂರು ವೈಕುಂಠದಾಸರು
ಏಳಿ ಮೊಸರ ಕಡೆಯಿರೇಳಿ-ಗೋ-|ಪಾಲ ಚೂಡಾಮಣಿ ಏಳದ ಮುನ್ನ ಪಇಂದುಮುಖಿಯರೆದ್ದು ಮುಖವನೆ ತೊಳೆದು ಶ್ರೀ-|ಗಂಧ-ಕಸ್ತೂರಿ-ಕುಂಕುಮಗಳಿಟ್ಟು ||ಚಂದ್ರಗಾವಿಯ ಸೀರೆಯ ನೀರಿವಿಟ್ಟು ಮು-|ಕುಂದನ ಪಾಡುತ ಚದುರೆಯರೆಲ್ಲ 1ಹೊಂಗೊಡ ಬೆಳಗಿಟ್ಟು ಪೊಸಮೊಸರನೆತುಂಬಿ|ರಂಗನೀಲದ ಕಡೆಗೋಲನಿಟ್ಟು ||ಶೃಂಗಾರವಾದ ರೇಶಿಮೆಯ ನೇಣನೆ ಹಿಡಿದು |ರಂಗನ ಪಾಡುತ ಚದುರೆಯರೆಲ್ಲ 2ಬಡನಡು ಬಳುಕುತ ಕುಚಗಳಲ್ಲಾಡುತ |ಕಡಗ-ಕಂಕಣ ಝಣಝಣರೆನ್ನುತ ||ಮುಡಿದ ಮಲ್ಲಿಗೆ ಹೂವು ಎಡಬಲಕುದುರೆ ಪಾ-|ಲ್ಗಡಲೊಡೆಯನ ಪಾಡುತ ಚದುರೆಯರು 3ಹುಸಿನಿದ್ದೆಯಲಿ ಶ್ರೀಕೃಷ್ಣನು ಮಲಗಿರೆ |ಹಸಿದು ಆಕಳಿಸಿ ಬಾಯಾರುತಲಿ ||ಮುಸುಕಿನೊಳಿದ್ದು ಬೆಣ್ಣೆಯ ಬೇಡುತಲಿರೆ |ಶಶಿವದನನಿಗೆ ಬೆಣ್ಣೆಯ ನೀಡಲೋಸುಗ 4ಏಣಾಂಕಮುಖಿಯರು ಹೊಸ ಬೆಣ್ಣೆಯನು ತೆಗೆದು |ಪ್ರಾಣಪದಕ ಕೃಷ್ಣನಿಗೆ ಕೊಡಲು ||ಚಾಣೂರ ಮಲ್ಲನ ಗೆಲಿದು ಬಾರೆನುತಲಿ ||ಜಾಣ ಪುರಂದರವಿಠಲನಪ್ಪಲುಗೋಪಿ5ದೃಷ್ಟಿಯು ತಾಗೀತೆಂದಿಟ್ಟು ಅಂಗಾರವ |ತಟ್ಟೆಯೊಳಾರತಿಗಳ ಬೆಳಗಿ ||ಥಟ್ಟನೆ ಉಪ್ಪು-ಬೇವುಗಳನಿವಾಳಿಸಿ|ತೊಟ್ಟಿಲೊಳಿಟ್ಟು ಮುದ್ದಾಡುವಳೊ 6ನಮ್ಮಪ್ಪ ರಂಗಯ್ಯ ಅಳಬೇಡವೊ ದೊಡ್ಡ |ಗುಮ್ಮ ಬಂದಿದೆ ಸುಮ್ಮನಿರು ಎನುತ ||ಅಮ್ಮಿಯನೀಯುತ ಅಮರರನಾಳ್ದನ |ರಮ್ಮಿಸಿ ರಮ್ಮಿಸಿ ಮುದ್ದಾಡುವಳೊ 7ಏಸೊ ಬೊಮ್ಮಾಂಡವ ರೋಮದೊಳಿರಿಸಿದ |ವಾಸುದೇವನನೆತ್ತಿ ಕೊಂಬುವಳೊ ||ನಾಶರಹಿತನಾಯುಷ್ಯ ಹೆಚ್ಚಲೆಂದು |ರಾಶಿದೈವಕೆ ತಾ ಬೇಡಿಕೊಂಬುವಳೊ 8ಮಾಧವಬಾ ಮದುಸೂದನ ಬಾ ಬ್ರ-|ಹ್ಮಾದಿವಂದಿತಹರಿಬಾ ಯೆನುತ ||ಆದಿ ಮೂರುತಿ ಶ್ರೀ ಪುರಂದರವಿಠಲನ |ಆದರದಲಿ ಮುದ್ದಾಡುವಳೊ 9
--------------
ಪುರಂದರದಾಸರು
ನಾರದ ಕೊರವಂಜಿ1ಜಯ ಜಯ ಜಯ ಜಯ ಜಯ ಜಯ ಪ.ಶ್ರೀ ರಮಾರಮಣ ಜಯ ಶ್ರೀಕರ ಗುಣಾಬ್ಧಿ ಜಯಶ್ರೀ ರುಕ್ಮಿಣೀಶ ಜಯ ಶ್ರೀ ಶ್ರೀನಿವಾಸ ಜಯನೀರಚರಕಮಠಕಿಟಿನೃಹರಿವಟುಭೃಗುಜ ರಘುವೀರ ಯದುಪತೆಬುದ್ಧಕಲ್ಕಿ ಸ್ವರೂಪಾ ಜಯ ಜಯ1ಶ್ರೀ ಮತ್ಕಪಿಲ ಋಷಭ ಯಜÕದತ್ತ ಕಂಸ್ತುಘ್ನ ?ಕೌಮಾರ ವ್ಯಾಸ ಹಯಗ್ರೀವ ಶ್ರೀಮದ್ದಜಿತ ಜಯಸ್ವಾಮಿ ಮಹಿದಾಸ ತಾಪಸ ಉರುಕ್ರಮಶೂಲಿವ್ಯಾಮೋಹ ಧನ್ವಂತರೆ ಹಂಸ ಶುಕ್ಲಾ ಜಯ ಜಯ 2ಆನಂದ ಜ್ಞಾನ ಬಲಮಯ ಚಿತ್‍ಸ್ವರೂಪ ಜಯಅನಂತ ಮಹಿಮ ವೈರಾಜ ಪುರುಷೋತ್ತಮ ಜಯಅನಂತ ಬ್ರಹ್ಮ ರುದ್ರೇಂದ್ರಾದಿಸೇವ್ಯಜಯಅನಂತ ಜೀವಗ ಪ್ರಸನ್ವೆಂಕಟ ಕೃಷ್ಣಾ ಜಯ ಜಯ 32ಶರಣು ಮಂಗಳ ದೇವತೇವರಶರಣುಚಿತ್ಸುಖಸಾಗರಶರಣುಅಗಣಿತಗುಣಶುಭಾಕರಶÀರಣು ವೆಂಕಟ ಮಂದಿರ 4ದುರುಳದೈತ್ಯರು ಸೊಕ್ಕಿ ವರದಲಿಧರೆಗೆ ಕಂಬನಿ ತರಿಸಲುತ್ವರದಿ ಸುರರಿಗೆ ಮೊರೆಯನಿಟ್ಟಳುಧರಿಸಲಾರೆನು ಎನುತಲಿ 5ಸರಸಿಜೋದ್ಭವಭವಪುರುಹೂತರರಿದು ಚಿಂತಿಸಿ ಮನದಲಿವರಪಯೋನಿಧಿಗೈದಿ ಸ್ತುತಿಸಲುಕರುಣದಲಿ ಅವತರಿಸಿದೆ 6ಬಂದು ಧರ್ಮದ ವೃಂದ ರಕ್ಷಿಪೆನೆಂದು ದೀಕ್ಷೆಯವಿಡಿದು ನೀಅಂದಗೆಡಿಸುತ ದನುಜನಿಕರವಹೊಂದಿ ದ್ವಾರಕ ನಗರವ 7ಇಂದಿರೆಯು ನಿನ್ನಿಚ್ಛೆಯನುಸರದಿಂದ ಕ್ರೀಡಿಪಳನುದಿನÀಮಂದಜನರಿಗೆ ಮೋಹಿಸುತನರರಂದದಲಿ ತೋರಿದೆ ಹರೆ 8ದೇವಋಷಿ ನಾರದನು ಶ್ರೀಪದಸೇವೆಗÉೂೀಸುಗ ಕೊರವಿಯಭಾವದಲಿ ಜಗದಂಬೆ ರುಕ್ಮಿಣಿದೇವಿಯಳ ಬಳಿಗೈದು ತಾ 9ದೇವ ನಿನ್ನಯ ಬರವ ಬೆಸಸಿದಕೋವಿದತೆಯನು ಪೇಳುವೆಶ್ರೀವರ ಪ್ರಸನ್ವೆಂಕಟ ಕೃಷ್ಣಪಾವನ ಮತಿಯ ಕರುಣಿಸೊ 103ಶ್ರೀ ರಂಭೆ ಭೀಷ್ಮಕನಭೂರಿಪುಣ್ಯದ ಗರ್ಭವಾರಿಧಿಯಲ್ಲಿ ಜನಿಸಿನಾರಿ ರುಕ್ಮಿಣಿಯೆಂಬ ಚಾರುನಾಮದಿಕಳೆಯೇರಿ ಬೆಳೆದಳಂದವ್ವೆ 11ಜನನಿಜನಕರೆಲ್ಲ ತನುಜೆಯ ಹರಿಯಂಘ್ರಿವನಜಕೆ ಕೊಡಬೇಕೆನ್ನೆನೆನೆದು ತಾನೊಂದು ರುಕ್ಮನು ದಮಘೋಷನತನುಜಗೆ ತಂಗಿಯನು 12ಕೈಗೂಡಿಸುವೆನೆಂಬ ವೈಭವದಲ್ಲಿರೆವೈಮನಸದೊಳು ಕನ್ಯೆಯುಸುಯ್ಗರಿಯುತ ಮುರವೈರಿ ಪ್ರಸನ್ವೆಂಕಟಕೃಷ್ಣಯ್ಯನೊಳ್ ಮನವಿಟ್ಟಿರೆ 134ದನುಜಮಥನÀ ಹರಿಸೇವೆ ಇದೆಂದುಅನಿಮಿಷಮುನಿ ಧರೆಗಿಳಿದು ತಾ ಬಂದುವನಿತೆ ಕೊರವಂಜಿಯ ವೇಷವÀ ಧರಿಸಿಜನಪ ಭೀಷ್ಮಕನೋಪವನದಲ್ಲಿ ನೆಲಸಿ 14ಹಲವು ಕೊರವಿಯರ ಕೂಡಿ ಸಿಂಗರದಿಬೆಲೆ ಇಲ್ಲದುಡಿಗೆ ತೊಡಿಗೆ ಇಟ್ಟು ಮುದದಿಇಳೆಯ ಜನರು ಮೋಹಿಸುವಪರಿಇಹಳುಕೆಳದೇರ ಗಡಣದಲಿ ಚೆಲುವೆ ಒಪ್ಪಿದಳು 15ಮಂಜುಗಾವಿಯ ಸೀರೆ ನಿರಿತೆಗೆದುಟ್ಟುಕೆಂಜೆಡೆ ಬಿಟ್ಟೋರೆದುರುಬಿನ ಕಟ್ಟುಪಂಜಿನೋಲೆಯ ಮೂಗುತಿಯ ಬಲಿದಿಟ್ಟು ಗುಲಗಂಜಿ ಹೊಂದಾಳೆ ಸರಗಳಳವಟ್ಟು 16ಕಂಚುಕಪುಟ ಬಿಗುಪೇರಿದ ಕಟ್ಟುಚಂಚಲನೇತ್ರಕಂಜನ ಕಾವಲಿಟ್ಟುಮಿಂಚುವಾಭರಣಿಟ್ಟು ಪ್ರಸನ್ವೆಂಕಟ ಕೃಷ್ಣನಂ ಚಿಂತಿಸಿ ಜಯ ಜಯಯೆಂದಳುಕೊರವಿ175ಅಡಿಗಡಿಗೆ ಝಣ ಝಣರೆಂದು ನಡೆತಂದು ನಡೆತಂದುಮಡದಿ ರಾಜಬೀದಿಯಲಿನಿಂದು18ಮೃಡಗಹಿತನ ಪಟ್ಟದಾನೆ ಮಂದಗಮನೆ ಮಂದಗಮನೆಕಡುಮೌನಿ ಜನರ ಮೋಹಿನೆ 19ಚಪಲ ನೋಟಕೆ ನಾಗರಿಕರು ನೋಟಕರು ನೋಟಕರುಲಿಪಿಯ ಚಿತ್ರದೊಲು ನಿಂತಿಹರು 20ನಿಪುಣೆಕೊರವಿಶ್ರೀಪ್ರಸನ್ವೆಂಕಟ ಕೃಷ್ಣನ್ನ ಕೃಷ್ಣನ್ನಶ್ರೀಪ್ರÀ್ರಸಾದವ ಬೇಡುತಿದ್ದಳಣ್ಣ 216ಬೆಡಗಿನ ಗಮನದಿ ಎಡಬಲಕೊಲಿದುಕಡಗ ಶಂಖದ ಬಳೆ ನುಡಿಸುತ ನಡೆದುಅಡಿಗೊಮ್ಮೆ ತಿರುಮಲ ಒಡೆಯನ ನೆನೆದು ತಕ್ಕಡ ಧಿಗಿಧಿಮಿಕೆಂದುಜಡಿದುತಾಳ್ವಿಡಿದು22ತಿಗುರಿದ ಗಂಧ ಸೆಳ್ಳುಗುರಿನ ನಾಮಮೃಗಮದದ ಬೊಟ್ಟಿನ ನಗೆಮೊಗದ ಪ್ರೇಮಮಗುವನುಡಿಯಲೆತ್ತಿ ಜಗಚ್ಚರಿಯಮ್ಮಹೆಗಲ ರನ್ನದ ಬುಟ್ಟಿ ಮುಳ್ಳುವಿಡಿದಮ್ಮ 23ನಗರದ ಜನದ ಕಣ್ಣಿಗೆ ಕೌತುಕೆನಿಸಿಬಗೆ ಬಗೆ ಒಗಟು ಮಾತುಗಳನುಚ್ಚರಿಸಿನಗರಾಧಿಪತಿಯ ಮನೆಯಕೇಳಿನಡೆದುಮಿಗೆ ಪ್ರಸನ್ವೆಂಕಟ ಕೃಷ್ಣಗೆ ಕೈಮುಗಿದು 247ಬ್ರಾಹ್ಮರ ಕೇರಿಗೆ ಬಂದಳಾಕೊರವಿಪರಬ್ರಹ್ಮನ ಗುರುತ ಕೇಳುತ್ತನಮ್ಮಮ್ಮ ನಮ್ಮವ್ವೆ ನಮ್ಮಜ್ಜಿ ನೀಡೆಂದುಸನ್ಮಾನದಾಲಯವ ಪೊಗುತಾ 25ಇಂತಪ್ಪ ಸೊಬಗುಳ್ಳ ಕೊರವಿಯನು ಕಂಡುನೃಪನಂತಃಪುರದ ಸತಿಯರೈದಿಕಂತುವಿನ ಜನನಿಗೆ ಕರವೆರಡು ಮುಗಿದು ಏಕಾಂತ ಪೇಳಿದರು ಚೆನ್ನಾಗಿ 26ಓರ್ವ ಕಾಲಜ್ಞಾನ ಪೇಳ್ವ ಕೊರವಮ್ಮ ನಮ್ಮೂರ್ವಳಗೆ ತಿರುಗುತಿಹಳಮ್ಮಸರ್ವೇಶ ಪ್ರಸನ್ವೆಂಕಟ ಕೃಷ್ಣನಾಗಮದನಿರ್ವಚನ ಕರೆಸಿ ಕೇಳಮ್ಮ 278ಬಂದಳು ನೃಪನರಮನೆಗೆ ತಾನಿಂದಲ್ಲಿ ನಿಲ್ಲದೆ ಕಿಲಿಕಿಲಿ ನಗುತಾ ಕುಲು ಕುಲು ನಗುತಾ ಪ.ಬಂದ್ಹೇಳಿದ ನುಡಿಗೇಳ್ದು ಪೂರ್ಣೇಂದುವದನೆ ಮುದತಾಳ್ದುಮಂದಿರಕೆ ಕರೆಸಿದಳು ನಲವಿಂದಲಿ ಬಲು ಬೆಡಗಿನ ಕೊರವಂಜಿ 28ತಳಪಿನ ಮುತ್ತಿನ ಕಟ್ಟುಶುಭತಿಲಕದ ಹಚ್ಚೆಯ ಬಟ್ಟುಅಲುಗುವ ಮೂಗುತಿಯಬಲೆ ಸಲೆಬಳುಕುತ ಬಡನಡುವಿನ ಚಪಲೆ 29ಬಟುಗಲ್ಲದ ಮಕರಿಕಾಪತ್ರ ಪವಳದುಟಿ ದಾಡಿಮರದಗೋತ್ರವಿಟಮೃಗಸ್ಮರಶರ ನೇತ್ರ ಕೊರಳ್ದಟಿಸುವಮಣಿಮುತ್ತಿನ್ಹಾರಗಳೊಲಪಲಿ30ಇಟ್ಟೆಡೆ ಮೊಲೆಯ ಪಟ್ಟಿಕೆಯು ಶ್ರೋಣಿಮುಟ್ಟುವ ಮುಡಿಯ ಮಾಲಿಕೆಯುಬಿಟ್ಟ ಮುಂಜೆರಗಮಲಿಕೆಯು ಕಣ್ಣಿಟ್ಟ ಮೃಗಕೆ ಭ್ರೂಸ್ಮರಕಾರ್ಮುಕೆಯು 31ತೆಳ್ವೋದರದ ತ್ರಿವಳಿಯ ಜಗುಳಿಬೀಳ್ವ ಮಣಿಮುಕ್ತಾವಳಿಯಸಲ್ಲಲಿತ ಸಂಪಿಗೆ ಕಳೆಯ ಗೆಲ್ವಚೆಲ್ವೆಕೊರವಿಪುರವೀಥಿಯ ಬಳಿಯ32ಕಿಣಿ ಕಿಣಿ ರವದ ಕಿಂಕಿಣಿಯುಝಣ ಝಣತ್ಕಾರಿಪಂದುಗೆ ಮಣಿಯುಕಣಿ ಕಣಿ ಒಯ್ಯೆಂಬೊಕ್ಕಣಿಯು ಕುಚಕುಣಿ ಕುಣಿಸಿ ನಟಿಪ ನಡೆವಾಂಗನೆಯು 33ಸಿಂಗನ ಉಡಿಯಲ್ಲಿಕಟ್ಟಿಉತ್ಸಂಗದೊಳೊಲಪಿನ ದಿಟ್ಟಿರಂಗ ಶ್ರೀ ಪ್ರಸನ್ವೆಂಕಟ ಕೃಷ್ಣಾಂಗನೆಯನು ಕಾಂಬುವೆನೆಂಬ ತವಕದಿ 349ವಚನಪದುಮನಾಭನ ರಾಣಿ ರಾಣಿವಾಸದಲಿಯದುಕುಲೇಂದ್ರನ ಚರಣೋಚ್ಚಾರಣೆಯಲ್ಲಿರಲುಒದಗಿ ಬಂದಳುಕೊರವಿಕರೆಯುತ್ತ ತಾನುಚದುರ ಪ್ರಸನ್ವೆಂಕಟ ಕೃಷ್ಣನರಸಿಯನು 3510ಎಲ್ಲಿಹಳೆಲ್ಲ್ಲಿಹಳಾ ರಾಯನ ಮಗಳೆಲ್ಲಿಹಳೆ ನೀಡೆಯವ್ವನಲ್ಲೆ ಬಾ ನಲ್ಲೆ ಬಾ ನಲ್ಲೆ ಬಾ ರುಕ್ಮಿಣಿನಲ್ಲೆ ಬಾರೆ ಮುಂದಕವ್ವ 36ಬಲ್ಲೆ ನಾ ಬಲ್ಲೆ ನಿನ್ನಯ ಮನದೆಣಿಕೆಯಸೊಲ್ಲುವೆನೆ ನೀಡೆಯವ್ವನಿಲ್ಲದು ನಿಲ್ಲದಕ್ಕಿಯು ನಿನ್ನದ್ಹಸಿತ ಕೈಒಳ್ಳೆ ಕಜ್ಜಾಯ ನೀಡೆಯವ್ವ 37ಕೆಟ್ಟೋಗರಕೆ ಚಿತ್ತವಿಟ್ಟ ಕೊರವಿಯಲ್ಲಮೃಷ್ಟಾನ್ನವ ನೀಡೆಯವ್ವಶ್ರೇಷ್ಠಾದ ಶಾವಿಗೆ ಬಟ್ಟುವಿ ಪಾಯಸಹೊಟ್ಟೆ ತುಂಬ ನೀಡೆಯವ್ವ 38ಅಟ್ಟಿಟ್ಟ ಪಂಚವಿಧ ಭಕ್ಷ್ಯ ಎನಗಿಂದುಇಷ್ಟ ಕಾಣೆ ನೀಡೆಯವ್ವಇಷ್ಟುಣಲಿಕ್ಕೆನ್ನತುಷ್ಟಿಬಡಿಸಿ ಸತ್ಯಗೋಷ್ಠಿಕೇಳೆ ನೀಡೆಯವ್ವ39ಮನ್ನಣೆ ಇಲ್ಲದ ಮನೆಯ ಹೊಗುವಳಲ್ಲಕನ್ನೆ ಬಾರೆ ಮುಂದಕವ್ವಮುನ್ನ ರಕ್ಕಸನೊಯ್ದ ಮಡದಿಗೆ ಒಳಿತವನೆಲ್ಲ ಹೇಳಿದ್ದೆನವ್ವ 40ನಿನ್ನ ಪ್ರಾಣದ ಪ್ರಿಯನೊಬ್ಬನೆ ಪರದೈವಕನ್ನೆ ಕೇಳಜಕಾಮರವ್ವಕಣ್ಣಾರ ಕಾಂಬೆ ನಿನ್ನಣ್ಣನಪಾಟುಪ್ರಸನ್ನವೆಂಕಟ ಕೃಷ್ಣನಿಂದವ್ವ 4111ಚೂರ್ಣಿಕೆಈ ವಾಕ್ಯವಂಕೇಳಿತೀವಿ ತೋಷವ ತಾಳಿದೇವಿ ರುಕ್ಮಿಣಿಯಕ್ಕ ಪಾವನ ಹಾಸಂಗಿಯಿಕ್ಕಿಆವಲ್ಲಿಂ ಬಂದ್ಯವ್ವ ದೇವಲೋಕದ ಕೊರವೆಈ ಒಳ್ಳೆ ಮೆಚ್ಚು ಮಾತು ಆವಾಗನುಭವೆಂ ಮಾತೆಹೀಗೆಂದಾಸನ ಕೊಟ್ಟು ಬಾಗಿಲೊಳು ಕಾವಲಿಟ್ಟುಬೇಗ ಪ್ರಸನ್ವೆಂಕಟ ಕೃಷ್ಣನಾಗಮವ ಮನದಿ ಕೇಳ್ದಳವ್ವೆ 4212ಕುಳ್ಳಿರೆ ಕುಳ್ಳಿರೆ ಕುಳ್ಳಿರೆ ಕೊರವಂಜಿಫುಲ್ಲಬಾಣನಾನೆ ಕುಳ್ಳಿರೆಸೊಲ್ಲಮ್ಮ ಸೊಲ್ಲಮ್ಮ ಹಲವು ಮಾತಿನ ಜಾಣೆಎಲ್ಲ ಬಯಕೆಯನೆಲ್ಲ ಸೊಲ್ಲಮ್ಮ ಕೊರವಂಜಿ 43ಆದರದಾ ಮಾತ ಕೇಳುತ ಕುಳಿತಳುಯಾದವರರಸ ಮುಕುಂದನಕೋದಂಡಪಾಣಿ ತಿರುವೆಂಗಳ ಮೂರ್ತಿಯಪಾದಕೆ ಮಾಡಿದಳೊಂದನೆ ಕೊರವಂಜಿ 44ಮಣಿಮಯ ಬುಟ್ಟಿಯ ಎಡದಲಿಟ್ಟುಕೊಂಡುವನಿತೆ ಪದ್ಮಾಸನವಿಟ್ಟಳುಮಿನುಗುವ ಎಳೆನಗೆಯಣುಗನ್ನ ಮಲಗಿಸಿವನಿತೆ ರುಕ್ಮಿಣಿಯನ್ನು ಕರೆದಳು ಕೊರವಂಜಿ 45ಜಾಣೆ ಬಾರೆ ಸುಗುಜಾಣೆ ಬಾರೆ ನಾರಿಮಾಣಿಕಳೆಕಟ್ಟಾಣಿಬಾರೆವಾಣಿಪತಿಪಿತ ಪ್ರಸನ್ವೆಂಕಟ ಕೃಷ್ಣನರಾಣಿ ಬಾರೆಸುಪ್ಪಾಣಿಬಾರೆ ಕಲ್ಯಾಣಿ ಬಾರೆ ಫಣಿವೇಣಿ ಬಾರೆಶುಭಶ್ರೋಣಿ ಬಾರೆ ಎಂದು ಕರೆದಳು ಕೊರವಂಜಿ 4613ವಚನಅಮ್ಮ ರುಕ್ಮಿಣಿಯಮ್ಮ ಉಮ್ಮ್ಮಯವಟ್ಟುಮುಮ್ಮೊರದ ರತುನ ಮುತ್ತಿನ ಕಾಣಿಕಿಟ್ಟುಪರಬೊಮ್ಮಪ್ರಸನ್ವೆಂಕಟಕೃಷ್ಣನ ಅಡಿಗಳನಮ್ಮಿಸುತ ಮನೋರಥವÀ ಮನದಿ ಬೆಸಗೊಳ್ಳಲು 47ಉಂಡ ಊಟ ಕಂಡ ಕನಸು ಪುಂಡರೀಕಾಂಬಕಿಯೆತಂಡ ತಂಡದ ವಾರುತೆಗಳ ಪೇಳುವೆನು ಸಖಿಯೆಹಿಂಡುದೈವದಗಂಡಪ್ರಸನ್ವೆಂಕಟ ಕೃಷ್ಣನ ಕಣ್ಣಾರಕಂಡು ಸಾರುವಕೊರವಿಎಳ್ಳನಿತು ಸಟೆಯರಿಯೆ4815ಚೂರ್ಣಿಕೆಕಾಸಿನಾಸೆಯವಳು ನಾನಲ್ಲಭಾಷೆ ಹುಸಿದರೆ ಬಿರುದು ಬಿಸುಡುವೆನೆಲ್ಲಭಾಷೆ ಪಾಲಕರು ನಮ್ಮ ಸಿದ್ಧರೆಲ್ಲ ಲೇಸುಲೇಸೆಂದುಕೇಸಕ್ಕಿತಿಮ್ಮಯ್ಯನ ಬೆತ್ತವ ಮುಟ್ಟೆಲೆ ದುಂಡೆಎನ್ನ ಮನದ ದೈವ ಎನ್ನಕ್ಕ ಕೇಳೆಯವ್ವತಿರುಮಲೆ ತಿರುವೆಂಗಳಯ್ಯವರಅಹೋಬಲ ನರಸಿಂಗಯ್ಯಹರಿಕಂಚಿ ವರದರಾಜಯ್ಯಶಿರಿ ರಂಗದ ರಂಗರಾಯಯ್ಯಬದರಿಯ ನರನಾರಾಯಣಯ್ಯಪುಂಡರೀಕವರದ ಪಂಢರಿರಾಯ ಎಮ್ಮಉಡುಪ ಕುಲಜ ಮನ್ನಾರು ಕೃಷ್ಣಮ್ಮಒಡ್ಡಿಜಗನ್ನಾಥ ಅಲ್ಲಾಳನಾಥಯದುಗಿರಿನಾಥ ಶಿರಿಮುಷ್ಣನಾಥಕೃತಪುರದ ವೀರ ನಾರಾಯಣಕೊಲ್ಲಾಪುರದ ಕನ್ನೆ ವೇಲಾಪುರದ ಚೆನ್ನಅನಂತಶಯನ ಜನಾರ್ದನ್ನಅನವರತಪರಸನ್ನ ವೆಂಕಟ ಕೃಷ್ಣನ ಕನ್ನೆಇಂತಪ್ಪಾನೇಕ ದೈವ ಏಕವೆಂದು ಏಕಾನೇಕವೆಂದುನಂಬಿಪ್ಪೆನೆ ಕೇಳೆಯವ್ವ 4916ಇಂತಿಪ್ಪ ಎನ್ನ ಮನೆಯ ದೈವ ಅವರಂತವ ಬೊಮ್ಮರರಿಯರವ್ವ ವಿಶ್ರಾಂತಿಲಿ ಕೊಂಡಾಡುವೆನವ್ವ ನಾನುಕಂತುವಿನಣ್ಣನ ಮಗಳವ್ವ 50ಇಪ್ಪಲ್ಲಿಪ್ಪಕೊರವಿನಾನಲ್ಲ ಹೋಗಿಬಪ್ಪೆ ಹದಿನಾಲ್ಕು ಲೋಕಕೆಲ್ಲಛಪ್ಪನ್ನದೇಶಗಳ ಸುದ್ದೀನೆಲ್ಲಕೇಳಿಬಪ್ಪುವ ಕಜ್ಜವ ಕೃಷ್ಣ ಬಲ್ಲ 51ಆವಾವ ದೇಶದ ಸುದ್ದಿ ಕೇಳವ್ವ ನಿನ್ನಭಾವದ ಬಯಕೆಯನೆಲ್ಲ ಕೇಳವ್ವಶ್ರೀವರ ಪ್ರಸನ್ನವೆಂಕಟಾದ್ರಿ ಕೃಷ್ಣ ದ್ವಾರಕಿಂದಾವಾಗ ಬಪ್ಪನೆಂದು ಕೇಳವ್ವ 5217ಚೂರ್ಣಿಕೆಓಯಮ್ಮ ನಿನ್ನವರುಗಳು ಆ ಬಲಮಗು ಮದನಕಾಮಬುಡುಕ್ಕಾನೆ ಪರತಾನು ಚಿಂತಿಶೆ ಮಾಣಮ್ಮನಾ ತಿರುಕ್ಕಿ ವಂದ ದೇಶ ಐವತ್ತಾರು ಶೊಲ್ಲರೆಅಂಗ ವಂಗ ಕಳಿಂಗ ಕಾಂಬೋಜ ಭೋಟಕರ್ನಾಟಕ ಘೋಟ ಮಹಾಘೋಟಜಿನ್ನ ಮಹಾಜಿನ್ನ ಜೊನ್ನಗಕಾಶ್ಮೀರ ತುರುಷ್ಕಮಾಗಧಬಂಗಾಳ ಗೌಳ ಮಾಳವ ಮಲೆಯಾಳನೇಪಾಳ ಗೌಡ ಗುರ್ಜರ ಕೊಂಕಣದರ್ದುರಬರ್ಬರ ಸೌರಾಷ್ಟ್ರ ಮಹಾರಾಷ್ಟ್ರಸಂಬರ ಮುಂಗಿಳ ಘೋಟ ಮುಖಏಕಪಾದ ಸೌಳ ಸಂಸಾಳಕಆನರ್ತ ಹಮ್ಮೀರ ಕೊಮ್ಮೀರಮತ್ಸ್ಯಪಾಂಚಾಲರಾಜಶೇಖರ ವರಶೇಖರ ಯುಗಂಧರ ಮಧ್ಯದೇಶಲಂಬಕರ್ಣ ಸ್ತ್ರೀರಾಜ್ಯ ಆಂಧ್ರ ದ್ರವಿಡಅರವ ಕನ್ನಡ ತುಳುವ ತುಳಾಂಡಜಾಳೇಂದ್ರ ಕೈಕೇಯ ಕೌಸಲ ಕಂಚಿಕನೋಜ ಸವ್ವೀರಸಿಂಧುಕೇರಳವೈದರ್ಭ ದೇಶದೊಳ್ಕುಂಡಿನಾಪುರದೊಳ್ ನಿನ್ನಂ ಕಂಡುಮನದಂಡಲಿಕೆಗೆ ಸಾಗಿತ್ತೆನೆಲೆ ದುಂಡೆ 5318ಈ ನಾಡ ಚರಿಸಿ ನಿನ್ನರಸುತ ಬಂದೆನೆಜಾಣೆ ಬಂಗಾರವ್ವ ಕೈ ತೋರೆ 54ನಿನ್ನ ಕಾಣುತ ಹಸಿವೆ ನೀರಡಿಕೆಲ್ಲ ಹೋಯಿತುಜಾಣೆ ಬಂಗಾರವ್ವ ಕೈ ತೋರೆ 55ಸಂಧಾನಕ್ಹಾರುವನಟ್ಟಿದ್ದೆ ಮೊದಲಹುದೇನೆ ಮಂಗಳದೇವಿ ಕೈ ತೋರೆ 56ನೀ ಬರೆದೊಕ್ಕಣೆ ಯದುರಾಯನರಿತಾನುಸೌಭಾಗ್ಯವಂತೆ ಕೈ ತೋರೆ 57ರಥವನೇರಿಕೊಂಡು ಬರಹ ನೋಡಿಕೊಳ್ವಜಾಣೆ ಬಂಗಾರವ್ವ ಕೈ ತೋರೆ 58ಧ್ಯಾನದ ಕಳವಳ ಮುಸುಡುಗಂಟಿನ ಚಿಂತೆಮಾಣು ಮಂಗಳದೇವಿ ಕೈತೋರೆ 59ತ್ರಿಭುವನೇಶ ಪ್ರಸನ್ನವೆಂಕಟ ಕೃಷ್ಣತಾ ಬಹನೆಲೆ ದುಂಡಿ ಕೈ ತೋರೆ 6019ಚೂರ್ಣಿಕೆಎಲೆಲೆ ಎಳೆವೆಂಗಳೆ ಎಲೆ ಹುಲ್ಲೆಗಂಗಳೆಮಹಾಭೂಷಣದ ಮಾರುವೇಣಿ ಮಡದಿಯರಸುಪ್ಪಾಣಿಕೀರವಾಣಿ ಕಿಸಲಯಪಾಣಿಕಂಧಿಜ ಬಿಂಬವದನೆ ಕುಲಿಶಮಣಿರದನೆಮದನಕಾರ್ಮುಕೋಪಮ ಭ್ರೂಲತೆಯಳೆ ಮಹಾಲಕುಮಿಯಳೆಅರುಣವಿಧ್ರುಮಾಧರೆ ಅಬ್ಜಜಾ ಕಂಧರೆಅರ್ಧಚಂದ್ರನ ಪೋಲ್ವಡಿ ಪಣೆಯಳೆ ಅನಘ್ರ್ಯ ಚೂಡಾಮಣಿಯಳೆಸಿಂಧೂರಸೀಮಂತಿನಿಯೆಸಿರಿತಿಲಕದ ಶೋಭಿನಿಯೆನುಣ್ಗದಪುನಾಸಿಕಮಣಿಯಳೆ ನೂತನೊಜ್ರದೋಲೆಯಳೆನಿಷ್ಕ ಕಂಠಾಭರಣೆಯಳೆ ನಿತ್ಯಮಂಗಳ ಸೂತ್ರಿಯಳೆನಿಡುಜಾಲಕ ಮಾಲೆಯಳೆಬುಗುಡಿ ಚಳತುಂಬು ಕೊಪ್ಪಿನ ಕಿವಿಯಳೆಬಾವಲಿ ನಾಗೋತ್ರ ಪೊಂಬರಳೆಲೆ ಲಲಿತ ಬಾಹುಲತೆಯಳೆಲಸತ್ವನಜಕೋರಕ ಸ್ತನಿಯಳೆಕಡು ತೆಳ್ವೋದರಿ ನಿಮ್ನ ನಾಭಿಯಳೆಕಂಠೀರವಕಟಿಯಳೆ ಕರಭೋರು ಯುಗಳೆಯಳೆಅಪರಂಜಿಕಂಚುಕಾಂಬರ ಉತ್ತರೀಯಳೆಅಮೂಲ್ಯ ಕಾಂಚಿದಾಮಾಂಕಿತಳೆಬಟುಗನ್ನಡಿ ಜಾನುದ್ವಯಳೆ ಬ್ಞಣ ಪಂಚಕನ ಬತ್ತಳಿಕೆ ಜಂಘೆಯಳೆಕೋಮಲತರಾಂಘ್ರಿ ಸರಸಿಜಯುಗಳೆನೀಲಪಚ್ಚ ಪದ್ಮರಾಗ ಹೀರ ಮುತ್ತಿನ ಪೆಂಡೆಯಳೆಕಾಲಂದಿಗೆ ಮೆಂಟಿಕೆ ವೀರಮುದ್ರೆ ಕಿರಿ ಪಿಲ್ಲಿಯಳೆಮಣಿಮಯಾಂಗುಲ್ಯದ ವಲಯಾಭರಣೆ ಮದಗಜಗಮನೆಪ್ರತಿಯಿಲ್ಲದ ರನ್ನದ ಬೊಂಬೆ ಪರಬೊಮ್ಮನ ಪಟ್ಟದ ರಂಭೆಬಾಬಾ ತಾತಾ ಎಂದು ವಾಮಕರವಬೇಡಲಿತ್ತಳಾ ರುಕ್ಮಿಣಿ ತಾಯಿ 6120ಜಗದ ನಾರಿಯರ ಕೈಗಳ ಕಂಡೆನವ್ವಮೃಗಮದಗಂಧಿ ನಿನ್ಹೋಲ್ವರಿಲ್ಲವ್ವ 62ಯುಗಯುಗಾಂತರ ದೇಶ ದೇಶದಲ್ಲವ್ವಅಗಲ್ಯಾಟವಿಲ್ಲ ನಿನ್ನರಸ ನಿನಗವ್ವ 63ಸವತೇರು ಬಹಳುಂಟು ನೆಂಟರ ಜಾಣೆ ಎಲೆ ಬೀಗರ ಸುಗುಣೆಯುವತಿ ಪ್ರಸನ್ವೆಂಕಟ ಕೃಷ್ಣ ನಿನ್ನ ಪ್ರಾಣ 6421ಕಣಿ ಕೇಳೆ ಕಣಿ ಕೇಳೆ ಕಣಿ ಕೇಳೆ ಚೆಲ್ವೆಕಣಿ ಕೇಳೆ ನಿನ್ನ ಮನದಾ ಮಾತ್ಹೇಳ್ವೆಎಣಿಕೆಗೊಳ್ಳದಿರಮ್ಮಇಂದುನಾಳೆಂದುಗುಣನಿಧಿ ಗೋಪಾಲ ಬಹ ದಯಾಸಿಂಧು 65ತ್ರುಟಿಯುಗವಾಗಿದೆ ನಿನಗೀಗ ಮುಗ್ಧೆಕುಟಿಲಮಾಗಧಸಾಲ್ವ ನೆನೆವ ದುರ್ಬುದ್ಧೆಘಟಿಸದೆಂದಿಗೆ ಖಳರ ಮನೋರಥ ಸಿದ್ಧೆದಿಟವೆನ್ನವಾಕುಸುರಲೋಕ ಪ್ರಸಿದ್ಧೆ66ಹಿಂದೊಮ್ಮೆ ಖಳರು ಗೋವಿಂದ ಬಂದಾಗಮಂದಮತಿಯಲಿ ಮನ್ನಿಸದಿರಲಾಗಇಂದ್ರ ಸಿಂಹಾಸನವ ಹರಿಗೆ ಕಳುಹಿಸಿದವೃಂದ ದೈತ್ಯರಿಗೆಲ್ಲ ಭಯವ ಸೂಚಿಸಿದ 67ಜಂಭಾರಿಕುಲಿಶಕಂಜುತ ಪೋಕರೆಲ್ಲಥಂಬಿಸಿದರು ವಾಗಾಡಂಬರವೆಲ್ಲಅಂಬುಜಾಕ್ಷಗೆ ನಿನ್ನತಾತಪೂಜಿಸಿದಅಂಬುಜನಾಭ ತನ್ನೊಳುವಿಶ್ವತೋರ್ದ68ಅದನೆಲ್ಲ ಬಲ್ಲ್ಯವ್ವ ಹರಿಯ ನಿಜನಲ್ಲೆಬೆದರಿದೊಲ್ಲೋರ್ವ ನಿನ್ನ ಮಾಯವ ಬಲ್ಲೆಪದುಮಜ ಭವರ ಹೃದಯಾಬ್ಜ ನಿಯಂತ್ರೆಉದಧೀಶನಾಜÕದಿ ಸರ್ವಸ್ವತಂತ್ರೆ 69ಕೇಳಮ್ಮ ನಿನ್ನ ಹೆತ್ತವರಿಗೆ ನಿನ್ನಮೇಲೆ ಹಂಬಲ ಬಹಳ ಪಾಪಿ ನಿಮ್ಮಣ್ಣಆಲೋಚನೆಯಿಲ್ಲದೆ ನಿಶ್ಚೈಸಿದ್ದಾನೆ ಶಿಶುಪಾಲಗೆ ನಿನ್ನ ಕೊಡುತೇನಂತೈದಾನೆ 70ಆಗಲ್ಯಾಕವನಿಂದಲೀಕಜ್ಜ ಬುರ್ರಾಬೇಗ ಭೀಷ್ಮಕನಂತರ ಬಲ್ಲ ಶ್ರೀಧರ್ರಾಸಾಗರಶಯನ ತಾ ಸಮಯಕೈತರುವನೇಗಿಲಧರನು ಕೃಷ್ಣನ ಕೂಡ ಬರುವ 71ಆ ಗೌರಿ ಮೌನಿಯೆಂಬುವಳ ಪೂಜೆಯಲಿಯೋಗವಾಗಿದ್ರ್ದಾ ಕಾಪುರುಷ ಸಭೆಯಲ್ಲಿಮೇಘಮುಸುಕಿರ್ದ ಚಂದಿರನಂತೆ ನಿನ್ನಯೋಗೇಶ ಪ್ರಸನ್ವೆಂಕಟ ಕೃಷ್ಣ ನೊಯ್ವ ಚೆನ್ನ 7222ಇನಿತೆಲ್ಲ ಕೊರವಂಜಿಕರವಪಿಡಿದು ಹೇಳಿಕ್ಷಣ ಕ್ಷಣಕೊಡೆಯನ ಹೊಗಳಿನೆನಪಿಗೆ ಬೆಸಗೊಂಬೆ ಕಾಲಜ್ಞಾನದ ವಾರ್ತೆಎನಗೆ ತಿಮ್ಮಯ್ಯ ಹೇಳೆಂದು 73ಶ್ರೀ ರುಕ್ಮಿಣಿಯ ಮನದುಲ್ಲಾಸವನೆಲ್ಲಪೂರೈಸುವೆನೆಂಬ ನುಡಿಯತೋರು ಎನ್ನಯ ನಾಲಿಗೆಯಿಂದಲುಸುರುವೆವೀರ ದ್ರಾವಿಡ ವೆಂಕಟಯ್ಯ 74ಶರಣ್ಯೆಲೆ ಸತ್ಯನೆ ಶರಣ್ಯೆಲೆ ನಿತ್ಯನೆಶರಣು ಶರಣು ನಿತ್ಯಮುಕ್ತಶರಣು ಪರೇಶನೆ ಶರಣು ಅವಿನಾಶನೆಶರಣು ಪ್ರಸನ್ವೆಂಕಟ ಕೃಷ್ಣ 7523ವಚನಓ ರುಕ್ಮಿಣಿ ತಾಯಾರೆಉನ್ನ ಮನಸಿಲೆ ನಿನೈಚ್ಚ ಕಾರ್ಯಂ ಕೈಕ್ಕೂಡಿನಾಲ್ಎನಕ್ಕೆ ಎನ್ನ ಸಂತೋಷಂ ಪಣ್ಣಿರಾಯ್ಓಯಮ್ಮ ಉನ್ ಪ್ರಾಣನಾಯಗನ್ ಶ್ರೀಕೃಷ್ಣನ್ ವಂದುಪೊಟ್ಟಣೆ ಕೈ ಪಿಡಿಚ್ಚಿ ಕಲ್ಯಾಣಂ ಪಣ್ಣಿಕೊಳ್ಳರಾಂಇಂದ ವಾರ್ತೆ ತಪ್ಪಿನಾಲ್ ನಾಂ ಕೊರ್ತಿಯೇ ಅಲ್ಲೆಉನ್ ತಮಯನ್ ರುಗ್ಮಂ ವೇಕ್ಕತ್ತೆ ಕೊಲ್ಲರಂ ವರಾನುಓಯಮ್ಮ ಇಂದ ವಾರ್ತೆಯೈ ಪಣ್ಣಿಕೋ ಅª, À್ಮು 7624ಮದ್ಯಪಾನಿತಾಮಸಯವನನ ಕೊಲಿಸಿದನೆನಿದ್ರೆಗೈವ ರಾಯನಿಂದಲಿಸದ್ದಿಲ್ಲದೆ ಮಧುರೆ ಜನರ ಸಾಗರದಮಧ್ಯ ದ್ವಾರಕೆಯಲ್ಲಿಟ್ಟನೆ 77ಯವನ ಸೈನ್ಯಜಲಧಿಬತ್ತಿಸಿ ಸಾಲ್ವಾದ್ಯರಹವಣಮುರಿದು ನಿಜರ ಹೊರೆವನು ನಿನ್ನವಿವಹ ಮಾಳ್ಪೆನೆಂಬ ಮಾಗಧನು ಚೈದ್ಯ ತನ್ನಕುವರನೆಂದು ಮಾನವಿಡಿದಿಹ 78ಇನಿತರೊಳು ರಂಗರಾಯನು ಮೋಹರದಿಮಣಿರಥವನೇರಿ ಬಹನುವನಿತೆ ನಿನ್ನಂದಣವ ನೋಡುತ ಜಿಗಿವನಲ್ಲಿಂದ ಘನತರ ಮೃಗೇಂದ್ರನಂದದಿ 79ನರಿಯ ಹಿಂಡಿನೊಳಗಿನಾನೆಯ ಒಯ್ವ ತೆರದಿಹರಿನಿನ್ನಪ್ಪಿಕೊಂಡುಹಾರುವಗರುಡನಮೃತ ಕಲಶವ ಸುರರ ಗೆದ್ದುಹರುಷದಿಂದೊಯ್ಯುವಂತೆ ಒಯ್ವನು 80ಸರಸಿಯಾಬ್ಜ ಹಂಸ ಒಯ್ವವೋಲ್ ಪರಮಪುರುಷತ್ವ, ರಿಯ ತನ್ನ ರಥಕೆ ಒಯ್ವನೆಬರಿಯ ದುಗುಡವ್ಯಾಕೆ ಬಾಲಕಿಪ್ರಸನ್ವೆಂಕಟ ಕೃಷ್ಣ ನಿನ್ನ ಮೆಚ್ಚುಗಾರನೆ 81ಬಂದನೆಂಬ ನುಡಿಯು ಬರುತಿದೆಜವದಿಕೃಷ್ಣಬಹನೆಂಬ ನುಡಿಯು ಬರುತಿದೆ 8225ಚೂರ್ಣಿಕೆನೀಡೆಯವ್ವ ಎನ್ನ ಮನೆ ಗಂಡನ ಕಾಟ ಘನ್ನವವ್ವಕ್ಷಣಕೈದು ನಡೆಯವನವ್ವಒಮ್ಮಾನ ತಿರಿತಂದರೆ ಇಮ್ಮಾನ ಬೇಡುವನವ್ವಚೆಂಬಣ್ಣ ಕರಿಬಿಳಿಯಬಟ್ಟೆನಮ್ಮತ್ತೆಗಳವ್ವಆರು ಮಂದಿ ಗಂಡನ ಗೆಳೆಯರವ್ವಏಳು ಪದರು ಮೂರು ತ್ಯಾಪೆ ಗುಡಲುಂಟವ್ವಎಪ್ಪತ್ತೆರಡು ಸಾವಿರ ನುಲಿಯ ಸಿಂಬಿಗಳವ್ವಗುಡಲೊಳು ಮೂರು ಒಲೆಯುಂಟವ್ವಗುಡಲು ಬಿದ್ದರೆ ನುಲಿಗೆ ಮಾರ್ಯೆವ್ವಒಂಬತ್ತು ಗುದ್ದಿನೊಳಗೆ ಹತ್ತು ಹೆಗ್ಗಣದೋಡ್ಯಾಟವವ್ವಕೊರವನ ಕೈಯಿಚ್ಛೆ ಮೂರು ನಾಯಿಗಳವ್ವಎಣಿಕಿಲ್ಲದ ಕುತ್ತಗಳುಂಟವ್ವಕೊಬ್ಬಿನ ಸವತೇರೆಂಟು ಮಂದಿ ಕೊರವಗೆ ಮಚ್ಚೂಡುವರವ್ವಸಂಸಾರದಲೆಳ್ಳನಿತು ಸುಖವಿಲ್ಲವ್ವಅತ್ತೆಗಳಾಟ ಗಂಡನ ಬ್ಯಾಟ ಸವತಿಯರ ಕಾಟನೆರೆಹೊರೆಯವರ ನೋಟ ಮನೆಯ ಮಾಟಗತರಸದೂಟಕಂಜಿ ನಡುನಡುಗಿಮೂರೂರ ಹಾದಿ ಮೆಟ್ಟಿ ಬಂದುಆರೂರರಸಿನ ಮೊರೆ ಹೊಕ್ಕೆನೆಯವ್ವವಿದರ್ಭದೇಶದ ಕುಂಡಿನಾಪುರದೊಳು ನಿನ್ನ ಗುರುತಕೇಳಿಉಪವನದ ಪ್ರದ್ಯೋತನಾಳ್ವ ಎರಡು ಬಾವಿಯ ಮ್ಯಾಗಣಹೂವಿನ ತೋಟದ ನಡುವೆ ಬುತ್ತಿಯನುಂಡು ನಿನ್ನ ಕಂಡುಕುಂತಳಾಪುರದಲ್ಲಿ ಕುಳಿತುಂಬಬ್ರಹ್ಮಾನಂದದವರ ಭಾಗ್ಯವ ಬೇಡ ಬಂದೆನೆ ಅವ್ವಅಸುವಿಗೆ ಹಾಲನೆರೆಯವ್ವಶಿಶುವಿಗೆನವನೀತನೀಡೆಯವ್ವಬಂಗಾರೆವ್ವ ಸಿಂಗಾರೆವ್ವ ಸೋರ್ಮುಡಿಯವ್ವಮಲ್ಲಿಗೆದುರುಬು ಸಂಪಿಗೆದುರುಬುಪಚ್ಚೆ ಮರುಗ ಮುಡಿವಾಳ ಶಾವಂತಿಗೆ ತುರಬಿನವ್ವಪ್ರಸನ್ವೆಂಕಟಕೃಷ್ಣನ ತೋಳ್ತಲೆಗಿಂಬಿನವ್ವ ನೀಡೆಯವ್ವ 8326ವಚನಇಂತಾಧ್ಯಾತ್ಮವಂ ಪೇಳಿಕಂತುವಿನಯ್ಯನ ಕಾಂತೆಯಂ ಸಂತಸಪಡಿಸಿಅಂತರಂಗದಿ ಚಿಂತಾಯಕನಂ ನೆನೆನೆನೆದುಭ್ರಾಂತಿ ಪರವಶಾದಂತೆ ಕೆಂಜೆಡೆಯಂ ತೂಗಿ ತೂಗಿಅಂತದತ್ಯಂತ ತೂಳಂತುಂಬಿಇಂತೆಂದಳಾ ಕೊರವಂಜಿ 8427ಬರುತಾನೆ ಜಾಣೆ ಬರುತಾನೆಬರುತಾನೆ ಚೆಲ್ವೆ ಬರುತಾನೆ 85ಹಿಂಡುಭಂಡರೆಲ್ಲ ಕೂಡಿ ನಿನ್ನ ಮುಚ್ಚಲು ಎತ್ತಿಕೊಂಡು ಒಯ್ವ ಜಾಣ ಬರುತಾನೆಪುಂಡರೀಕಸುರಗಿ ಖಡ್ಗ ಭಿಂಡಿವಾಲ ನುಗ್ಗುಮಾಡಿದಂಡಿಸುವ ಜಾಣ ಬರುತಾನೆ 86ಕುಂಡಿನಾಪುರದಿ ನೆರೆದ ಕೊಂಡಿ ಕುಹಕರ ತಲೆಯಚಂಡನಾಡ್ವ ಜಾಣ ಬರುತಾನೆಮಂಡೆಯಲ್ಲಿ ಪಚ್ಚಚೂಡವಿಟ್ಟು ರುಕ್ಮನಭಿಮಾನಕೊಂಡೇನೆಂಬ ಜಾಣ ಬರುತಾನೆ 87ತಂಡ ತಂಡದಲ್ಲಿ ನಿನ್ನಯ್ಯನ ಸದ್ವಾಸನನ್ನಉಂಡೇನೆಂಬ ಜಾಣ ಬರುತಾನೆಲೆಂಡದಾನವಾರಿ ಪ್ರಸನ್ನವೆಂಕಟಕೃಷ್ಣ ಬೊಮ್ಮಾಂಡಪತಿ ಜಾಣ ಬರುತಾನೆ 8828ಚೆನ್ನೆ ಕೊರವಂಜಿ ಮಾತು ಶ್ರೀಕನ್ಯೆಕೇಳಿನಲಿವಾಂತುಮನ್ನಿಸಿ ಗುಣವ ಕೊಂಡಾಡಿ ಮುಕ್ತಿರನ್ನಗಾಣಿಕೆಯನು ನೀಡಿ 89ಎಲೆ ಸತ್ಯಲೋಕದ ಕೊರವೆ ನೀಬಲು ಸತ್ಯ ನುಡಿದೆ ನಾನರಿವೆಛಲದಂಕ ದೇವರದೇವ ಈಖಳರೊಳು ಒಯ್ವುದರಿದವ್ವ 90ಹರಿರಥವೇರಿ ಬಾಹೋಣ ಕಾಪುರುಷರ ಮತ ಕೆಡಿಸೋಣಗುರುಪ್ರಸನ್ವೆಂಕಟ ಕೃಷ್ಣ ಬಂದುಹೊರೆವುದುಂಟೇನವ್ವ ರಮಣಿ 9129ನಂಬಲೇನೆ ನಿನ್ನ ಮಾತು ಕೆಳದಿ ಕೊರವಮ್ಮ ನಮ್ಮಂಬುಜಾಕ್ಷ ಬಾಹನೇನೆ ದೇವಿ ಕೊರವಮ್ಮ 92ಉಡಿಯ ಕಂದನಾಣೆ ಇಡುವೆ ನಂಬೆ ರುಕ್ಮಿಣಿ ನಾನುಡಿವ ನಾಮದಾಣೆ ಇಡುವೆ ನಂಬು ರುಕ್ಮಿಣಿ 93ಎಡದ ತೋಳು ತೊಡೆಕಂಗಳುಹಾರಲೊಳಿತೇನೆ ಚಿಲಿಪಿಲಿನುಡಿವಶಕುನಎಡದ ಗೌಳಿಯ ನುಡಿಯು ಒಳಿತೇನೆ94ಕಡಲಶಯನ ನಿನ್ನ ಪ್ರಾಣದೊಡೆಯ ಬಪ್ಪನೌ ಎನ್ನಪಡೆದನಯ್ಯ ಪ್ರಸನ್ನವೆಂಕಟಕೃಷ್ಣ ತಪ್ಪನೌ 9530ನಿನ್ನಗಂಡಬೆಣ್ಣೆಗಳ್ಳ ಕನ್ನೆಗೊಲ್ಲತಿಯರ ನಲ್ಲಕಣ್ಣೆವೆ ಸನ್ನೆಗಾರ ನಂದಗೋಪ ಕುಮಾರ 96ಚಿನ್ನತನದಿ ದಶಲಕ್ಷ ಚಿನ್ನರ ಪಡೆದನು ದಕ್ಷಪೊನ್ನ ಕೊಳಲನೂದಿ ಮೂಜಗವ ಮೋಹಿಸುವ 97ಉನ್ಮತ್ತಮಾತುಳನ್ನ ತುಳಿದ ತನ್ನ ಪೆತ್ತವರೆಡರ್ಗಳೆದಮನ್ನಿಸಿ ಪಾಂಡವರÀ ಪೊರೆದ ಚಿನ್ಮಯ ಸುಖದ 98ಪೆಣ್ಗಳ್ ಹದಿನಾರುಸಾವಿರದ ನೂರೆಂಟನಾಳ್ವ ಚದುರನಿನ್ನ ಪ್ರಾಣ ಪ್ರಿಯ ಬಂದ ಪ್ರಸನ್ನವೆಂಕಟ ಕೃಷ್ಣ ಮುಕುಂದ 9931ನುಡಿ ನುಡಿಯೆಲೆ ಬಡನಡುವಿನ ಮಡದಿ ನಿನ್ನುಡಿಗುಚಿತವಕೊಡುವೆನಡಿವಿಡಿವೆ ಮನವಿಡುವನೆ ಕಡಲೊಡೆಯ ಕೈವಿಡಿವನೆ ಎನ್ನ ಕಡೆಯ ನೋಡಿ ನುಡಿವನೆ ಸವಿನುಡಿಯಕಡು ಬಲಿಭುಜ ಗಡಣಂಗಳ ನಡುವ್ಹಂಸನಪಡಿಮಿಡುಕುವೆನುಡಿ ಬೇಗೆಂದು ಪಡೆಗೂಡಿ ಹಲಿಯೊಡನಾಗಮ ನುಡಿಯೇ ನಿನ್ನುಡಿಗಮೃತವ ಪಡೆಯೇ ಮತ್ತೀಜಡಜಡಿ ಲೋಕೊಡೆಯೆ ಪ್ರಸನ್ನವೆಂಕಟ ಕೃಷ್ಣರಾಯನನುಡಿಯೆಲೆ ನುಡಿನುಡಿಯೆ ನುಡಿನುಡಿಯೆ 10032ಹರಿಬರುತಾನೆ ಗುರುತು ಗಂಟ ಕಟ್ಟೆಪಕೇಳೆ ನರಸಿಂಗನಂಗನೆಯನೊಯಿದು ಕೆಟ್ಟನರಿಗಳಾಳಬಲ್ಲವೇನೆ ನಲಿದು ನೀನುದುರುಳರಿಗೆ ದಕ್ಕಬಲ್ಲ್ಯೇನಮ್ಮ ನಿನ್ನಾಚರಣೆಯೆಲ್ಲ ಜಗದ್ವಿಡಂಬನಮ್ಮ 101ನನ್ನ ತರಳನಾಣೆ ಸಟೆಯನಾಡೆನಮ್ಮ ನಾನೊರೆದವಾಕುಸಾಕ್ಷಿ ಬರುತಾವಮ್ಮ ಮ್ಯಾಲರಕೆಯುಳ್ಳ ತಾಯಿಯಾದರೆ ನೀ ನನ್ನಕರೆಸಿ ಕೇಳೆ ನಿನ್ನ ಮನೆಗೆ ಜಾಣೆ 102ನಿನ್ನ ಹೆಸರ ತಕ್ಕ ಊಟವ ನೀಡೀಗ ನಾಹಸಿದೆನೆಂದು ಉಂಡುಕೊರವಿಬೇಗಪ್ರಸನ್ನವೆಂಕಟ ಕೃಷ್ಣನ ರಾಣಿಗೆÉ ಹಾರೈಸಿದಳು ಬಸುರು ಬುಡುಕೆಂದು 10333ಚಕ್ಕನೆ ನಿಂತಳು ಕೊರವ್ಯಮ್ಮ ಕಂಡುಫಕ್ಕನೆ ನಿಂತಳು ರುಕ್ಮಿಣಮ್ಮ ಪ್ರಾಣದಕ್ಕರ ಬಿಡಲಾರೆ ನಿನ್ನ ಗೆಳತಿ ಪ್ರೇಮಉಕ್ಕುತಿದೆ ನೀ ಹೋಗುವುದೊಳಿತೆ ಎನಲು ನಕ್ಕು 104ಶ್ರೀ ಗೋಪಾಲ ಬಾಹನಕ ನಿಲ್ಲೆ ವಿಯೋಗ ತಾಳಲಾರೆ ನೀ ಬಲ್ಲೆಹೀಗೆನೆÀ್ನ ಬೇಡಿಕೊಂಡಳು ಮರುಳೆ ನೆನೆದಾಗೆ ಬಹೆನೆಂದ್ಹೇಳಿ ತೆರಳೆ ಅನುರಾಗದಿಂದ 105ಆವ ಪರಿಂದಾರೆ ಹರಿಸೇವೆ ಮಾಡಿದೇವಋಷಿ ನಿಜಾನಂದ ತೀವಿಶ್ರೀವರ ಪ್ರಸನ್ವೆಂಕಟ ಕೃಷ್ಣನ ಮಹತೇವಿಡಿದು ಹೊಗಳುತ ಮುನಿರನ್ನ ರಾಮೆಯಾಜÕದಿ 10634ಸುರಋಷಿಪೇಳ್ದ ಒಕ್ಕಣೆಯಹರುಷದಿ ಕೇಳ್ದ ರುಕ್ಮಿಣಿಯಅರಸ ಪ್ರಸನ್ನವೆಂಕಟ ಕೃಷ್ಣನಿರುತದಿ ಜಯ ನಮಗೀವ 107ಜಯ ಜಯ ಚಿನ್ಮಯಮೂರ್ತಿಜಯ ಜಗನ್ಮಯ ಸ್ವಚ್ಛಕೀರ್ತಿಜಯ ಜಯ ಪ್ರಸನ್ವೆಂಕಟ ಕೃಷ್ಣಜಯಮೂರ್ತಿನಿನಗೆ ಶರಣು108
--------------
ಪ್ರಸನ್ನವೆಂಕಟದಾಸರು