ಎಚ್ಚತ್ತಿರಬೇಕು ಮಾ ಧ್ರುವ
ಎಚ್ಚತ್ತಿರಬೇಕು ನೆಚ್ಚಿ ನಿಜಘನ 1
ರಚ್ಚಿಗೆ ಬಾರದೆ ಬಚ್ಚಿಟ್ಟು ನಿಜಘನ 2
ಕಚ್ಚಿ ಕೈ ಬಾಯಿಲೆ ಹುಚ್ಚಿಟ್ಟು ಹೋಗದೆ 3
ಕಚ್ಚಿಕಿಡದೆ ನೀನು ಕಾಂಚನದಾಶೆಗೆ 4
ನೆಚ್ಚಿಕೊಂಡಿರಬ್ಯಾಡಿ ವ್ಯಚ್ಚಾಗು ಬದುಕಿಗೆ 5
ತುಚ್ಛರ ಮಾತಿಗೆ ನೆಚ್ಚಿ ನಡಿಯದೆ 6
ಮತ್ಸರಕೆ ನೀವು ಹುಚ್ಚಾಗಿ ಹೋಗದೆ 7
ಅಚ್ಯುತ ಭಕ್ತಿಗೆ 8
ಸಚ್ಚಿದಾನಂದನ ನಿಶ್ಚಲರಿಯಲಿಕ್ಕೆ 9
ಎಚ್ಚರಿಸಿದ ಗುರುಪಾದ ನಿಶ್ಚೈಸಲು 10
ಸೂಚಿಸಿ ಹೇಳಿದ ಗುರುದಾಸಮಹಿಪತಿ 11