ಹಾರುವರಿಗೆ ಭೂಮಿಯಾ ನೀಡಿದೆನೆಂದು |
ನೀರೋಳುಮನೆಯ ಮಾಡಿ ಕೊಂಡೆಯಾರಂಗಾ ಪ
ಇಂದ್ರಾದಿಗಳು ಕ್ಷಣಕೊಮ್ಮೆ ಮೊರೆಯಿಡಲಾಗಿ
ನಿದ್ರೆ ಕಾಣೆನೆಂದು ಸೇರಿದೆ ಗಡ್ಡೆಯಾರಂಗಾ 1
ವಿಷನುಂಡುದಾವಾಗ್ನಿ ನುಂಗಿ ತನು ಶೆಖೆದೋರೇ
ಶೇಷನಂಗದ ಮೇಲೆ ಪವಡಿಸಿದೆಯಾ ರಂಗಾ 2
ಶರಣ ವಸರಕ ಎಡತಾಕಲಾರೆನೆಂದು
ಗುರುಮಸಿಪತಿ ಸ್ವಾಮಿ ನಾಮ ವಿಟ್ಟೆಯಾ ರಂಗಾ 3