ನಂಬಿ ಕೆಟ್ಟವರಿಲ್ಲವೊ ಸದ್ಗುರುವಿನ
ನಂಬಿ ಕೆಟ್ಟವರಿಲ್ಲವೊ
ನಂಬದೆ ಗುರುವಿನ ಜ್ಞಾನದ ಬೋಧವ
ಹುಂಬತನವ ಮಾಡಿ ಕೆಟ್ಟರೆ ಕೆಡಲಯ್ಯ ಪ
ಕೇಳಬೇಡೆಲೊ ದುಃಖವಾ
ಏಳು ಎಚ್ಚರಗೊಳ್ಳು ಕೀಳುತನವ ಬಿಡು
ಹೇಳಿಕೊಡುವೆನೆಂಬ ಗುರುವಿನ ನುಡಿಯನು 1
ದೇಹಬುದ್ಧಿಯ ಬಿಡಿಸಿ ವಿವೇಕದಿ ದೇವಬುದ್ದಿಯನಿರಿಸಿ
ಸೋಹವೆಂಬುವ ಮಹಾಮಂತ್ರವ ಬೋಧಿಸಿ
ಮೋಹವನೋಡಿಸಿ ಕಾಯುವ ಗುರುವಿನ 2
ಸಂಚಿತ ಮೊದಲಾದ ಕರ್ಮವ ನೀಗಿಸಿ
ಹಂಚಿಕೆಯಿಂದಲಿ ಮುಕ್ತನ ಮಾಡುವ
ಪಂಚಕಸಾಕ್ಷಿ ಶ್ರೀಗುರುವಿನ ಬೋಧವ 3
ಸ್ವಾನುಭವನೀಡುವಾ
ಏನೊಂದು ಬಯಸದೆ ಜ್ಞಾನದಾನವ ಮಾಳ್ಪ
ಜ್ಞಾನಿ ಶಂಕರಗುರುರಾಯನ ನುಡಿಯನು 4