ಒಟ್ಟು 6 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕನ್ಯಾರೂಪವ ತಾಳಿದ ಚನ್ನಿಗ ಕೃಷ್ಣರಾಯನಾ ಪ ದಾನವರ ಮರಳು ಮಾಡಿ ಮಾಣದೆ ಸುಧೆಯನೆರೆದು ಆ ನಿರ್ಜರರ ಪಾಲಿಸಿದ ಶ್ರೀ ನಾರಾಯಣಿ ವೇಷವಾ 1 ಆರಾರು ಸಾವಿರ ಸಕಲ ಶರೀರದ ಎಡಕೆ ಇಪ್ಪ ಸಾರಸುಂದರವಾಗಿದ್ದ ನಾರಿ ರೂಪಗಳು ಇದೊ 2 ಭೂತಳದೊಳಗೆ ಜನಕೆ ಮಾತೆಯಾಗಿ ಕಾವುತಿಪ್ಪ ಜಾತರಹಿತ ವಿಜಯವಿಠ್ಠಲ ಶ್ರೀ ತರಣಿಯಾಳಿದ ಪೆಣ್ಣಿನ 3
--------------
ವಿಜಯದಾಸ
ಮೂಲ ದೇಹದಿ ಪಾಳ್ಯ ಬಿಡುತಿದೆ ನಾಳೆ ನಾಡದೋ ಕಾಣೆ ತಮಪುರವಿದು ಕಾಲ ಬರುತಿದೆ ಪ ಬಂದು ಬಂದವರೆ ಮುಕ್ತಿಗೆಯಿಕ್ಕಿ ರವಿ ನಂದನ ನಾಳುಪದ್ರವನಿಕ್ಕಿ ಹಿಂದು ಮುಂದಕು ಛಾವಣೆಯಿಕ್ಕಿಪುರದ ಮಂದಿಯ ಕಾವಲನಿಕ್ಕಿ 1 ಪುರದೊಳಗೇನು ಬೀಯಗಳಿಲ್ಲ ಮುಂದೆ ಬರುವ ಮಾರ್ಗವ ಕಟ್ಟಿದರೆಲ್ಲ ಕರಣವೃತ್ತಿಗಳು ತಗ್ಗಿತು ಎಲ್ಲ ಕೋಟೆ ಜರಿದು ಹೋಯಿತು ಸುತ್ತಲು ಎಲ್ಲ 2 ಕಾಲು ಕೈಗಳ ಧಾತು ತಪ್ಪಿತು ನುಡಿದ ನಾಲಗೆ ಹಿಂದಕೆ ಸರಿಯಿತು ಕಣ್ಣಾಲಿಯೊಳಗೆ ನೀರು ಉಕ್ಕಿತು ವಸ್ತು ಗಾಳಿಯೊಳಗೆ ಮಾಯವಾಯಿತು 3 ಮಡದಿ ಮಕ್ಕಳಿಗೆಲ್ಲ ಹೊಡೆದಾಟ ಬಲಕೆ ಎಡಕೆ ಹೊರಳದಿರಿ ಎನುವಾಟ ಕಿಚ್ಚಿ ಯೊಡನೆ ಗೂಡನು ಸುಡುವಾಟ ಕೆಲವು ಕಡೆಯವರೆಲ್ಲ ತೆರಳುವಾಟ 4 ಹೇಳದ ಯಮದೂತರಿಗಂದು ಕಡು ಖೂಳ ಪಾಪಿಗಳೆಳತಹುದೆಂದು ಲಕ್ಷ್ಮೀ ಲೋಲ ನಾಳು ಗಳಮುಟ್ಟದಿರೆಂದು ತನ್ನಾಳಿಗೆ ಕಟ್ಟು ಮಾಡಿದನಂದು 5
--------------
ಕವಿ ಪರಮದೇವದಾಸರು
ವೈಚಾರಿಕತೆ ಆವ ಕರ್ಮವೊ ಇದು ಆವ ಧರ್ಮವೊಆವ ಕರ್ಮವೆಂದರಿಯೆ, ಹಾರುವರಿವರು ಬಲ್ಲರೆ ಪ ಸತ್ತವನು ಎತ್ತ ಪೋದಸತ್ತು ತನ್ನ ಜನ್ಮಕೆ ಪೋದಸತ್ತವನು ಉಣ್ಣುವನೆಂದುನಿತ್ಯ ಪಿಂಡವಿಕ್ಕುತೀರಿ1 ಎಳ್ಳು ದರ್ಭೆ ಕೈಲಿ ಪಿಡಿದುಪಿತರ ತೃಪ್ತಿ ಪಡಿಸುತೀರಿಎಳ್ಳು ಮೀನು ನುಂಗಿ ಹೋಯಿತುದರ್ಭೆ ನೀರೊಳು ಹರಿದು ಹೋಯಿತು 2 ಎಡಕೆ ಒಂದು ಬಲಕೆ ಒಂದುಎಡಕೆ ತೋರಿಸಿ ಬಲಕೆ ತೋರಿಸಿಕಡು ಧಾವಂತ ಪಡಿಸಿಕಟಿಯ ಹಸ್ತದೊಳಗೆ ಪಿಡಿಸುತೀರಿ 3 ಮಂತ್ರಾಕ್ಷತೆಯ ಕೈಗೆ ಕೊಟ್ಟುಮೋಕ್ಷವನ್ನು ಹಾರೈಸುವಿರಿಮಂತ್ರವೆಲ್ಲೊ ಅಕ್ಷತೆಯೆಲ್ಲೊಮೋಕ್ಷವೆಲ್ಲೊ ಮತ್ರ್ಯವೆಲ್ಲೊ4 ಹೇಳುವವನು ಅವಿವೇಕಿಕೇಳುವವನು ಅಜ್ಞಾನಿಹೇಳುವ ಕೇಳುವ ಇಬ್ಬರ ಸೊಲ್ಲಆದಿಕೇಶವಮೂರ್ತಿ ಬಲ್ಲ5
--------------
ಕನಕದಾಸ
ನಳಿನಜಾಂಡತಲೆಯದೂಗೆ |ಇಳೆಯು ನಲಿದು ಮೋಹಿಸುತಿರಲು ||ಕೊಳಲ ಪಿಡಿದು ಬಾರಿಸಿದನು |ಚೆಲುವ ಕೃಷ್ಣರಾಯನು ಪಪೊಳೆವ ಪೊಂಬಟ್ಟೆಯ ದಟ್ಟಿ |ಅಳವಡಿಸಿ ನೆಗಹಿನಿಂದ ||ಹಲವು ರನ್ನದುಂಗುರವಿಟ್ಟ |ಚೆಲುವ ಬೆರಳ ನಟಿಸುತ |||ಲಲಿತವಾಮಭಾಗತೋಳ-|ಲೊಲಿದು ಓರೆನೋಟದಿಂದ ||ಬಲದಪಾದಎಡಕೆ ಚಾಚೆ |ನಳಿನಪದಗಳೊಪ್ಪುತಿರಲು 1ಸೆಳನಡುವಿನೊಳಗೆ ಕತ್ತರಿ |ಕಳೆಯ ಸಂಚಿ, ಗಜುಗು ಚೀಲ ||ಬಿಳಿಯ ಮಣಿಯು ಗುಳ್ಳೆಗಳಿರಲು |ಮಲಯಜಾನು ಲೇಪನ ||ಜಲಜನೇತ್ರ ಕೌಸ್ತುಬಾಧಿ-|ಗಳದಿ ಸ್ವರಗಳೊಪ್ಪುತಿರಲು ||ಲಲಿತವೇಣುಕಲ್ಪನೆಯಲಿ ಗೋ-|ವಳರೆಲ್ಲರು ಕುಣಿಯಲು 2ಮಾರವಿ ದೇಸಿ ಗುರ್ಜರಿ ಭೈರವಿ |ಗೌರಿನಾಟಿಸಾವೇರಿ ಆಹೇರಿ ||ಪೂರವಿ ಕಾಂಬೋದಿ ಪಾಡಿ ದೇಶಾಕ್ಷಿ ಶಂ-|ಶಕರಾಭರಣ ರಾಗದಿ ||ಪೂರವಿ ಕಲ್ಯಾಣಿ ವಸಂತ ತೋಡಿ |ವರಾಳಿ ಗುಂಡಕ್ರಿ ಸಾರಂಗ ಸಾಳಗ ||---------------------ಸೋರಟ ಭೂಪಾಳಿ ಶ್ರೀ ರಾಗದಿಂದಲಿ 3ಹರುಷದಿ ಬಾರಿಸುವ ರವಕೆ |ಪುರದ ಸ್ತ್ರೀ ಜನರು ಎಲ್ಲ ||ಮರೆದು ಮಕ್ಕಳ ಮನೆಯ ಕೆಲಸ |ಮರೆದು ಹರಿಯ ಬಳಸಲು ||ಕರಿಯು ಮೃಗವುಕೇಸರಿಶರಭ|ಹರಿಣ ನವಿಲುಉರಗಮೋಹಿಸಿ ||ನೆರೆದು ಮರೆದು ಜಾತಿವೈರವ |ಸ್ವರವ ಕೇಳುತಿರಲು 4ಕರಗೆ ಗಿರಿಯ ಕಲ್ಲು ತರುಗ-|ಳೆರಗಿ ಪಕ್ಷಿ ತತಿಗಳಿರಲು ||ಸುರರುಸುಮನ ಸುರಿಯುತಿರಲು |ಧರೆಯು ಮುದದಿ ಕುಣಿಯುತಿರಲು ||ಶರಧಿಉಕ್ಕಿಸರಿತುಸೊಕ್ಕಿ |ಪುರರಿಪುವಿಧಿಪೊಗಳುತಿರಲು ||ವಿರಚಿಸಿದ ಪುರಂದರವಿಠಲ |ಮುರಲಿಗಾನ ಮಾಡಿದ 5
--------------
ಪುರಂದರದಾಸರು
ಮರುಳು ಮಾಡಿಕೊಂಡೆಯಲ್ಲೇ - ಮಾಯಾದೇವಿಯೆ ಪಇರುಳು ಹಗಲು ಏಕವಾಗಿ ಹರಿಯು ನಿನ್ನ ಬಿಡದಪ್ಪಂತೆ ಅ.ಪಜಾÕನಿಗಳುನಿತ್ಯಅನ್ನ-ಪಾನದಿಗಳನ್ನು ಬಿಟ್ಟು |ನಾನಾವಿಧ ತಪವಿದ್ದರು-ಧ್ಯಾನಕೆ ಸಿಲುಕದವನ 1ಸರ್ವಸಂಗವ ಬಿಟ್ಟು ಸಂ-ನ್ಯಾಸಿಯಾದ ಕಾಲಕು |ಸರ್ವದಾ ತನ್ನೆದೆಯ ಮೇಲೆ ಬಿಡದೆ ನಿನ್ನ ಧರಿಸಿಪ್ಪಂತೆ 2ಪ್ರಳಯಕಾಲದಲ್ಲಿ ಆಲ-ದೆಲೆಯ ಮೆಲೆ ಮಲಗಿದ್ದಾಗ |ಹಲವು ಆಭರಣಂಗಳು-ಜಲವು ಆಗಿ ಜಾಣತನದಿ 3ರಂಗನು ಭುಲೋಕದಿ-ಭುಜಂಗ ಗಿರಿಯೊಳಾಲ ಮೇಲು |ಮಂಗಪತಿಯಾಗಿ ನಿನ್ನ-ಅಂಗೀಕರಿಸುವಂತೆ 4ಮಕ್ಕಳ ಪಡೆದರೆ ನಿನ್ನ-ಚೊಕ್ಕತನವು ಪೋಪುದೆಂದು |ಪೊಕ್ಕುಳೊಳು ಮಕ್ಕಳ ಪಡೆದು-ಕಕ್ಕುಲಾತಿ ಪಡುವಂತೆ 5ಎಡಕೆ ಭೂಮಿ ಬಲಕೆ ಶ್ರೀಯು-ಎದುರಿನಲ್ಲಿ ದುರ್ಗಾದೇವಿ |ತೊಡೆಯ ಮೇಲೆ ಲಕುಮಿಯಾಗಿ- ಬಿಡದೆ ಮುದ್ದಾಡುವಂತೆ 6ಎಂದೆಂದಿಗೂ ಮರೆಯೆ ನಿನ್ನಾ-ನಂದದಿ ಜನರಿಗೆಲ್ಲ |ತಂದು ತೋರೇ ಸ್ವಾಧೀನ ಪು-ರಂದರವಿಠಲ ಹರಿಯ 7
--------------
ಪುರಂದರದಾಸರು