ಗುರುವಂತರ್ಗತ ವಿಜಯ ದಾಸಾ ಕಾಯೋಶರಣರ ಹೃತ್ಸನ್ನಿವಾಸಾ ಪ
ಸುರಮುನಿ ಸುತನಾದ ವರ ಭೃಗ್ವಂಶಜನೆಂದುರೆ ಮೆರೆವನೀಯೊಳ್ ವರದ್ವಿಜನೆನಿಸೀದ ಅ.ಪ.
ಪುರಂದರ ದಾಸ ರೂಪಿಯ | ಸ್ವಾಪದಲಿ ಕಾಣುತ್ತನಲಿದ 1
ಪಾದ | ದಾಸನ್ನ ಮಾತೆ ವಿಶ್ವಾಸದಲೀ ಪಡೆದೆ | ಭಾಸುರ ಉಪದೇಶ ||ಶ್ರೀಶನನುಗ್ರಹಿಸಿ ತನ್ನಯ | ದಾಸ ರೂಪವ ಮರೆಯಗೈಯ್ಯಲುಲೇಸು ಎಚ್ಚರಗೊಂಡು ಪುಳಕೀತ | ಭಾಸುರದ ಸುಸ್ತೋತ್ರಗೈದು 2
ಪಾವನ ವಾನಂದ ತೀರ್ಥ | ಭಾಷ್ಯಭಾವ ಕನ್ನಡದಿ ಪೇಳುತ್ತ |ಜೀವರುದ್ಧರ ಕಾರ್ಯ | ತೀವರ ನಡೆಸುತ್ತಕಾವಕೊಲ್ಲುವ ಗುರು | ಗೋವಿಂದ ವಿಠಲದೇವ ಸರ್ವೋತ್ತಮನು ಪವನನು | ಜೀವರುತ್ತಮನೆಂದು ಸ್ಥಾಪಿಸಿದೇವತತಿ ತರತಮದ ಭಾವವ | ಓವಿ ಪೇಳ್ದ ಮಹಾನುಭಾವ 3