ಸಾವಧಾನವೆಂದು ಶ್ರುತಿಸಾರುತಿದೆಕೋ
ಭಾವದಿಂದಲಿ ಮನವೆ ನೀ ಎಚ್ಚತ್ತುಕೋ ಧ್ರುವ
ಭವದ ನಿದ್ರಿಗಳೆದು ಸಾವದಾನವಾಗೋ
ನಿವಾಂತ ಕೂಡಲಿಕ್ಯದ ಬಲು ಬೆಳಗೋ
ವಿವೇಕವೆಂಬ ಸ್ಮರಣೆ ಇದೆ ನಿನಗೋ
ಭವಹರ ಗುರುವಿಗೆ ಶರಣಯುಗೋ 1
ಮುಚ್ಚಿದ ಮಾಯದ ಮುಸಕ್ಹಾರಿಸುವದೆ ಙÁ್ಞನ
ಎಚ್ಚತ್ತಮ್ಯಾಲಿದೆ ಖೂನ ಸುವಸ್ತು ಧ್ಯಾನ
ಅಚ್ಯುತಾನಂತನ ಕಾಂಬುದನುಸಂಧಾನ
ಅಚಲವೆಲ್ಲಕ್ಕಿದೆ ಸುಪಥಸಾಧನ 2
ಬೆಳಗಿನ ಬೆಳಗಿದೆ ಬಲು ನಿಶ್ಚಲ
ಒಳಗೆ ಹೊರಗೆ ತೋರುವ ಆನಂದ ಕಲ್ಲೋಳ
ಹೊಳೆವ ಮಹಿಪತಿಸ್ವಾಮಿ ಪ್ರಭೆಯು ಬಹಳ
ಬೆಳಗಾಯಿತು ಗುರುದಯ ಪ್ರಬಳ 3