ಬಿಚ್ಚದಿರು.ಬಿಚ್ಚದಿರು ಮುಚ್ಚು ಈ ಬಾಯಿ
ಬಿಚ್ಚಿದ ಬಳಿಕದಕೆ ಎಚ್ಚರವೆ ಇಲ್ಲ ಪ
ಅಲ್ಲ ಅಹುದೆಂಬುವುದು ಎಳ್ಳಷ್ಟು ಇದಕಿಲ್ಲ
ಸುಳ್ಳುಹೇಳುವುದೆಲೊ ಅಳತೆಯೆ ಇಲ್ಲ
ಜೊಳ್ಳು ಮಾತುಗಳ್ಹೇಳಿ ಮಳ್ಳು ಮಾಡಿ ಜನರಲ್ಲಿ
ಬಲ್ಲವೆನಿಸಿಕೊಂಬ ಸೊಲ್ಲೆ ಹುಡುಕುವುದು 1
ಸಲ್ಲದೀ ಆತ್ಮದ ಇಲ್ಲದ ಸುದ್ದಿಯನು
ಎಲ್ಲಿತನಕಲು ಬೇಸರಿಲ್ಲದ್ಹೇಳುವುದು
ಅಲ್ಲ ಅಹುದೆಂಬುದನು ಎಲ್ಲಬಲ್ಲಂಥ ಸಿರಿ
ನಲ್ಲನ ಪಾದಕ್ಕೆ ಅಲ್ಲೆನಿಸುತಿಹ್ಯದು 2
ಮುಚ್ಚುಮರೆಯಿದಕಿಲ್ಲ ಎಚ್ಚರಮೊದಲಿಲ್ಲ
ಕಿಚ್ಚಿನೋಳ್ಬಿದ್ಹೋಗ್ವ ನೆಚ್ಚಿಕಿಲ್ಲ ಕಾಯ
ಅಚ್ಯುತ ಶ್ರೀರಾಮನಂ
ಮುಚ್ಚಿಭಜಿಸಿ ಭವದುರುಲು ಬಿಚ್ಚಿಸಿಕೊಳ್ಳೊ 3