ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ಮರೆದೆನೊ ರಂಗ ನಿನ್ನ ಮರೆದೆ ಅನ್ಯರನ್ನಕೆ ಸಿಲುಕಿ ಅನುಗಾಲ ಮರುಳಾಗಿ ಪ ಊಟಕ್ಕೆ ಬರುವಲ್ಲಿ ತನುವುಬ್ಬಿ ಎನ್ನ ಮನ ನಾಟುವುದು ಅವರ ಕಡೆ ಅನುರಾಗದಿ ನೀಟಾದ ಭೋಜನವ ಬಯಸುವೆನು ಯಮರಾಯ ಭಂಗ ಕೇಳಿ ಎಚ್ಚರಿಯದಲೆ1 ಮತ್ತೆ ಕರೆಯಲು ಬರಲು ಉತ್ಸವ ಪಿಡಿಯಲೊಶವೆ ಹೊತ್ತು ಹೊತ್ತಿಗೆ ಅವರ ಕೊಂಡಾಡುತ ಹೆತ್ತವರಿಗಿಂತಲೂ ಅಧಿಕ ನಮಸ್ಕರಿಸುವೆನು ಚಿತ್ತಜನಪಿತ ನಿನ್ನ ಸ್ತೋತ್ರ ಪಠಿಸದಲೆ2 ಎಡೆಯ ಮುಂದೆ ಕುಳಿತು ಎಲ್ಲ ಕಾಲಗಳಿಂದ ಬಿಡದೆ ಮಾಡಿದ ಪುಣ್ಯಪಾಪಗಳೆದು ಎಡಬಲದವರ ಪಙÉ್ತ ನೋಡಿಕೊಳ್ಳುತ ದುಃಖ ಪಡುವೆನೋ ಎನಗಿಷ್ಟು ಕಡಿಮೆ ಹಾಕಿದರೆಂದು3 ಅನ್ನವಿತ್ತವನ ಪಾಪಗಳು ನಿರಂತರದಿ ಅನ್ನದಾಶ್ರಯ ಮಾಡಿಕೊಂಡಿಪ್ಪವು ಚೆನ್ನಾಗಿ ತಿಳಿಯದಲೆ ಚಾತುರ್ಯದಿಂದಲಿ ಧನ್ಯನಾದೆನು ನಾನು ಪರರ ಪಾಪವ ಭುಜಿಸಿ 4 ಒಬ್ಬರೆಡೆ ನೋಡಿಕೊಳಲಧಿಕವಾಗಿದ್ದರೆ ಉಬ್ಬುವೆನು ಊರು ಕೇರಿ ಹಿಡಿಸದಂತೆ ಸುಬ್ಬನ ಸೂರೆಯಂತೆ ಪರರ ಅನ್ನವನುಂಡು ಮೊಬ್ಬಿನಲಿ ದಿನಗಳೆದೆ ದೀನ ಮನಸಿನಲಿ 5 ಒಡಲಿಗೆ ಬಿದ್ದರಸ ಮೂರು ಭಾಗಗಳಾಗಿ ಕಡೆಗೆ ಪೋಗುವುದೊಂದು ನಿಲುವುದೊಂದು ತಡೆಯದಲೆ ಸಂತಾನ ಪಡೆವುದೊಂದೀತೆರ ಕಡೆಗಾಣಲಿಲ್ಲ ಪರರಲಿ ಉಂಡ ಋಣಕೆ6 ಆವಾವ ಬಗೆರುಚಿ ಜಿಹ್ವಗೆ ತೋರುತಿದೆ ಆವಾವ ಬಗೆ ನರಕ ಬೇರೆಯುಂಟು ಮಣಿ ಸರ್ವೇಶ ವಿಜಯವಿಠ್ಠಲ ಸ್ವಾಮಿ ಈ ಜೀವ ಹಿತವಾಗುವಂತೆ ಮಾರ್ಗವ ತೋರು 7
--------------
ವಿಜಯದಾಸ