ಎಚ್ಚರಿಕೆಚ್ಚರಿಕೆ ಪ.
ನಿಶ್ಚಿಂತೆಯಲಿ ಹರಿಯ ಧ್ಯಾನವ ಮಾಡುವುದಕ್ಕೆ- ಅ.ಪ
ಅಜನು ತೊಳೆದು ಅರ್ಚಿಸುವ ಶ್ರೀಪಾದಕ್ಕೆ ಎಚ್ಚರಿಕೆಧ್ವಜವಜ್ರರೇಖೆಯಿಂದೊಪ್ಪುವ ಪಾದಕ್ಕೆ ಎಚ್ಚರಿಕೆÀವ್ರಜದÀ ಗೋಪಿಯರು ಭಜಿಸುವ ಪಾದಕ್ಕೆ ಎಚ್ಚರಿಕೆಸುಜನರೆಲ್ಲರು ಬಂದು ಎರಗುವ ಪಾದಕ್ಕೆ ಎಚ್ಚರಿಕೆ 1
ಸುರರೆಲ್ಲರು ಬಂದು ಎರಗುವ ಪಾದಕ್ಕೆ ಎಚ್ಚರಿಕೆ ಸರಸಿಜಾಕ್ಷಿ ಸವಿದೊತ್ತುವ ಪಾದಕ್ಕೆ ಎಚ್ಚರಿಕೆಗರುಡನೇರಿ ಮೆರೆವ ಗಂಭೀರ ಪಾದಕ್ಕೆ ಎಚ್ಚರಿಕೆಉರಗನ ಮೇಲೆ ಓಡ್ಯಾಡಿದ ಪಾದಕ್ಕೆ ಎಚ್ಚರಿಕೆ2
ಲಲನೆಯರ ಸ್ತನದಲ್ಲಿ ಕುಣಿದಂಥ ಪಾದಕ್ಕೆ ಎಚ್ಚರಿಕೆಜಲಜಾಸನ ಬಂದು ವಂದಿಪ ಪಾದಕ್ಕೆ ಎಚ್ಚರಿಕೆಶಿಲೆಯ ಸ್ತ್ರೀಯಳ ಮಾಡಿದ ಶೃಂಗಾರ ಪಾದಕ್ಕೆ ಎಚ್ಚರಿಕೆಚೆಲುವ ಹಯವದನನ ಚರಣಾರವಿಂದÀಕ್ಕೆ ಎಚ್ಚರಿಕೆ3