ಎಚ್ಚರ ಹೇಳುವೆ ನಾನೀಗ ನಿನಗೆ ಎಚ್ಚರಿಕೆಚ್ಚರಿಕೆಸಚ್ಚಿದಾನಂದನೆ ನೀನೆಂದು ತಿಳಿ ನಿನ್ನ ಎಚ್ಚರಿಕೆಚ್ಚರಿಕೆ ಪ
ಈಷಣವೆಂದೆಂಬ ಕಾಡಿನೊಳಗೆ ಹೊಕ್ಕಿ ಎಚ್ಚರಿಕೆಚ್ಚರಿಕೆದೋಷಕಾರಿಗಳು ಇಂದ್ರಿಯನಾಯ್ಗಳು ಎಳೆದಾವು ಎಚ್ಚರಿಕೆಚ್ಚರಿಕೆ 1
ಅಷ್ಟಮದವೆಂಬ ಆನೆ ಕೈಗೆ ಸಿಕ್ಕಿ ಎಚ್ಚರಿಕೆಚ್ಚರಿಕೆದುಷ್ಟ ಪಂಚಕ್ಲೇಶದ ಪೊದೆಗೆ ಸಿಲುಕೀಯೆ ಎಚ್ಚರಿಕೆಚ್ಚರಿಕೆ2
ವ್ಯಸನಗಳೆಂಬ ಕುದುರೆಯ ಕಾಲೊಳಾದೀಯೆ ಎಚ್ಚರಿಕೆಚ್ಚರಿಕೆದುಶ್ಮನರಾರ್ವರ ಕಣ್ಣಿಗೆ ಬಿದ್ದೀಯೆ ಎಚ್ಚರಿಕೆಚ್ಚರಿಕೆ 3
ತಾಪತ್ರಯದ ಹಳ್ಳದಿ ಹರಿದುಹೋದೀಯೆ ಎಚ್ಚರಿಕೆಚ್ಚರಿಕೆಪಾಪವೆಂಟು ಪಾಶವೆಂಬ ಉರುಲಿಗೆ ತಗುಲೀಯೆ ಎಚ್ಚರಿಕೆಚ್ಚರಿಕೆ 4
ಸಂಸಾರ ನಂಬಲು ಕೆಟ್ಟುಹೋಗುವೆ ಎಚ್ಚರಿಕೆಚ್ಚರಿಕೆಹಂಸ ಚಿದಾನಂದ ಗುರುಹೊಂದೆ ಕಡೆಹಾಯುವೆ ಎಚ್ಚರಿಕೆಚ್ಚರಿಕೆ5